• Home
  • »
  • News
  • »
  • entertainment
  • »
  • Rashmika-Vijay Deverakonda: ಲೈವ್ ಮಾಡಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ! ವಿಜಯ್ ದೇವರಕೊಂಡ ಜೊತೆ ಫುಲ್ ಡೇಟಿಂಗ್!?

Rashmika-Vijay Deverakonda: ಲೈವ್ ಮಾಡಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ! ವಿಜಯ್ ದೇವರಕೊಂಡ ಜೊತೆ ಫುಲ್ ಡೇಟಿಂಗ್!?

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ

ಹೊಸ ವರ್ಷದ ಆರಂಭದಲ್ಲೇ ರಶ್ಮಿಕಾ ಮಂದಣ್ಣ ರೆಸಾರ್ಟ್​ ನಲ್ಲಿದ್ದುಕೊಂಡು ಇನ್ ಸ್ಟಾಗ್ರಾಮ್​ನಲ್ಲಿ ಲೈವ್ ಹೋಸ್ಟ್​ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

  • Share this:

ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ (Rashmika Mandanna) ಕೇವಲ ತನ್ನ ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ವೈಯಕ್ತಿಕ ವಿಚಾರಗಳಲ್ಲೂ ಸುದ್ದಿಯಾಗ್ತಾರೆ. ವಿಜಯ್​ ದೇವರಕೊಂಡ (Vijay Deverakonda) ಜೊತೆ ಡೇಟಿಂಗ್​ ಸುದ್ದಿ ಅನೇಕ ವರ್ಷಗಳಿಂದ ಹರಿದಾಡುತ್ತಿದೆ. ಇದೀಗ ನ್ಯೂ ಇಯರ್​ ಸೆಲೆಬ್ರೇಷನ್​ (New Year Celebration) ಸಹ ಇಬ್ಬರು ಒಟ್ಟಿಗೆ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಇಬ್ಬರು ಒಂದೇ ಸ್ಥಳದಲ್ಲಿರೋ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಈ ನಡುವೆ ರಶ್ಮಿಕಾ ಮಂದಣ್ಣ ಲೈವ್​ ವಿಡಿಯೋ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾರೆ. 


ರೆಸಾರ್ಟ್​ನಲ್ಲಿ ಕುಳಿತು ರಶ್ಮಿಕಾ ಲೈವ್​


ಹೊಸ ವರ್ಷಕ್ಕೆಂದು ರಶ್ಮಿಕಾ ಮಂದಣ್ಣ ರೆಸಾರ್ಟ್​ ನಲ್ಲಿದ್ದುಕೊಂಡು ಇನ್ ಸ್ಟಾ ಗ್ರಾಮ್​ನಲ್ಲಿ ಲೈವ್ ಹೋಸ್ಟ್​ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಿಷನ್ ಮಜ್ನು ಸಿನಿಮಾ ಬಗ್ಗೆ ಕೂಡ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.


Kannada Actress Rashmika Mandanna got Troll Again
ರಶ್ಮಿಕಾ ಮತ್ತು ವಿಜಯ್ ಒಂದೇ ಹೋಟೆಲ್​ನಲ್ಲಿ ಇದ್ರೇ?


ವಿಡಿಯೋ ಹಿಂದೆ ವಿಜಯ್ ದೇವರಕೊಂಡ ವಾಯ್ಸ್​


ಅಭಿಮಾನಿಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸುತ್ತಿದ್ರು, ನಿಮ್ಮ ವಯಸ್ಸು ಎಷ್ಟು ಎಂದು ಫ್ಯಾನ್ ಕೇಳಿದ್ದಾರೆ. ಈಗ ನನಗೆ 26 ವರ್ಷ ಎಂದು ರಶ್ಮಿಕಾ ಹೇಳಿದ್ದಾರೆ. ಈ ಲೈವ್​ ವಿಡಿಯೋ ಹಿಂದೆ ಒಬ್ಬ ಗಂಡಸಿನ ಧ್ವನಿ ಕೇಳಿ ಬಂದಿದೆ. ಈ ವಾಯ್ಸ್ ಪಕ್ಕಾ ವಿಜಯ್​ ದೇವರಕೊಂಡ ಅವರದ್ದೇ ಎಂದು ನೆಟ್ಟಿಗರು ಕಂಡು ಹಿಡಿದಿದ್ದಾರೆ. ​



ಇನ್ನು ಕೆಲವರು ಈ ವಾಯ್ಸ್​  ವಿಜಯ್ ದೇವರಕೊಂಡದ್ದೇ ಎಂದು ಬರೆದಿದ್ದಾರೆ. VD ಧ್ವನಿ  ಎಂದು ಟ್ವಿಟ್ಟರ್ ಬಳಕೆದಾರರು ಬರೆದಿದ್ದಾರೆ. ಹೌದು ಇದು ವಿಡಿ ಅಣ್ಣನ ಧ್ವನಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.



ವಿಜಯ್​ ದೇವರಕೊಂಡ ಫೋಟೋ ಶೇರ್​


ವಿಜಯ್ ದೇವರಕೊಂಡ ಕೂಡ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ.  ಫೋಟೋ ಇಬ್ಬರೂ ಒಂದೇ ಪೂಲ್​ನಲ್ಲಿದ್ದರು ಎನ್ನುವುದನ್ನು ರಿವೀಲ್ ಮಾಡಿದೆ. ಸೇಮ್ ಪ್ಲೇಸ್, ಸೇಮ್ ಟೈಮಿಂಗ್​ನಲ್ಲಿ ಪರಸ್ಪರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.


ರಶ್ಮಿಕಾ- ವಿಜಯ್ ಸಿನಿಮಾಗಳು ಸೂಪರ್​ ಹಿಟ್​


ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ, ಡಿಯರ್ ಕಾಮ್ರೆಡ್​ ಸಿನಿಮಾಗಳಲ್ಲಿ​ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದ್ದು,  ಇಬ್ಬರಿಗೂ ಒಳ್ಳೆ ಜನಪ್ರಿಯತೆ ತಂದು ಕೊಟ್ಟಿದೆ.


ಸಾಲು ಸಾಲು ಸಿನಿಮಾದಲ್ಲಿ ರಶ್ಮಿಕಾ ಬ್ಯುಸಿ


ಟಾಲಿವುಡ್​ನ ಸೂಪರ್ ಹಿಟ್​ ಸಿನಿಮಾ ಪುಪ್ಪ ಯಶಸ್ಸಿನ ಬಳಿಕ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ ಸಿನಿಮಾಗಳಲ್ಲಿ (Bollywood Movies) ಅಭಿನಯಿಸುತ್ತಿದ್ದಾರೆ. ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಿ ಅಮಿತಾಭ್​ ಜೊತೆಯೇ ಮೊದಲ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ರಶ್ಮಿಕಾ ಮಂದಣ್ಣ ಪಾಲಾಯ್ತು.


Kannada Actress Rashmika Mandanna got Troll Again


ಇದನ್ನೂ ಓದಿ: Rashmika-Samantha: ಸಮಂತಾ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್​​; ಸ್ಯಾಮ್​ ಕಾಯಿಲೆ ಬಗ್ಗೆ ರಶ್ಮಿಕಾ ಮಂದಣ್ಣ ಮಾತು


ತಮಿಳಿನ ವರಿಸು ಚಿತ್ರದ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ತೊಡಗಿಕೊಂಡಿದ್ದಾರೆ. ಇದೆ ವೇಳೆ ಸಂದರ್ಶನವೊಂದರಲ್ಲಿ ಮಾತಾಡಿದ ರಶ್ಮಿಕಾ, ನಟಿ ಸಮಂತಾ ರುತ್​ ಪ್ರಭು ಬಗ್ಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಒಳ್ಳೆ ಹೃದಯವುಳ್ಳ ವ್ಯಕ್ತಿ ಎಂದು ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: