Katrina Kaif-Vijay Devarakonda: ಟಾಲಿವುಡ್ ರೌಡಿ ವಿಜಯ್​ ದೇವರಕೊಂಡ ಜೊತೆ ಕತ್ರಿನಾ ಕೈಫ್​ ರೊಮ್ಯಾನ್ಸ್​..!

ಈಗಾಗಲೇ ಬಾಲಿವುಡ್ ಬೆಡಗಿಯರು ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲಿಯಾ ಭಟ್, ಕೃತಿ ಸನೋನ್‌, ಅನನ್ಯಾ ಪಾಂಡೆ ಇವರೆಲ್ಲರ ಜೊತೆಗೆ ಮತ್ತೆ ಕತ್ರಿನಾ ಸಹ ಸೇರಿಕೊಳ್ಳಲಿದ್ದಾರೆ.  

ಈಗಾಗಲೇ ಬಾಲಿವುಡ್ ಬೆಡಗಿಯರು ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲಿಯಾ ಭಟ್, ಕೃತಿ ಸನೋನ್‌, ಅನನ್ಯಾ ಪಾಂಡೆ ಇವರೆಲ್ಲರ ಜೊತೆಗೆ ಮತ್ತೆ ಕತ್ರಿನಾ ಸಹ ಸೇರಿಕೊಳ್ಳಲಿದ್ದಾರೆ.  

ಈಗಾಗಲೇ ಬಾಲಿವುಡ್ ಬೆಡಗಿಯರು ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲಿಯಾ ಭಟ್, ಕೃತಿ ಸನೋನ್‌, ಅನನ್ಯಾ ಪಾಂಡೆ ಇವರೆಲ್ಲರ ಜೊತೆಗೆ ಮತ್ತೆ ಕತ್ರಿನಾ ಸಹ ಸೇರಿಕೊಳ್ಳಲಿದ್ದಾರೆ.  

  • Share this:
ಕತ್ರಿನಾ ಕೈಫ್​ ಹಾಗೂ ವಿಜಯ್​ ದೇವಕೊಂಡ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಗುಲ್ಲಾಗಿದೆ. ಈಗಾಗಲೇ ಟಾಲಿವುಡ್​ನಲ್ಲಿ ನಟಿಸಿ ಹೆಸರು ಮಾಡಿರುವ ಕತ್ರಿನಾ ಕೈಫ್​ ಈಗ ಮತ್ತೊಮ್ಮೆ ತೆಲುಗಿನ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿಕ್ಟರಿ ವೆಂಕಟೇಶ್​ ಜತೆ ಮಲ್ಲೀಶ್ವರಿ ಎಂಬ ಸಿನಿಮಾದಲ್ಲಿ ಕತ್ರಿನಾ ಕೈಫ್​ ಅಭಿನಯಿಸಿದ್ದರು. ಆಗಿನಿಂದಲೇ ಕತ್ರಿನಾ ಅವರ ಪರಿಚಯ ತೆಲುಗು ಪ್ರೇಕ್ಷಕರಿಗಿದೆ. ಈಗ ಮತ್ತೆ ಕತ್ರಿನಾ ಕೈಫ್‌ ಟಾಲಿವುಡ್ ರೌಡಿ  ಜೊತೆ ರೊಮ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯ್ ದೇವರ ಕೊಂಡ ಲೈಗರ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ನಟಿ ಅನನ್ಯಾ ಪಾಂಡೆ ರೌಡಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಕತ್ರಿನಾ ಕೈಫ್ ಕೂಡ ನಟ ವಿಜಯ ದೇವರಕೊಂಡ ಅವರ ಮುಂದಿನ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಬಾಲಿವುಡ್ ಬೆಡಗಿಯರು ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಆಲಿಯಾ ಭಟ್, ಕೃತಿ ಸನೋನ್‌, ಅನನ್ಯಾ ಪಾಂಡೆ ಇವರೆಲ್ಲರ ಜೊತೆಗೆ ಮತ್ತೆ ಕತ್ರಿನಾ ಸಹ ಸೇರಿಕೊಳ್ಳಲಿದ್ದಾರೆ.

Vijay Deverakonda as Liger,Liger First Look Released,Vijay deverakonda,Liger,Liger Movie,vijay devarakonda news,vijay devarakonda latest films, puri jagannadh,vijay devarakonda fighter update,vijay devarakonda new movie, puri jagannadh movies,vijay devarakonda hindi film , ವಿಜಯ್​ ದೇವರಕೊಂಡ, ಪೂರಿ ಜಗನ್ನಾತ್​, ಚಾರ್ಮಿ ಕೌರ್​, ಅನನ್ಯಾ ಪಾಂಡೆ, ಲೈಗರ್​, ಲೈಗರ್​ ಚಿತ್ರದ ಪೋಸ್ಟರ್​, liger fever, vijay devarakonda,liger movie, liger beers, beer poured on liger poster,vijay devarakonda twitter,vijay devarakonda liger movie,vijay devarakonda liger movie meaning,vijay devarakonda liger movie puri jagannadh,vijay devarakonda puri jagannadh liger movie title released, telugu cinema
ಲೈಗರ್​ ಸಿನಿಮಾದ ಪೋಸ್ಟರ್​


ಬಾಲಿವುಡ್ ಹಂಗಾಮಾ ಮಾಡಿರುವ ವರದಿಯ ಪ್ರಕಾರ, ನಟ ವಿಜಯ ದೇವರಕೊಂಡ ಅವರು ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದು, ಇವರ ಒಂದು ಸಿನಿಮಾದಲ್ಲಿ ಕತ್ರಿನಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಮಿರ್ಚಿ, ಶ್ರೀಮಂತುಡು, ಜನತಾ ಗ್ಯಾರೇಜ್ ಮತ್ತು ಭರತ್‌ ಆನೆ ನೇನು ಎಂಬ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕೊರಟಾಲ ಶಿವ ಜೊತೆ ವಿಜಯ ದೇವರಕೊಂಡ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ಸಿನಿಮಾವನ್ನು ಶಿವಾ ನಿರ್ವಾಣ ಅವರ ಜೊತೆ ಮಾಡುತ್ತಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಖ್ಯಾತಿಯ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಧನ ಸಹಾಯ ಮಾಡಿದ ಕಿಚ್ಚ ಸುದೀಪ್​..!

ಕತ್ರಿನಾ ಹಾಗೂ ವಿಜಯ ದೇವರಕೊಂಡ ಅಭಿನಯದ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇದು ಪಕ್ಕಾ ರೊಮ್ಯಾಂಟಿಕ್ ಲವ್​ ಸ್ಟೋರಿಯಾಗಿದೆಯಂತೆ. ಇದಲ್ಲದೇ ನಿರ್ದೇಶಕ ಶ್ರೀರಾಮ್ ರಾಘವನ್ ನಿರ್ದೇಶನದ ಮೇರಿ ಕ್ರಿಸ್‍ಮಸ್ ಸಿನಿಮಾಕ್ಕೂ ಒಪ್ಪಿಕೊಂಡಿದ್ದು, ವಿಜಯ್ ಸೇತುಪತಿಗೆ ಜೊತೆಯಾಗಲಿದ್ದಾರೆ.

katrina kaif, Bollywood, Cover shoot of Peacock magazine, Katrina Kaif Bold Photoshoot, Katrina Kaif hot photos, Katrina Kaif movies, Katrina Kaif instagram, Katrina Kaif twitter, Katrina Kaif films, Katrina Kaif wedding, Katrina Kaif marriage, Katrina Kaif birthday date, ಕತ್ರಿನಾ ಕೈಫ್​, ಬಾಲಿವುಡ್​ ನಟಿ ಕತ್ರಿನಾ ಕೈಫ್​, ಕತ್ರಿನಾ ಕೈಫ್​ ಹೊಸ ಫೋಟೋಶೂಟ್​
ಕತ್ರಿನಾ ಕೈಫ್​


ಈಗಾಗಲೇ ವಿಜಯ ದೇವರಕೊಂಡ ಅಭಿನಯದ ಸಿನಿಮಾ ಲೈಗರ್ ಬಿಡುಗಡೆಗೆ ಸಿದ್ಧವಾಗಿದ್ದು, ಇದು ರೊಮ್ಯಾಂಟಿಕ್​ ಹಾಗೂ ಕ್ರೀಡಾ ಕಥಾಹಂದರ ಹೊಂದಿರುವ ಸಿನಿಮಾ ಆಗಿದೆ. ಇದಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾಕ್ಕೆ ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಯಶ್ ಜೋಹರ್ ಬಂಡವಾಳ ಹೂಡಿದ್ದು, ಪುರಿ ಜಗನ್ನಾಥ್ ನಿರ್ಮಾಣ ಸಂಸ್ಥೆಯಾದ ಧರ್ಮ ಪ್ರೊಡಕ್ಷನ್‍ನಲ್ಲಿ ಮೂಡಿ ಬರುತ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಮೇ 9ಕ್ಕೆ ಟೀಸರ್ ಬಿಡುಗಡೆಯಾಗಬೇಕಾಗಿತ್ತು. ಆದರೆ ಕೋವಿಡ್ ಕಾರಣ ಟೀಸರ್ ಬಿಡುಗಡೆಯನ್ನು ಮುಂದೂಡಿದ್ದೇವೆ ಎಂದು ಹೇಳಿರುವ ತಂಡ ಯಾವಾಗ ರಿಲೀಸ್ ಆಗಲಿದೆ ಎಂಬುದನ್ನು ಹೇಳಿಲ್ಲ. ಇನ್ನು ಈ ಸಿನಿಮಾವನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್​ ಸಹ ನಟಿಸುತ್ತಿದ್ದು, ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲೂ ಲೈಗರ್ ತೆರೆ ಕಾಣಲಿದೆ.

ಇದನ್ನೂ ಓದಿ: ಅಮ್ಮಂದಿರ ದಿನದಂದು ಇಬ್ಬರು ಮುದ್ದಿನ ಮಕ್ಕಳ ಕ್ಯೂಟ್​ ಫೋಟೋ ಹಂಚಿಕೊಂಡ ಕರೀನಾ ಕಪೂರ್​

ಕತ್ರಿನಾ ಮುಂದಿನ ಚಿತ್ರ ಫೋನ್ ಬೂತ್. ಇದೊಂದು ಹಾರರ್-ಹಾಸ್ಯ ಚಿತ್ರವಾಗಿದ್ದು, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದ ಮೂರನೇ ಭಾಗದಲ್ಲಿಯೂ ಕತ್ರಿನಾ ಕೈಫ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಮಧ್ಯೆಯೂ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊತೆಗೂಡಿ ಕೋವಿಡ್ ರೋಗಿಗಳಿಗಾಗಿ ಹಣ ಸಂಗ್ರಹಿಸುತ್ತಿದ್ದು, ಇವರೊಟ್ಟಿಗೆ ಕೈ ಜೋಡಿಸಿದ್ದಾರೆ.
Published by:Anitha E
First published: