ಬೇಡಿಕೆ ಕಳೆದುಕೊಳ್ಳುತ್ತಿದ್ದಾರೆ ವಿಜಯ್ ದೇವರಕೊಂಡ ಜೊತೆ ನಟಿಸಿದ ಹೀರೋಯಿನ್​ಗಳು!

‘ಅರ್ಜುನ್​ ರೆಡ್ಡಿ’ ನಟನೆಯ ಶಾಲಿನಿ ಪಾಂಡೆ ಕೂಡ ಹೇಳಿಕೊಳ್ಳುವಂತ ಸಿನಿಮಾಗಳನ್ನು ನೀಡುತ್ತಿಲ್ಲ. ಅವರು ನಾಯಕಿಯಾಗಿ ನಟಿಸಿರುವ  ‘ಇದ್ದರಿ ಲೋಕಂ ಒಕಟೆ’ ಸಿನಿಮಾ ತೆರೆಗೆ ಬರಬೇಕಿದೆ. ಆದರೆ, ಇದು ಹಿಟ್​ ಆಗುವ  ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

Rajesh Duggumane | news18-kannada
Updated:September 14, 2019, 8:29 PM IST
ಬೇಡಿಕೆ ಕಳೆದುಕೊಳ್ಳುತ್ತಿದ್ದಾರೆ ವಿಜಯ್ ದೇವರಕೊಂಡ ಜೊತೆ ನಟಿಸಿದ ಹೀರೋಯಿನ್​ಗಳು!
ವಿಜಯ್​ ಹೀರೋಯಿನ್ಸ್​​
  • Share this:
ವಿಜಯ್​ ದೇವರಕೊಂಡ ಅಭಿನಯದ ಸಿನಿಮಾಗಳು ಬಾಲಿವುಡ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿವೆ. ‘ಪೆಳ್ಳಿ ಚೂಪುಲು’ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದರು ವಿಜಯ್​. ನಂತರ ತೆರೆಕಂಡ ಅವರ ನಾಯಕತ್ವದ ‘ಅರ್ಜುನ್​ ರೆಡ್ಡಿ’, ‘ಗೀತ ಗೊವಿಂದಂ’ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ದಿನೇ ದಿನೇ ವಿಜಯ್​ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಆದರೆ, ಅವರ ಜೊತೆ ನಟಿಸಿದ ಹೀರೋಯಿನ್​ಗಳು ಮಾತ್ರ ಮಾರುಕಟ್ಟೆ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ.

ಹೌದು, ‘ಪೆಳ್ಳಿ ಚೂಪುಲು’ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ರೀತು ವರ್ಮಾ. ನಂತರ ಅವರು ಯಾವುದೇ ತೆಲುಗು ಚಿತ್ರಗಳಲ್ಲಿ ನಟಿಸಿಲ್ಲ. ತಮಿಳು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರೂ ಅವುಗಳು ಮಕಾಡೆ ಮಲಗಿದ್ದವು. ಮುಂದಿನ ದಿನಗಳಲ್ಲೂ ಯಾವುದೆ ಸಿನಿಮಾಗಳು ಅವರನ್ನು ಕೈ ಹಿಡಿಯುವ ಲಕ್ಷಣ ಗೋಚರವಾಗುತ್ತಿಲ್ಲ.

‘ಅರ್ಜುನ್​ ರೆಡ್ಡಿ’ ನಟನೆಯ ಶಾಲಿನಿ ಪಾಂಡೆ ಕೂಡ ಹೇಳಿಕೊಳ್ಳುವಂತ ಸಿನಿಮಾಗಳನ್ನು ನೀಡುತ್ತಿಲ್ಲ. ಅವರು ನಾಯಕಿಯಾಗಿ ನಟಿಸಿರುವ  ‘ಇದ್ದರಿ ಲೋಕಂ ಒಕಟೆ’ ಸಿನಿಮಾ ತೆರೆಗೆ ಬರಬೇಕಿದೆ. ಆದರೆ, ಇದು ಹಿಟ್​ ಆಗುವ  ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಇದನ್ನೂ ಓದಿ: ಬಾಕ್ಸ್ ಆಫೀಸ್​ನಲ್ಲಿ ಪೈಲ್ವಾನ್ ಹವಾ; ಎರಡು ದಿನಕ್ಕೆ ಸುದೀಪ್ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?

‘ಟ್ಯಾಕ್ಸಿ ವಾಲಾ’ ಸಿನಿಮಾದ ನಟಿ ಪ್ರಿಯಾಂಕಾ ಜವಾಲ್ಕರ್​ ಕಥೆ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇನ್ನು ವಿಜಯ್​ ಜೊತೆ ಎರಡು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಮಾತ್ರ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ‘ಗೀತ ಗೋವಿಂದಂ’ ಸಿನಿಮಾ ದೊಟ್ಟ ಪ್ರಮಾಣದಲ್ಲಿ ಹಿಟ್​ ಆಗಿತ್ತು. ಇದೇ ಕಾಂಬಿನೇಷನ್​ನಲ್ಲಿ ತೆರೆಕಂಡ ‘ಡಿಯರ್​ ಕಾಮ್ರೇಡ್​’ ನಿರೀಕ್ಷೆಯ ಮಟ್ಟ ತಲುಪಿಲ್ಲ. ಆದಾಗ್ಯೂ, ಸಾಲು ಸಾಲು ಚಿತ್ರಗಳಲ್ಲಿ ರಶ್ಮಿಕಾ ಬಣ್ಣ ಹಚ್ಚುತ್ತಿದ್ದಾರೆ.

First published:September 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading