• Home
  • »
  • News
  • »
  • entertainment
  • »
  • Bollywood: ಬಾತ್​ರೂಮ್​ನಲ್ಲಿ ಕಿಯಾರಾಗೆ ಪ್ರಪೋಸ್‌ ಮಾಡಿದ ವಿಜಯ್‌ ದೇವರಕೊಂಡ! ವಿಡಿಯೋ ವೈರಲ್​

Bollywood: ಬಾತ್​ರೂಮ್​ನಲ್ಲಿ ಕಿಯಾರಾಗೆ ಪ್ರಪೋಸ್‌ ಮಾಡಿದ ವಿಜಯ್‌ ದೇವರಕೊಂಡ! ವಿಡಿಯೋ ವೈರಲ್​

ಕಿಯಾರಾ, ವಿಜಯ್​ ದೇವಕೊಂಡ

ಕಿಯಾರಾ, ವಿಜಯ್​ ದೇವಕೊಂಡ

ಬಾತ್‌ರೂಮ್‌ (Bathroom) ನಲ್ಲಿ ಬಾಲಿವುಡ್‌ ಬೆಡಗಿ ಮತ್ತು ನಟಿಯಾದ ಕಿಯಾರಾ ಅಡ್ವಾಣಿ (Kiara Advani) ಗೆ ಕೆಂಪು ಗುಲಾಬಿ (Red Rose) ಕೊಟ್ಟು ಪ್ರಪೋಸ್‌ (Propose) ಮಾಡಿರೋ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ

  • Share this:

ವಿಜಯ್‌ ದೇವರಕೊಂಡ (Vijay Deverakonda) ಭಾರತ (India) ಚಲನಚಿತ್ರ ರಂಗ ಕಂಡ ಅತ್ಯದ್ಭುತ ನಟರಲ್ಲೊಬ್ಬ ಎಂದ್ರೂ ತಪ್ಪಾಗಲ್ಲ. ಲೈಗರ್‌ (liger) ಸಿನಿಮಾದ ಸೋಲಿನ ನಂತರ ವಿಜಯ್‌ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇಲ್ಲ. ಆದ್ರೆ ಅವರು ಈಗ ಬಾತ್‌ರೂಮ್‌ (Bathroom) ನಲ್ಲಿ ಬಾಲಿವುಡ್‌ ಬೆಡಗಿ ಮತ್ತು ನಟಿಯಾದ ಕಿಯಾರಾ ಅಡ್ವಾಣಿ (Kiara Advani) ಗೆ ಕೆಂಪು ಗುಲಾಬಿ (Red Rose) ಕೊಟ್ಟು ಪ್ರಪೋಸ್‌ (Propose) ಮಾಡಿರೋ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಏನಪ್ಪ ಈ ವಿಜಯ್‌ ಎಷ್ಟು ಹುಡುಗಿರ ಜೊತೆ ಓಡಾಡ್ತಾನೆ ಅನ್ಕೊಬೇಡಿ. 


ಇಷ್ಟು ದಿನ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಜೊತೆ ವಿಜಯ್‌ ಹೆಸರು ತಳುಕು ಹಾಕಿಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ನಂತರ ಅನನ್ಯಾ ಪಾಂಡೆ ಜೊತೆ ಅವರ ಹೆಸರು ಕೇಳಿ ಬಂದಿತ್ತು. ಈಗ ಕಿಯಾರಾ ಅಂತಿದೀರಾ? ಇದು ಹಾಗಲ್ಲ ರೀ, ಕಿಯಾರಾ ಜೊತೆ ವಿಜಯ್‌ ಅವರು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಇದಾಗಿದೆ.


ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ವಿಜಯ್‌- ಕಿಯಾರಾ!


ವಿಜಯ್‌ ದೇವರಕೊಂಡ ಅವರು ಕಿಯಾರಾ ಅಡ್ವಾಣಿಗೆ ಬಾತ್‌ರೂಮ್‌ನಲ್ಲಿ ಕೆಂಪು ಗುಲಾಬಿ ಹಿಡಿದು ಪ್ರಪೋಸ್‌ ಮಾಡಿದ್ದಾರೆ. ಆ ಬಾತ್‌ರೂಮ್‌ ಗ್ರೋ ಗ್ರೀನ್‌  ಆಗಿರುವುದು ವಿಶೇಷ. ಇದು ಕಿಯಾರಾ ಅಡ್ವಾಣಿ ಮತ್ತು ವಿಜಯ್ ದೇವರಕೊಂಡ ಕೈಜೋಡಿಸಿದ ಬ್ರ್ಯಾಂಡ್ ಪ್ರಚಾರದ ಜಾಹೀರಾತಾಗಿದೆ.


ಈ ಜಾಹೀರಾತು ಸ್ಟೈಲಿಶ್ ಆಗಿದೆ ಮತ್ತು ಈ ಸ್ಯಾನಿಟರಿವೇರ್ ಬ್ರಾಂಡ್‌ಗೆ ನೃತ್ಯ ಸಂಯೋಜನೆಯೂ ಇದೆ. ವಿಜಯ್ ಅವರ ಅಭಿಮಾನಿಗಳು ಈ ವೀಡಿಯೊವನ್ನು ನೋಡಿ ಕಮೆಂಟ್‌ಗಳ ಮಹಾಪೂರವನ್ನೆ ಹರಿಬಿಡುತ್ತಿದ್ದಾರೆ. ಆದರೆ, ಕೆಲಸದ ವಿಷಯಕ್ಕೆ ಬಂದರೆ ವಿಜಯ್ ಅವರ ಕೊನೆಯ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಮಖಾಡೆ ಮಲಗಿದ್ದು ಅವರಿಗೊಂದು ಹಿಟ್ ಚಿತ್ರದ ಅವಶ್ಯಕತೆಯಿದೆ.


ಇದನ್ನೂ ಓದಿ: ಬಾಲಿವುಡ್​​ನಲ್ಲಿ ಕೆಜಿಎಫ್ ದಾಖಲೆ ಬ್ರೇಕ್ ಮಾಡ್ತಿದೆ ಕಾಂತಾರ! ತರಣ್ ಆದರ್ಶ್ ಹೇಳಿದ್ದಿಷ್ಟು


ಹಿಂದೆಯೂ ಕೆಲಸ ಮಾಡಿದ್ದ ಜೋಡಿ!


ವಿಜಯ್ ದೇವರಕೊಂಡ ಮತ್ತು ಕಿಯಾರಾ ಅಡ್ವಾಣಿ ಈ ಹಿಂದೆ ಪ್ರೀಮಿಯಂ ವೆಡ್ಡಿಂಗ್ ಬ್ರ್ಯಾಂಡ್‌ಗಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಹಿಂದೆ ವಿಜಯ್ ಅವರು ಅರ್ಜುನ್ ರೆಡ್ಡಿ ಚಿತ್ರದಲ್ಲಿ ಕೆಲಸ ಮಾಡಿದ್ದರೆ ಕಿಯಾರಾ ಅಡ್ವಾಣಿ ಅವರು ಅದರ ರಿಮೇಕ್ ಆಗಿದ್ದ ಕಬೀರ್ ಸಿಂಗ್‌ ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ.


ವಿಜಯ್ ದೇವರಕೊಂಡ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಗ ಎತ್ತರಕ್ಕೆ ಬೆಳೆದ ನಟ. ಸೈಡ್ ರೋಲ್‌ನಲ್ಲಿ ಅಭಿನಯಿಸುವ ಮೂಲಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ವಿಜಯ್ ನಂತರ ಒಂದಷ್ಟು ಸಿನಿಮಾಗಳನ್ನು ಮಾಡಿದ್ರು ಕೂಡ ಅಷ್ಟಾಗಿ ಹೆಸರುವಾಸಿ ಆಗಿರಲಿಲ್ಲಾ.


ಇದನ್ನೂ ಓದಿ: ನಟನೆಗೆ ಎಂಟ್ರಿ ಕೊಡ್ತಿದ್ದಾರೆ ಅಲ್ಲು ಪತ್ನಿ! ಗಂಡನ ಜೊತೆ ಮೊದಲ ಸಿನಿಮಾ?


ಆದರೆ 'ಅರ್ಜುನ್ ರೆಡ್ಡಿ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಅವರಿಗೂ ಅದೃಷ್ಟ ಒಲಿದಿತ್ತು. ಅಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕೂ ಸಾರ್ಥಕವಾಗಿತ್ತು. ಹೀಗೆ 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ತನ್ನ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ವಿಜಯ್ ಮುಂದೆ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ಕಡಿಮೆ ಸಮಯದಲ್ಲೆ ಒಂದೆ ಸಿನಿಮಾದಿಂದ ದೊಡ್ಡ ನಟನಾಗಿ ಬೆಳೆದ ವಿಜಯ್ ದೇವರಕೊಂಡ ಇದೀಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


ಆದರೆ ಬಾಲಿವುಡ್‌ನಲ್ಲಿ ಅವರ ಚೊಚ್ಚಲ ಚಿತ್ರ 'ಲೈಗರ್' ಈ ವರ್ಷ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡ ಸಿನಿಮಾ. ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ಸೋಲು ಕಂಡಿದೆ.

First published: