Liger Movie Review: ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ! ಏನಂತಿದ್ದಾರೆ ನೆಟ್ಟಿಗರು?

Liger Movie Review: ವಿಜಯ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಕುರಿತು ಟ್ವಿಟ್ಟರ್‌ನಲ್ಲಿ ವಿಮರ್ಶೆಗಳ ಮಹಾಪೂರವೇ ಹರಿದು ಬರುತ್ತಿದೆ. ಒಂದು ರೀತಿಯ ಮಿಶ್ರ ಪ್ರತಿಕ್ರಿಯೆ ಚಿತ್ರಕ್ಕೆ ವ್ಯಕ್ತವಾಗಿದ್ದು ಚಿತ್ರದ ಮೇಲೆ ಹಾಗೂ ವಿಜಯ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳು ತೀರಾ ನಿರಾಸೆ ವ್ಯಕ್ತಪಡಿಸಿರುವುದು ಕಾಮೆಂಟ್‌ಗಳಿಂದ ವ್ಯಕ್ತವಾಗಿದೆ.

ಲೈಗರ್ ಸಿನೆಮಾ

ಲೈಗರ್ ಸಿನೆಮಾ

  • Share this:
ತೆಲುಗು ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಹಾಗೂ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ (Ananya Panday) ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಲೈಗರ್ (Liger) ಇಂದು (ಆಗಸ್ಟ್ 25 ) ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಪುರಿ ಜಗನ್ನಾಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಕ್ರೀಡೆ ಹಾಗೂ ಆ್ಯಕ್ಷನ್ ಪ್ರಧಾನ ಚಿತ್ರವಾಗಿರುವ ಲೈಗರ್‌ನಲ್ಲಿ ವಿಜಯ್ ಅವರು ಎಮ್‌ಎಮ್‌ಎ ಫೈಟರ್ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಅಲ್ಲದೆ ಮಾಜಿ ವಿಶ್ವ ಹೆವಿವೇಟ್ ಚಾಂಪಿಯನ್ ಬಾಕ್ಸರ್ ಮೈಕ್ ಟೈಸನ್ (Boxer Mike Tyson) ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಲೈಗರ್ ಸಿನೆಮಾದ ಕಥಾ ಹಂದರ

ಚಿತ್ರದ ಟ್ರೈಲರ್‌ನಲ್ಲಿ ಲೈಗರ್ ಕಥಾ ಹಂದರದ ಝಲಕ್ ಅನ್ನು ನೀಡಲಾಗಿದ್ದು ಮುಂಬೈಯ ರಸ್ತೆಯಲ್ಲೇ ಜನಿಸಿ ಬೆಳೆದು ವಿಶ್ವ ಚಾಂಪಿಯನ್ ಕಿಕ್‌ಬಾಕ್ಸಿಂಗ್ ಪ್ರತಿಭೆಯಾಗುವ ನಾಯಕನ ಕಥೆಯನ್ನು ಹೊಂದಿದೆ. ಚಿತ್ರದ ನಾಯಕ ದೈಹಿಕವಾಗಿ ಬಲಾಢ್ಯನಾಗಿದ್ದರೂ ಮಾನಸಿಕವಾಗಿ ಕುಗ್ಗಿರುತ್ತಾನೆ ಹಾಗೂ ದುರ್ಬಲನಾಗಿರುತ್ತಾನೆ. ತಾನು ಪ್ರೀತಿಸುವ ಹುಡುಗಿಗೆ ಪ್ರೀತಿ ವ್ಯಕ್ತಪಡಿಸುವ ತಾಕತ್ತು ಕೂಡ ಅವನಿಗಿರುವುದಿಲ್ಲ. ಒಂದು ರೀತಿಯ ಮಾನಸಿಕ ಸಂದಿಗ್ಧತೆಯಲ್ಲಿ ನಾಯಕ ತೊಳಲಾಡುತ್ತಿರುತ್ತಾನೆ.

ಚಿತ್ರವು ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಇಂದು ತೆರೆಕಂಡಿದೆ. ಆದರೂ ಹಿಂದಿಯ ಲೈಗರ್ ಚಿತ್ರವು ರಾತ್ರಿ ಮಾತ್ರ (ಆಗಸ್ಟ್ 25) ಪ್ರದರ್ಶನಗೊಳ್ಳಲಿದ್ದು ಶುಕ್ರವಾರದಿಂದ (ಆಗಸ್ಟ್ 26) ರಿಂದ ನಿಯಮಿತ ಪ್ರದರ್ಶನ ಕಾಣುತ್ತದೆ. ಇನ್ನುಳಿದಂತೆ ಎಲ್ಲಾ ಭಾಷೆಗಳಲ್ಲಿ ಲೈಗರ್ ಚಿತ್ರವು ಆಗಸ್ಟ್ 25 ರಂದೇ ಪ್ರದರ್ಶನಗೊಂಡಿದೆ.

ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ

ವಿಜಯ ದೇವರಕೊಂಡ ಅಭಿನಯದ ಲೈಗರ್ ಚಿತ್ರದ ಕುರಿತು ಟ್ವಿಟ್ಟರ್‌ನಲ್ಲಿ ವಿಮರ್ಶೆಗಳ ಮಹಾಪೂರವೇ ಹರಿದು ಬರುತ್ತಿದೆ. ಒಂದು ರೀತಿಯ ಮಿಶ್ರ ಪ್ರತಿಕ್ರಿಯೆ ಚಿತ್ರಕ್ಕೆ ವ್ಯಕ್ತವಾಗಿದ್ದು ಚಿತ್ರದ ಮೇಲೆ ಹಾಗೂ ವಿಜಯ್ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳು ತೀರಾ ನಿರಾಸೆ ವ್ಯಕ್ತಪಡಿಸಿರುವುದು ಕಾಮೆಂಟ್‌ಗಳಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: Avatar: ಚಿತ್ರಮಂದಿರಗಳಲ್ಲಿ ಮತ್ತೆ ಅವತಾರ್ ದರ್ಶನ! ಚಿತ್ರದ ಹೊಸ ಟ್ರೇಲರ್ ಹೇಗಿದೆ?

ಕೆಲವು ಅಭಿಮಾನಿಗಳು ವಿಜಯ್ ಅಭಿನಯವನ್ನು ಹಾಡಿ ಹೊಗಳಿದ್ದರೆ ಇನ್ನು ಕೆಲವರು ಇದಕ್ಕಿಂತ ಬೇರೆ ಪಾತ್ರವನ್ನು ವಿಜಯ್ ಆಯ್ದುಕೊಳ್ಳಬಹುದಿತ್ತು ಎಂಬ ಅತೃಪ್ತಿಯನ್ನು ಪ್ರದರ್ಶಿಸಿದ್ದಾರೆ. ಪುರಿ ಜಗನ್ನಾಥರು ಸೋಮಾರಿತನದ ನಿರ್ದೇಶನವನ್ನು ಚಿತ್ರದಲ್ಲಿ ತೋರಿಸಿದ್ದು ಸ್ಕ್ರಿಪ್ಟ್ ಕೂಡ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದು ಹೇಳಿದ್ದಾರೆ.

ಅನನ್ಯಾ ಪಾಂಡೆ ಕೂಡ ಚಿತ್ರದಲ್ಲಿ ನೀರಸವಾಗಿ ಅಭಿನಯಿಸಿದ್ದು ಕೆಲವೊಂದೆಡೆ ವಿಜಯ್ ಅಭಿನಯ ತೀರಾ ಅತಿರೇಕ ಎಂದೆನಿಸುವಂತಿದೆ. ಅಂತೂ ಇಂತೂ ವೀಕ್ಷಕರು ಚಿತ್ರ ಹಾಗೂ ಚಿತ್ರದಲ್ಲಿರುವ ಅಭಿನಯವು ಅವಕಾಶವನ್ನು ಹಾಳುಮಾಡಿದಂತೆ ತೋರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಲೈಗರ್ ಕುರಿತಾದ ಕಾಮೆಂಟ್‌ಗಳು

ಆ್ಯಕ್ಷನ್ ದೃಶ್ಯಗಳು, ವಿಜಯ್ ಅವರ ಹಾರ್ಡ್‌ವರ್ಕ್ ಹಾಗೂ ರಮ್ಯಕೃಷ್ಣ ಅಭಿನಯ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದರೂ ಚಿತ್ರವು ಉತ್ತಮ ಕಥೆಯನ್ನು ಹೊಂದಿಲ್ಲ ಅಂತೆಯೇ ಹಾಡು ಕೂಡ ಮನಮೋಹಕವಾಗಿಲ್ಲ ಎಂಬುದಾಗಿ ಸಿನಿ ಪ್ರಿಯರೊಬ್ಬರು ಟ್ವಿಟ್ಟರ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ. ಚಿತ್ರದ ಮೊದಲಾರ್ಧ ಸಾಮಾನ್ಯವಾಗಿದ್ದು ವಿಜಯ್ ದೇವರಕೊಂಡ ಅಭಿನಯವೇ ಚಿತ್ರದಲ್ಲಿ ಸಮ್ಮಿಳಿತಗೊಂಡಿದ್ದು ಪುರಿ ನಿರ್ದೇಶನದ ಸುಳಿವೇ ಇಲ್ಲ. ಕೆಲವೊಂದು ದೃಶ್ಯಾವಳಿಗಳು ಅತಿರೇಕವಾಗಿದೆ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.Gone case..Not the pan india introduction vijay should get. Other than his screen presence nothing worked,pathetic writing and ananya pandya is a big dud as heroine..too many cringe scenes, so so music overall a bad film. 2/5 #Ligerಚಿತ್ರವು ಬ್ಲಾಕ್‌ಬಸ್ಟರ್ ಆಗಲಿದ್ದು ವಿಜಯ್ ಸಖತ್ತಾಗಿ ಅಭಿನಯಿಸಿದ್ದಾರೆ ಎಂಬ ಧನಾತ್ಮಕ ಕಾಮೆಂಟ್‌ಗಳಿಗೂ ಟ್ವಿಟ್ಟರ್‌ನಲ್ಲಿ ಬರವಿಲ್ಲ. ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ ಹಾಗೂ ಬಾಕ್ಸರ್‌ನ ಜೀವನವನ್ನು ಚಿತ್ರವು ಸುಂದರವಾಗಿ ಕಟ್ಟಿಕೊಟ್ಟಿದೆ. ಅನನ್ಯಾ ಪಾಂಡೆ ಅಭಿನಯ ಕೂಡ ಆಕರ್ಷಣೀಯವಾಗಿದ್ದು ನಟಿ ಬೋಲ್ಡ್ ಆಗಿ ನಟಿಸಿದ್ದಾರೆ ಎಂಬುದು ಇನ್ನೊಂದು ಕಾಮೆಂಟ್ ಆಗಿದೆ. 

ಪುರಿ ಜಗನ್ನಾಥ ಮತ್ತೊಮ್ಮೆ ತಮ್ಮ ಹಳೆಯ ಫಾರ್ಮ್‌ಗೆ ಬಂದಿದ್ದು, ಸ್ಕ್ರಿಪ್ಟ್, ಡೈಲಾಗ್, ಆ್ಯಕ್ಷನ್ ದೃಶ್ಯಗಳು ಸುಂದರವಾಗಿ ಮೂಡಿಬಂದಿದೆ. ಅನನ್ಯಾ ಚಿತ್ರದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ ಅಂತೆಯೇ ವಿಜಯ್ ಕೂಡ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದು ಇನ್ನೊಬ್ಬರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಫ್ಲಾಪ್ ಸಿನಿಮಾ ವಿಜಯ್ ಹಾಗೂ ಅನನ್ಯಾಗೆ ಅಭಿನಯ ಏನೆಂಬುದೇ ಗೊತ್ತಿಲ್ಲ ಎಂಬ ಕಾಮೆಂಟ್‌ಗಳೂ ಟ್ವಿಟ್ಟರ್‌ನಲ್ಲಿ ತುಂಬಿದೆ.

ಇದನ್ನೂ ಓದಿ:  Vijay Deverakonda: ನಿಹಾರಿಕಾ ಜೊತೆ ವಿಜಯ್ ದೇವರಕೊಂಡ ಫೈಟಿಂಗ್! ವಿಡಿಯೋ ವೈರಲ್

100 ಕೋಟಿ ರೂಪಾಯಿಗಳ ಭರ್ಜರಿ ಬಜೆಟ್‌ ನಲ್ಲಿ ತಯಾರಾದ ಸಿನೆಮಾ

ಒಟ್ಟಿನಲ್ಲಿ ಸಿನಿ ಪ್ರೇಕ್ಷಕರಿಗೆ ಚಿತ್ರವು ಅಷ್ಟೊಂದು ಮನಮುಟ್ಟುವಂತಿರಲಿಲ್ಲ ಎಂಬುದು ಚಿತ್ರದ ಮಿಶ್ರ ಪ್ರತಿಕ್ರಿಯೆಗಳಿಂದ ವ್ಯಕ್ತವಾಗಿದೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಪುರಿ ಕನೆಕ್ಟ್ಸ್ ನಿರ್ಮಿಸಿರುವ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರವು 100 ಕೋಟಿ ರೂಪಾಯಿಗಳ ಭರ್ಜರಿ ಬಜೆಟ್‌ನಲ್ಲಿ ತಯಾರಾಗಿದೆ ಎಂದು ವರದಿಯಾಗಿದೆ. ಚಿತ್ರದ ಪ್ರದರ್ಶನ ಸಮಯ 2 ಗಂಟೆ 20 ನಿಮಿಷಗಳು, ಮೊದಲಾರ್ಧವು 1 ಗಂಟೆ 15 ನಿಮಿಷಗಳು ಮತ್ತು ದ್ವಿತೀಯಾರ್ಧವು 1 ಗಂಟೆ 5 ನಿಮಿಷಗಳು. IANS ವರದಿ ಪ್ರಕಾರ ಚಿತ್ರದಲ್ಲಿ ಏಳು ಫೈಟ್‌ಗಳು ಮತ್ತು ಆರು ಹಾಡುಗಳಿವೆ.
Published by:Ashwini Prabhu
First published: