ರಶ್ಮಿಕಾ ಮಂದಣ್ಣಗೆ ಲಿಪ್​ಕಿಸ್ ಮಾಡಲು ವಿಜಯ್ ದೇವರಕೊಂಡಗೆ ಇದೆಯಂತೆ ಬಹುಮುಖ್ಯ ಕಾರಣ!

ಸಿನಿಮಾ ಹಿಟ್​ ಆಗಲಿ ಎನ್ನುವ ಕಾರಣಕ್ಕೆ ಚುಂಬನ ದೃಶ್ಯಗಳನ್ನು ಇಡಲಾಗುತ್ತದೆ ಎನ್ನುವ ಮಾತಿದೆ. ಹಾಗಿದ್ದರೆ ಲಿಪ್​ ಲಾಕ್​ ಇರುವ ಎಲ್ಲ ಚಿತ್ರಗಳೂ ಹಿಟ್​ ಆಗಬೇಕಿತ್ತು. ಆದರೆ, ಹಾಗಾಗುತ್ತಿಲ್ಲವಲ್ಲ ಎಂಬುದು ವಿಜಯ್​ ದೇವರಕೊಂಡ ಮಾತು.

Rajesh Duggumane | news18
Updated:July 24, 2019, 12:29 PM IST
ರಶ್ಮಿಕಾ ಮಂದಣ್ಣಗೆ ಲಿಪ್​ಕಿಸ್ ಮಾಡಲು ವಿಜಯ್ ದೇವರಕೊಂಡಗೆ ಇದೆಯಂತೆ ಬಹುಮುಖ್ಯ ಕಾರಣ!
ವಿಜಯ್​ ದೇವರಕೊಂಡ-ರಶ್ಮಿಕಾ
  • News18
  • Last Updated: July 24, 2019, 12:29 PM IST
  • Share this:
ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ ಅಭಿನಯದ ‘ಡಿಯರ್​ ಕಾಮ್ರೇಡ್​’ ಚಿತ್ರದ ಕಿಸ್ಸಿಂಗ್​ ದೃಶ್ಯಗಳು ಸಖತ್​ ವೈರಲ್​ ಆಗುತ್ತಿವೆ. ಈ ಮೊದಲು ‘ಗೀತ ಗೋವಿಂದಂ’ ಚಿತ್ರದ ಲಿಪ್​ ಕಿಸ್​ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ರಕ್ಷಿತ್​ ಶೆಟ್ಟಿ-ರಶ್ಮಿಕಾ ಬ್ರೇಕಪ್​ಗೆ ಇದೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಬೇಸತ್ತಿರುವ ವಿಜಯ್​ ದೇವರಕೊಂಡ ಕಿಸ್ಸಿಂಗ್​ ದೃಶ್ಯಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಡಿಯರ್​ ಕಾಮ್ರೇಡ್​’ ಸಿನಿಮಾದ ಪ್ರಮೋಷನ್​ನಲ್ಲಿ ಪಾಲ್ಗೊಂಡಿದ್ದ ವಿಜಯ್​ ಈ ಬಗ್ಗೆ ಹೇಳಿಕೊಂಡಿದ್ದಾರೆ. ರಶ್ಮಿಕಾ ಜೊತೆ ಯಾವುದೇ ಭಾವನೆ ಇಟ್ಟುಕೊಂಡು ಕಿಸ್​ ಮಾಡುವುದಿಲ್ಲ ಎಂದಿರುವ ಅವರು, “ಸಿನಿಮಾಗೆ ಅವಶ್ಯಕತೆ ಇದೆ ಎಂದಾದರೆ ನಾನು ಯಾರ ಜೊತೆ ಬೇಕಿದ್ದರೂ ಕಿಸ್​ ಮಾಡಲು ಸಿದ್ಧ. ಕಿಸ್ಸಿಂಗ್​ ದೃಶ್ಯಗಳನ್ನು ನಿರ್ಧಾರ ಮಾಡುವುದು ನಾನಲ್ಲ ನಿರ್ದೇಶಕರು. ಸಿನಿಮಾ ಯಾವ ದೃಶ್ಯವನ್ನು ಬೇಡುತ್ತದೆಯೋ ಅದನ್ನು ನಾನು ಕೊಡುತ್ತೇನೆ,” ಎಂದು ಸ್ಪಷ್ಟನೆ ನೀಡಿದ್ದಾರೆ​.

“ರಶ್ಮಿಕಾ ಅಲ್ಲದೆ, ಅಲ್ಲೊಂದು ಕೂರ್ಚಿ ಇದ್ದರೂ ನಾನು ಕಿಸ್​ ಮಾಡುತ್ತೇನೆ. ನಾನೊಬ್ಬ ನಟನಾಗಿ ಅದನ್ನು ಮಾಡಬೇಕು. ಅದರಲ್ಲಿ ಯಾವುದೇ ನೈಜತೆ ಇರುವುದಿಲ್ಲ. ನಾನು ಕಲಾವಿದನಾಗಿ ನಟಿಸುತ್ತೇನೆ. ಅದು ನೋಡುಗರಿಗೆ ನೈಜವಾಗಿ ಕಾಣಿಸುತ್ತದೆ. ಆದರೆ ಅದು ಕೃತಕ,” ಎಂದು ಹೇಳಿದ್ದಾರೆ ವಿಜಯ್​. ಈ ಮೂಲಕ ರಶ್ಮಿಕಾ ಜೊತೆ ಕಾಣಿಸಿಕೊಂಡ ಕಿಸ್ಸಿಂಗ್​ ದೃಶ್ಯಗಳಲ್ಲಿ ಯಾವುದೇ ನೈಜತೆ ಇಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ ಕನ್ನಡತಿ ರಶ್ಮಿಕಾ ಮಂದಣ್ಣ ಸಿನಿಮಾ!

ಕೆಲ ತಪ್ಪು ಕಲ್ಪನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವಿಜಯ್​, “ಸಿನಿಮಾ ಹಿಟ್​ ಆಗಲಿ ಎನ್ನುವ ಕಾರಣಕ್ಕೆ ಚುಂಬನ ದೃಶ್ಯಗಳನ್ನು ಇಡಲಾಗುತ್ತದೆ ಎನ್ನುವ ಮಾತಿದೆ. ಹಾಗಿದ್ದರೆ ಲಿಪ್​ ಲಾಕ್​ ಇರುವ ಎಲ್ಲ ಚಿತ್ರಗಳೂ ಹಿಟ್​ ಆಗಬೇಕಿತ್ತು. ಆದರೆ, ಹಾಗಾಗುತ್ತಿಲ್ಲವಲ್ಲ,” ಎಂದರು.

First published:July 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ