Vijay Deverakonda: ಥಿಯೇಟರ್​ನಲ್ಲಿ ಸದ್ದು ಮಾಡ್ತಿಲ್ಲ ಲೈಗರ್; ಸಿನಿಮಾ ನೋಡಿ ಹೊರ ಬಂದು ಕಣ್ಣೀರು ಹಾಕಿದ್ರಾ ವಿಜಯ್!?

ಲೈಗರ್ ವಿಜಯ್​ ದೇವರಕೊಂಡ ಅವರ ಚೊಚ್ಚಲ ಪ್ಯಾನ್-ಇಂಡಿಯಾ ಚಿತ್ರವಾಗಿತ್ತು. ಹೆಚ್ಚು ನಿರೀಕ್ಷೆ ಹೊಂದಿದ್ದ ಚಿತ್ರ ಲೈಗರ್​, ಬಿಡುಗಡೆ ಬಳಿಕ ಸದ್ದು ಮಾಡಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಲೈಗರ್​ ಕಳಪೆ ಪ್ರದರ್ಶನವು ವಿಜಯ್‌ಗೆ ಬೇಸರ ಉಂಟು ಮಾಡಿದೆ

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

  • Share this:
ವಿಜಯ್ ದೇವರಕೊಂಡ ಇತ್ತೀಚೆಗೆ ಬಿಡುಗಡೆಯಾದ ತಮ್ಮ ಚಿತ್ರ ಲೈಗರ್ (Liger) ಚಿತ್ರವನ್ನು ಥಿಯೇಟರ್‌ನಲ್ಲಿ (Theater) ನೋಡಿದ ಬಳಿಕ ಫುಲ್ ಅಪ್ ಸೆಟ್​ ಆಗಿದ್ದಾರಂತೆ.  ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ವಿಜಯ್​ ದೇವರಕೊಂಡ (Vijay Deverakonda) ಭರ್ಜರಿ ಪ್ರಚಾರ ಮಾಡಿದ್ರು.  ಬಿಡುಗಡೆ ಬಳಿಕ ಚಿತ್ರ ನಿರೀಕ್ಷಿತ ಸಕ್ಸಸ್​ ಕಾಣಲಿಲ್ಲ. ಮೊದಲ ದಿನವೇ ಸಿನಿಮಾ ಬಗ್ಗೆ ನೆಗೆಟಿವ್​ ಕಾಮೆಂಟ್​ ಕೇಳಿ ಬಂತು,  ಹೈದರಾಬಾದ್‌ನ (Hyderabad) ಸುದರ್ಶನ್ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದ ವಿಜಯ್​ ದೇವರಕೊಂಡ ಬೇಸರದಿಂದ ಹೊರ ನಡೆದಿದ್ದಾರೆ. 

ಬಾಕ್ಸ್ ಆಫೀಸ್​ನಲ್ಲಿ ಕಳಪೆ ಪ್ರದರ್ಶನ

ಲೈಗರ್ ವಿಜಯ್​ ದೇವರಕೊಂಡ ಅವರ ಚೊಚ್ಚಲ ಪ್ಯಾನ್-ಇಂಡಿಯಾ ಚಿತ್ರವಾಗಿತ್ತು. ಹೆಚ್ಚು ನಿರೀಕ್ಷೆ ಹೊಂದಿದ್ದ ಚಿತ್ರ ಲೈಗರ್​, ಬಿಡುಗಡೆ ಬಳಿಕ ಸದ್ದು ಮಾಡಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಲೈಗರ್​ ಕಳಪೆ ಪ್ರದರ್ಶನವು ವಿಜಯ್‌ಗೆ ಬೇಸರ ಉಂಟು ಮಾಡಿದೆ ಎಂದು ಬಾಲಿವುಡ್‌ ಲೈಫ್.ಕಾಮ್ ವರದಿ ಮಾಡಿದೆ.

ಥಿಯೇಟರ್​​ನಲ್ಲಿ ಕೇಳಿ ಬರ್ತಿಲ್ಲ ಶಿಳ್ಳೆ-ಚಪ್ಪಾಳೆ

ಹೈದರಾಬಾದ್‌ನಲ್ಲಿ ಲಿಗರ್‌ನನ್ನು ವೀಕ್ಷಿಸಿದ ನಂತರ ವಿಜಯ್ ದೇವರಕೊಂಡ ಅಳುತ್ತಿದ್ದಾರೆ ಎಂದು ಟ್ರ್ಯಾಕ್ ಟಾಲಿವುಡ್ ವರದಿ ಮಾಡಿದೆ. ಥಿಯೇಟರ್​ನಲ್ಲಿ ಪ್ರೇಕ್ಷಕರ ಮೌನ ಹಾಗೂ ಉತ್ಸಾಹವಿಲ್ಲದ ಪ್ರತಿಕ್ರಿಯೆ ಅವರ ಮನಸ್ಸನ್ನು ಗಾಸಿಗೊಳಿಸಿದೆ. ಹೀಗಾಗಿ ವಿಜಯ್​ ದೇವರಕೊಂಡ ಥಿಯೇಟರ್​ನಿಂದ ಬೇಸರದಲ್ಲೇ ಹೊರ ಹೋಗಿದ್ದಾರೆ.

ಇದನ್ನೂ ಓದಿ: Liger Movie: ಲೈಗರ್ ಸಿನಿಮಾಗಾಗಿ ವಿಜಯ್, ಅನನ್ಯಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಾಕ್ಸ್​ ಆಫೀಸ್​ನಲ್ಲಿ ಕಳಪೆ ಪ್ರದರ್ಶನ
ಚಾರ್ಮಿ ಲೈಗರ್ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದರು ಕಳೆದ ವಾರ ಬಿಡುಗಡೆಯಾದಾಗ ಲೈಗರ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನೀರಸ ಪ್ರತಿಕ್ರಿಯೆಯನ್ನು ಪಡೆಯಿತು. ಹಿಂದಿಯಲ್ಲೂ ಕಳೆದ ವಾರ ಬಿಡುಗಡೆಯಾಗಿದ್ದ ಈ ಚಿತ್ರ ಶುಕ್ರವಾರ ಕೇವಲ 4.50 ಕೋಟಿ (ಹಿಂದಿ ಆವೃತ್ತಿ) ಕನೆಕ್ಷನ್​ ಆಗಿದೆ.




ಓಟಿಟಿಗಳ ಬಗ್ಗೆ ಮಾತಾಡಿ ಚಾರ್ಮಿ, ಜನರು ಮನೆಯಲ್ಲಿಯೇ ಕುಳಿತುಕೊಳ್ಳುವ ಮೂಲಕ ಒಂದೇ ಕ್ಲಿಕ್‌ನಲ್ಲಿ ಚಿತ್ರ ನೋಡಲು ಬಯಸುತ್ತಿದ್ದಾರೆ. ಇಡೀ ಕುಟುಂಬವು ಟಿವಿಯಲ್ಲಿ ಅತಿ ದೊಡ್ಡ ಬಜೆಟ್ ಚಲನಚಿತ್ರ ನೋಡಬಹುದು. ಹೀಗಾಗಿ ಜನರು ಥಿಯೇಟರ್‌ಗಳಿಗೆ ಬರುವುದಿಲ್ಲ ಎಂದು ಚಾರ್ಮ್ ಫ್ರೀ ಪ್ರೆಸ್ ಜರ್ನಲ್‌ಗೆ ತಿಳಿಸಿದರು.

ಲೈಗರ್ ಚಿತ್ರ ಬಿಡುಗಡೆಗೆ ತಡವಾಗಿದ್ದು ಯಾಕೆ?

ಲೈಗರ್ ಚಿತ್ರ ಬಿಡುಗಡೆಯಲ್ಲಿನ ಬಹು ವಿಳಂಬ ಕೂಡ ಚಿತ್ರದ ಮೇಲೆ ಪರಿಣಾಮ ಬೀರಿದಿಯಾ ಅನ್ನೋ ಪ್ರಶ್ನೆಗೆ ಮಾತಾಡಿದ ಚಾರ್ಮಿ, ನಾವು 2020ರ ಜನವರಿಯಲ್ಲಿ ಲಿಗರ್‌ನ ಮಾತುಕತೆ ಆರಂಭಿಸಿದೆವು, ಬಳಿಕ ನಾವು ಕರಣ್ ಜೋಹರ್ ಅವರನ್ನು 2019ರಲ್ಲಿ ಭೇಟಿಯಾದೆವು. ಬಳಿಕ ನಾವು ಮೂರು ವರ್ಷಗಳ ಕಾಲ ರಿಲೀಸ್ ತಡೆಹಿಡಿದಿದ್ದೇವೆ. ಏಕೆಂದರೆ ಲೈಗರ್ ಥಿಯೇಟ್ರಿಕಲ್ ಬಿಡುಗಡೆಯಾಗಬೇಕು ಅನ್ನೋದು ನಮ್ಮ ಆಸೆಯಾಗಿತ್ತು. ಮೊದಲ ಮತ್ತು 2ನೇ ಲಾಕ್‌ಡೌನ್‌ಗಳು, 3ನೇ ವೇವ್​ ಕೊರೊನಾದಿಂದ ಚಿತ್ರ ರಿಲೀಸ್​​ ತಡವಾಯ್ತು ಎಂದು ಚಾರ್ಮಿ ಹೇಳಿದ್ದಾರೆ.

ವಿಮರ್ಶಕರಿಂದ ಟೀಕೆ

ರೌಡಿ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಚಿತ್ರ ಲೈಗರ್, ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಒಳ್ಳೆಯ ನಿರೀಕ್ಷೆಗಳ ನಡುವೆ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ: Liger Collection: ವೀಕೆಂಡ್​​ನಲ್ಲೂ ಥಿಯೇಟರ್​ಗೆ ಬರಲಿಲ್ಲ ಜನ! ಬಾಕ್ಸ್ ಆಫೀಸ್​​ನಲ್ಲಿ ಲೈಗರ್ ಗಳಿಸಿದ್ದು ಎಷ್ಟು!?

ಬಾಕ್ಸ್ ಆಫೀಸ್​ ಕಲೆಕ್ಷನ್​ ಕಳಪೆ




Published by:Pavana HS
First published: