Vijay Devarakonda: ರಾಕಿಂಗ್​ ಸ್ಟಾರ್​ ಯಶ್​ ಬದಲು ಪೂರಿ ಜಗನ್ನಾಥ್​ ಜತೆ ಕೈ ಜೋಡಿಸಿದ ವಿಜಯ್​ ದೇವರಕೊಂಡ..!

Vijay Devarakonda: ಪೂರಿ ಜಗನ್ನಾಥ್​ ಅವರ ಮುಂದಿನ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಆದರೆ ಈಗ ಪೂರಿ ಅವರ ನಿರ್ಮಾಣದ ಚಿತ್ರಕ್ಕಾಗಿ ವಿಜಯ್​ ದೇವರಕೊಂಡ ಆಯ್ಕೆಯಾಗಿದ್ದಾರೆ.

Anitha E | news18
Updated:August 13, 2019, 11:22 AM IST
Vijay Devarakonda: ರಾಕಿಂಗ್​ ಸ್ಟಾರ್​ ಯಶ್​ ಬದಲು ಪೂರಿ ಜಗನ್ನಾಥ್​ ಜತೆ ಕೈ ಜೋಡಿಸಿದ ವಿಜಯ್​ ದೇವರಕೊಂಡ..!
ಪೂರಿ ಜಗನ್ನಾಥ್​, ವಿಜಯ್​ ದೇವರಕೊಂಡ ಹಾಗೂ ನಟಿ ಚಾರ್ಮಿ
  • News18
  • Last Updated: August 13, 2019, 11:22 AM IST
  • Share this:
ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್​ ಕಡೆಗೂ ಕೈ ಜೋಡಿಸಿದ್ದಾರೆ. ಹೊಸ ಸಿನಿಮಾಗಿ ಈ ಜೋಡಿ ಒಂದಾಗಿದ್ದು ಈಗ ಟಾಲಿವುಡ್​ನಲ್ಲಿ ಸದ್ದು ಮಾಡುತ್ತಿದೆ.

'ಇಸ್ಮಾಟ್​' ಶಂಕರ್​ ಸಿನಿಮಾದಿಂದ ಸುದ್ದಿಯಲ್ಲಿರುವ ಪೂರಿ ಜಗನ್ನಾಥ್​ ಈಗ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ನಾಯಕ ಎಂದು ನಟಿ ಚಾರ್ಮಿ ಕೌರ್​ ಅಧಿಕೃತವಾಗಿ ತಮ್ಮ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.

It’s official 💃🏻💃🏻 

ಈ ಹೊಸ ಸಿನಿಮಾವನ್ನು ಚಾರ್ಮಿ ಹಾಗೂ ಪೂರಿ ಜಗನ್ನಾಥ್​ ಅವರೇ ನಿರ್ಮಿಸುತ್ತಿದ್ದು, ವಿಜಯ್​ ದೇವರಕೊಂಡ ಇದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ವಿಜಯ್​ ಅವರಿಗಾಗಿಯೇ ಪೂರಿ ವಿಶೇಷ ಪಾತ್ರವನ್ನು ಸಿದ್ಧಪಡಿಸಿಕೊಂಡಿದ್ದಾರಂತೆ.

ವಿಜಯ್​ ಈ ಹಿಂದೆ ಮಾಡದಂತಹ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್​ ಗಲ್ಲಿಗಳಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ. ಪೂರಿ ಅವರ ಹೊಸ ಪ್ರಾಜೆಕ್ಟ್​ ಬಗ್ಗೆ ತಿಳಿದ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸಹ ಶುಭ ಹಾರೈಸಿದ್ದಾರೆ.

WOWWWW @TheDeverakonda and @purijagan COMBO will be RED HOT .. it will BURN the BOXOFFICE..Congrats to @Charmmeofficial for being so amazingly ISSMART 💐💐💐 https://t.co/cGYOiXoUXwಈ ಹಿಂದೆ ಪೂರಿ ಜಗನ್ನಾಥ್​ ಅವರು ಯಶ್​ ಜತೆ 'ಜನ ಗಣ ಮನ' ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಅದಕ್ಕಾಗಿ ಮಹೇಶ್​ ಬಾಬು ಬದಲಾಗಿ ಯಶ್​ ಅವರನ್ನು ಸಂಪರ್ಕಿಸಿದ್ದು, ಎರಡು ಸುತ್ತಿನ ಮಾತುಕತೆ ಸಹ ನಡೆದಿದೆ ಎನ್ನಲಾಗುತ್ತಿತ್ತು. ಆದರೆ ಈಗ ಪೂರಿ ತಮ್ಮ ಹೊಸ ಸಿನಿಮಾಗೆ ವಿಜಯ್​ ಅವರ ಹೆಸರನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: Vijay Devarakonda: ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ಕ್ರೇಜಿ ಪಾತ್ರಕ್ಕೆ ಓಕೆ ಎಂದ ವಿಜಯ್​ ದೇವರಕೊಂಡ..!

ಆದರೆ ಇದು ಯಾವ ಸಿನಿಮಾ ಅನ್ನೋ ಸುದ್ದಿ ಮಾತ್ರ ಇನ್ನೂ ಖಚಿತವಾಗಿಲ್ಲ. ಕಾರಣ ಯಶ್​ 'ಕೆ.ಜಿ.ಎಫ್​ ಚಾಪ್ಟರ್​ 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅದು ಮುಗಿದ ನಂತರ ಪೂರಿ 'ಜನ ಗಣ ಮನ' ಚಿತ್ರವನ್ನು ಮಾಡಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರುತ್ತಿವೆ. ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಮಾಡುವ ಹಂಬಲದಲ್ಲಿರುವ ಪೂರಿ ಅವರಿಗೆ ಯಶ್​ ಸರಿಯಾದ ಆಯ್ಕೆ ಎನ್ನಲಾಗುತ್ತಿದೆ. ಈ ಎಲ್ಲ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

 

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published: August 13, 2019, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading