ಟಾಲಿವುಡ್ನ (Tollywood) ಅರ್ಜುನ್ ರೆಡ್ಡಿ (Arjun Reddy) ಅವರು ಯಾರಿಗೆ ಗೊತ್ತಿಲ್ಲ ಹೇಳಿ? ಸೌತ್ನ ಸ್ಟಾರ್ ನಟನಾಗಿ ಬೆಳೆಯುತ್ತಿರುವ ವಿಜಯ್ ದೇವರಕೊಂಡ (Vijay Deverakonda) ಹೊಸದೇನಾದರೂ ಮಾಡುತ್ತಾ ಇರುತ್ತಾರೆ. ಈ ಬಾರಿ ಅವರು ಅಭಿಮಾನಿಗಳಿಗೋಸ್ಕರ (Fans) ಟ್ರಿಪ್ ಆಯೋಜಿಸಿದ್ದಾರೆ. ಫ್ಯಾನ್ಸ್ಗೋಸ್ಕರ ತಮ್ಮದೇ ಖರ್ಚಿನಲ್ಲಿ ಹಾಲಿಡೇ ಟ್ರಿಪ್ (Holiday Trip) ಇಟ್ಟಿದ್ದಾರೆ. ಇದಕ್ಕೆ ಮುಕ್ತ ಅವಕಾಶ. ಯಾರು ಬೇಕಾದರೂ ಭಾಗವಹಿಸಬಹುದು. ಅವಕಾಶ ಸಿಕ್ಕಿದರೆ ವಿಜಯ್ ಅವರ ಜೊತೆ ಮನಾಲಿ ಪ್ರವಾಸವನ್ನು (Manali Tour) ಸಖತ್ತಾಗಿ ಎಂಜಾಯ್ ಮಾಡಬಹುದು.
ದೇವೆರಸಂಟಾ
ವಿಜಯ್ ದೇವರಕೊಂಡು ಅವರು ಈ ಟ್ರಿಪ್ ಬಗ್ಗೆ ತಿಳಿಸುವ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟ ಕೈಯಲ್ಲಿ ಕಪ್ ಹಿಡಿದು ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಸ್ವತಃ ಟ್ವಿಪ್ ಕುರಿತ ಎಲ್ಲಾ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.
ಹ್ಯಾಪಿ ನ್ಯೂ ಇಯರ್ ಮೈ ಲವ್. ಇದು ದೇವರಸಂಟಾ ಅಪ್ಡೇಡ್. ನಿಮಲ್ಲಿ 100 ಜನರನ್ನು ಪೇಯ್ಡ್ ಟ್ರಿಪ್ ಹಾಲಿಡೇಗೆ ಕರೆದೊಯ್ಯುತ್ತೇನೆ ಎಂದು ಹೇಳಿದ್ದೆ. ಫುಡ್, ಟ್ರಾವೆಲ್, ತಂಗುವ ಖರ್ಚು ಎಲ್ಲವೂ ನನ್ನದೇ. ನಾನು ನಿಮ್ಮಲ್ಲಿ ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದೆ.
View this post on Instagram
ನೀವು 18 ವರ್ಷ ಮೇಲ್ಪಟ್ಟವರಾಗಿರಬೇಕು. ಕ್ಷಮಿಸಿ, 18 ವರ್ಷ ಕಳೆದಿರಲೇಬೇಕು. 18 ವರ್ಷ ಮೇಲ್ಪಟ್ಟಿದ್ದು ನೀವು ನನ್ನನ್ನು ಫಾಲೋ ಮಾಡುತ್ತಿದ್ದರೆ ನನ್ನ ಬಯೋದಲ್ಲಿರುವ ಫಾರ್ಮ್ ಫಿಲ್ ಮಾಡಿ ಕಳುಹಿಸಿ. ನಾನು ಕೂಡಾ ಈ ಪ್ರಯಾಣದ ಭಾಗವಾಗಲಿದ್ದೇನೆ. ಲಾಟ್ಸ್ ಆಫ್ ಲವ್. ಹ್ಯಾಪಿ ನ್ಯೂ ಇಯರ್ ಎಂದಿದ್ದಾರೆ.
ಇದನ್ನೂ ಓದಿ: Yash-KGF 3 Movie: ಕೆಜಿಎಫ್-3 ಚಿತ್ರದ ರಿಲೀಸ್ ಡೇಟ್ ಅನೌನ್ಸ್!
ಅಂತೂ ಈ ಟ್ರಿಪ್ ಬಗ್ಗೆ ವಿಜಯ್ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿ ಫಾರ್ಮ್ಗಳನ್ನು ಫಿಲ್ ಮಾಡುತ್ತಿದ್ದಾರೆ. ನಿಮಗೂ ಆಸಕ್ತಿ ಇದ್ದರೆ ಇಲ್ಲಿ ನೀವು ಫಾರ್ಮ್ ಫಿಲ್ ಮಾಡಬಹುದು.
ಫಾರ್ಮ್ನಲ್ಲಿ ಏನೇನಿದೆ?
ಫಾರ್ಮ್ನಲ್ಲಿ ನಿಮ್ಮ ಮೇಲ್ ಐಡಿ, ಹೆಸರು, ಫಸ್ಟ್ ನೇಮ್, ಲಾಸ್ಟ್ ನೇಮ್, ಜನ್ಮ ದಿನಾಂಕ, ಮೇಲ್ ಐಡಿ, ಲಿಂಗ, ಸಂಪರ್ಕ ಸಂಖ್ಯೆ, ಕ್ವಾಲಿಫಿಕೇಷನ್, ವಿಳಾಸ, ನಗರ, ರಾಜ್ಯ, ಇನ್ಸ್ಟಾಗ್ರಾಮ್, ಫೇಸ್ಬುಕ್, ಟ್ವಿಟರ್ ಅಥವಾ ಇನ್ಯಾವುದೇ ಸೋಷಿಯಲ್ ಮೀಡಿಯಾ ಖಾತೆಯ ಲಿಂಕ್, ಆಧಾರ್ ಕಾರ್ಡ್ ನಂಬರ್, ಈ ಟ್ರಿಪ್ ಬಗ್ಗೆ ನಿಮ್ಮ ಅನಿಸಿಕೆ ಇವಿಷ್ಟನ್ನು ಬರೆಯಬೇಕು. ಕೊನೆಗೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದರೆ ಸಾಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ