Vijay Deverakonda: ಲೈಗರ್​ಗೆ ಸಿಗ್ತು ಚಿರಂಜೀವಿ ಸಪೋರ್ಟ್! ಇವ್ರೇ ನಮ್ಮ ಸ್ವೀಟೆಸ್ಟ್ ಮೆಗಾಸ್ಟಾರ್ ಎಂದಿದ್ಯಾಕೆ ವಿಜಯ್!?

ಟಾಲಿವುಡ್​​ನಲ್ಲಿ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರ ರಿಲೀಸ್​ಗೂ ಮೊದಲೇ ಭರ್ಜರಿ ಸದ್ದು ಮಾಡಿದೆ. ಲೈಗರ್​ ಚಿತ್ರತಂಡ ಸಿನಿಮಾ ರಿಲೀಸ್​ ಬಳಿಕ ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದೆ. ಈ ಸಿನಿಮಾಗೆ ಮೆಗಾಸ್ಟಾರ್​ ಚಿರಂಜೀವಿ ಬೆಂಬಲ ನೀಡಿ ಶುಭಕೋರಿದ್ದಾರೆ.

ಲೈಗರ್ ಚಿತ್ರಕ್ಕೆ ಶುಭಕೋರಿದ ಚಿರಂಜೀವಿ

ಲೈಗರ್ ಚಿತ್ರಕ್ಕೆ ಶುಭಕೋರಿದ ಚಿರಂಜೀವಿ

  • Share this:
ಟಾಲಿವುಡ್​​ನ ರೌಡಿ ಸ್ಟಾರ್​ ನಟ ವಿಜಯ್ ದೇವರಕೊಂಡ (Vijay Deverakona) ಅಭಿನಯದ ಬಹುನಿರೀಕ್ಷಿತ ಚಿತ್ರ ಲೈಗರ್​​ ನಾಳೆ ತೆರೆ ಮೇಲೆ ಅಬ್ಬರಿಸಲಿದೆ. ಲೈಗರ್​  (Liger)ಗ್ರ್ಯಾಂಡ್​ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ. ಲೈಗರ್​ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ವಿಜಯ್​ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ( Puri Jagannadh) ಕಾತುರದಿಂದ ಕಾಯ್ತಿದ್ದಾರೆ. ಕೆಲದಿನಗಳಿಂದ ಲೈಗರ್ ಚಿತ್ರತಂಡ ಪ್ರಚಾರ ಕೈಗೊಂಡಿದೆ. ನಟ ವಿಜಯ್​ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ (Ananya Pandey) ಸಹ ದೇಶ-ವಿದೇಶಗಳಲ್ಲಿ ಪ್ರಚಾರ ನಡೆಸಿದ್ದಾರೆ. ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ ಲೈಗರ್ ಚಿತ್ರಕ್ಕೆ ಬೆಂಬಲ ನೀಡಿ ವಿಶೇಷ ಶುಭಾಶಯಗಳನ್ನು ತಿಳಿಸಿದ್ದಾರೆ.  

ನಾಳೆ ಲೈಗರ್​ ಡೇ ಎಂದ ಚಿರಂಜೀವಿ

ಟಾಲಿವುಡ್​​ನಲ್ಲಿ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರ ರಿಲೀಸ್​ಗೂ ಮೊದಲೇ ಭರ್ಜರಿ ಸದ್ದು ಮಾಡಿದೆ. ಲೈಗರ್​ ಚಿತ್ರತಂಡ ಸಿನಿಮಾ ರಿಲೀಸ್​ ಬಳಿಕ ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದೆ. ಈ ಸಿನಿಮಾಗೆ ಮೆಗಾಸ್ಟಾರ್​ ಚಿರಂಜೀವಿ ಬೆಂಬಲ ನೀಡಿದ್ದಾರೆ. ಟ್ವೀಟ್ ಮೂಲಕ ಶುಭಕೋರಿರೋ ಚಿರಂಜೀವಿ, ನಾಳೆ #ಲೈಗರ್ ಡೇ! ಎಂದಿದ್ದಾರೆ. ಆತ್ಮೀಯ @purijagan @TheDeveraKonda,@meramyakrishnan,@karanjohar,@Charmmeofficial,@ananyapandey & ಇಡೀ ತಂಡದ, ಸ್ಮರಣೀಯ ಯಶಸ್ಸಿಗೆ ಆಲ್ ದಿ ವೆರಿ ಬೆಸ್ಟ್! ಎಂದು ಟ್ವೀಟ್ ಮಾಡಿದ್ದಾರೆ.

ಸ್ವೀಟೆಸ್ಟ್​ ಮೆಗಾಸ್ಟಾರ್​

ಮೆಗಾಸ್ಟಾರ್​ ಟ್ವೀಟ್​ ಮೂಲಕ ಶುಭಕೋರಿದ್ದಕ್ಕೆ ವಿಜಯ್ ದೇವರಕೊಂಡ ಫುಲ್​ ಖುಷ್​ ಆಗಿ ರೀ ಟ್ವೀಟ್​ ಮಾಡಿದ್ದಾರೆ. "ಚಿರು ಸರ್ರ್ರ್. ನಮ್ಮ ಸ್ವೀಟೆಸ್ಟ್ ಮೆಗಾಸ್ಟಾರ್ - ನಿಜವಾಗಿಯೂ ನೀವು ಚಿತ್ರವನ್ನು  ಆನಂದಿಸುತ್ತಿರಾ ಹಾಗೂ ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಟ್ವೀಟ್ ಮಾಡಿದ ವಿಜಯ ದೇವರಕೊಂಡ, ಚಿರಂಜೀವಿಯನ್ನು 'ಸ್ವೀಟೆಸ್ಟ್ ಮೆಗಾಸ್ಟಾರ್' ಎಂದು ಕರೆದಿದ್ದಾರೆ.

ವಿಜಯ್​ ಬೆಂಬಲಿಸಿ ಟ್ವೀಟ್

'ಲೈಗರ್' ನಿಷೇಧಕ್ಕೆ ಕರೆ ನೀಡುವ ನೆಟ್ಟಿಗರು ವಿವಿಧ ಕಾರಣಗಳನ್ನು ಉಲ್ಲೇಖಿಸುತ್ತಿದ್ದಾರೆ.  ಹ್ಯಾಶ್‌ಟ್ಯಾಗ್ ಹೆಚ್ಚು ಹೆಚ್ಚು ಟ್ವೀಟ್‌ಗಳನ್ನು ಪಡೆಯುತ್ತಿದ್ದಂತೆ, ನಟನ ಅಭಿಮಾನಿಗಳು , ಹಾಗೂ ನಾಯಕರು ಸಹ ಅವರಿಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. #BoycottLigerMovie #VijayDeverakonda ಒಬ್ಬ ಸ್ವಮೇಕ್ ಸ್ಟಾರ್ ಮತ್ತು ಹಾರ್ಡ್ ವರ್ಕರ್ ಈ ರೀತಿಯ ಟ್ರೆಂಡ್‌ಗಳನ್ನು ಮಾಡಬೇಡಿ , ಅವರು ದೊಡ್ಡದಾಗಿ ಬೆಳೆಯಲಿ ಇದನ್ನು ನಿಲ್ಲಿಸಿ," ಎಂದು ಅನೇಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Vijay Deverakonda: ಲೈಗರ್ ಬಾಯ್ಕಾಟ್ ಅಭಿಯಾನಕ್ಕೆ ‘ರೌಡಿ ಸ್ಟಾರ್’ ತಿರುಗೇಟು; ಟ್ವೀಟ್​ ಮೂಲಕ ವಿಜಯ್ ದೇವರಕೊಂಡ ಸವಾಲ್

ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ಚಿತ್ರ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದ ಟ್ರೇಲರ್​​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಸಿನಿಮಾ ಯಶಸ್ಸಿಗೆ ವಿಜಯ್ ದೇವರಕೊಂಡ ಮನೆಯಲ್ಲಿ ವಿಶೇಷ ಪೂಜೆಗಳು ನಡೆಸಲಾಯ್ತು. ಈ ಪೂಜೆಯಲ್ಲಿ ವಿಜಯ್ ಜೊತೆ ಅನನ್ಯಾ ಪಾಂಡೆ ಕೂಡ ಉಪಸ್ಥಿತರಿದ್ದರು.
Published by:Pavana HS
First published: