Vijay Devarakonda: ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಕ್ರೇಜಿ ಪಾತ್ರಕ್ಕೆ ಓಕೆ ಎಂದ ವಿಜಯ್​ ದೇವರಕೊಂಡ..!

Vijay Devarakonda: ಇಸ್ಮಾಟ್​ ಶಂಕರ್​ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಿರ್ದೇಶಕ ಪೂರಿ ಜಗನ್ನಾಥ್​ ಸದ್ಯ ರೌಡಿ ವಿಜಯ್​ ದೇವರಕೊಂಡ ಅವರಿಗಾಗಿ ಒಂದು ಕ್ರೇಜಿ ಪಾತ್ರವನ್ನು ಸಿದ್ಧಪಡಿಸಿದದಾರಂತೆ. 

Anitha E | news18
Updated:August 12, 2019, 4:42 PM IST
Vijay Devarakonda: ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಕ್ರೇಜಿ ಪಾತ್ರಕ್ಕೆ ಓಕೆ ಎಂದ ವಿಜಯ್​ ದೇವರಕೊಂಡ..!
ನಿರ್ದೇಶಕ ಪೂರಿ ಜಗನ್ನಾಥ್​ ಹಾಗೂ ನಟ ವಿಜಯ್​ ದೇವರಕೊಂಡ
  • News18
  • Last Updated: August 12, 2019, 4:42 PM IST
  • Share this:
'ಅರ್ಜುನ್​ ರೆಡ್ಡಿ' ಸಿನಿಮಾದಿಂದ ವಿಜಯ್​ ಟಾಲಿವುಡ್​ನಲ್ಲಿ ತಮ್ಮದೇ ಆದ ಸ್ಥಾನವನ್ನು ಕಂಡುಕೊಂಡವರು. ಇತ್ತೀಚೆಗಷ್ಟೆ ಅವರ ಅಭಿನಯದ 'ಡಿಯರ್ ಕಾಮ್ರೇಡ್​' ಸಿನಿಮಾ ದೇಶ-ವಿದೇಶಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ.

ಹೀಗಿರುವಾಗಲೇ ಪೂರಿ ನಿರ್ದೇಶನದಲ್ಲಿ ವಿಜಯ್​ ದೇವರಕೊಂಡ ಅಭಿನಯಿಸಲಿದ್ದಾರೆ ಅನ್ನೋ ಟಾಕ್​ ಈಗಾಗಲೇ ಸದ್ದು ಮಾಡುತ್ತು. ಆದರೆ ಈಗ ಅದಕ್ಕೆ ಮತ್ತೆ ಜೀವ ಬಂದಿದೆ. ವಿಜಯ್​ಗಾಗಿ ಪೂರಿ ಕ್ರೇಜಿಯಾಗಿರುವ ಪಾತ್ರವನ್ನು ಸಿದ್ಧಪಡಿಸಿದ್ದಾರಂತೆ.

  View this post on Instagram
 

I want a milkshake.


A post shared by Vijay Deverakonda (@thedeverakonda) on


ಟಾಲಿವುಡ್​ನಲ್ಲಿ ನಾಯಕರು ಈಗ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಆಸಕ್ತಿ ತೋರುತ್ತಿದ್ದಾರೆ. ರಾಮ್​ ಚರಣ್​ ತೇಜ 'ರಂಗಸ್ಥಳಂ' ಚಿತ್ರದಲ್ಲಿನ ಪಾತ್ರಕ್ಕೆ ಓಕೆ ಎಂದು, ಯಶಸ್ವಿ ಸಹ ಆದರು. ಅದರಂತೆ ನಟ ರವಿ ತೇಜ 'ರಾಜ ದಿ ಗ್ರೇಟ್​' ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಲೀಕ್​ ಆಯ್ತು 'ಕೂಲಿ ನಂ 1' ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..!

ಹೀಗಿರುವಾಗ ಈಗ ವಿಜಯ್​ ದೇವರಕೊಂಡ ಸಹ ವಿಭಿನ್ನ ಪಾತ್ರಕ್ಕಾಗಿ ಕಾಯುತ್ತಿದ್ದಾರಂತೆ. ಅದಕ್ಕೆ ಪೂರಿ ಜಗನ್ನಾಥ್​ ಅವರು ವಿಜಯ್​ಗಾಗಿ ಒಂದು ಪಾತ್ರವನ್ನು ಸಿದ್ಧಪಡಿಸಿದ್ದಾರಂತೆ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ರಾಕಿಂಗ್​ ಗಂಡನ ತಾಳಕ್ಕೆ ಕುಣಿದ ರಾಧಿಕಾ ಪಂಡಿತ್ ವಿಡಿಯೋ​..!

ಪೂರಿ ಅವರ ನಿರ್ಮಾಣದ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಸರಿಯಾಗಿ ಮಾತನಾಡಲು ಬಾರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕುರಿತಂತೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೆ ಮೂಲಗಳ ಪ್ರಕಾರ ಪೂರಿ ಜಗನ್ನಾಥ್​ ಅವರು ಈ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!

Published by: Anitha E
First published: August 12, 2019, 4:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading