ಸ್ಯಾಂಡಲ್‍ವುಡ್ ಮಂದಿಗೆ `ಅರ್ಜುನ್ ರೆಡ್ಡಿ' ಜಪ ! ಸಿನಿಮಾ ಸೌಂಡು ಮಾಡಲು ಸಾಕಲ್ವೆ ಇದೊಂದು ನೆಪ ?

news18
Updated:August 28, 2018, 1:15 PM IST
ಸ್ಯಾಂಡಲ್‍ವುಡ್ ಮಂದಿಗೆ `ಅರ್ಜುನ್ ರೆಡ್ಡಿ' ಜಪ ! ಸಿನಿಮಾ ಸೌಂಡು ಮಾಡಲು ಸಾಕಲ್ವೆ ಇದೊಂದು ನೆಪ ?
news18
Updated: August 28, 2018, 1:15 PM IST
ಆನಂದ್ ಸಾಲುಂಡಿ,  ನ್ಯೂಸ್ 18 ಕನ್ನಡ

ಟಾಲಿವುಡ್‍ನ ನಟ ವಿಜಯ್ ದೇವರಕೊಂಡ ಕಳೆದ ವರ್ಷ ಈ ಸಮಯಕ್ಕೆ ಏನೇನೂ ಅಲ್ಲ. ಇಂತಹ ಒಬ್ಬ ನಟ ಇದಾರೆ ಅನ್ನೋದೆ ನಮ್ಮ ಸ್ಯಾಂಡಲ್‍ವುಡ್ ಮಂದಿಗೆ ಗೊತ್ತಿರಲಿಲ್ಲವೇನೋ? ಆದರೆ 'ಅರ್ಜುನ್ ರೆಡ್ಡಿ' ಅನ್ನೋ ಒಂದು ಸಿನಿಮಾ ಬಂದಿದ್ದೇ ತಡ, ಸೂಪರ್ ಹಿಟ್ ಆಗಿದ್ದೇ ತಡ, ಕನ್ನಡ ಚಿತ್ರೋದ್ಯಮದ ಮಂದಿ ವಿಜಯ್ ದೇವರಕೊಂಡ ಎಂಬ ಸ್ಟಾರ್ ಹಿಂದೆ ಬಿದ್ದಿದ್ದಾರೆ.

ಕನ್ನಡದ ರಾಜಬೀದಿಯಲ್ಲಿ ಪಲ್ಲಕ್ಕಿ ಮೇಲೆ ಹೊತ್ತು ಮೆರೆಸುತ್ತಿದಾರೆ. ಮುಂದೊಂದು ದಿನ ಇದೇ ವಿಜಯ್ ದೇವರಕೊಂಡ ಸಿನಿಮಾ ಬಿಡುಗಡೆಯಾಗುವಾಗ ಥಿಯೇಟರ್ ಸಮಸ್ಯೆ ಆಗುತ್ತಿದೆ ಅಂತ ಲಬೋ ಲಬೋ ಅನ್ನುವ ಪರಿಸ್ಥಿತಿ ಸೃಷ್ಟಿಸಿಕೊ:ಳ್ಳುತ್ತಿದ್ದಾರೆ.

ಈ ಸಿನಿಮಾ ಮಂದಿ ಯಾವಾಗಲೂ ಗೆದ್ದೆತ್ತಿನ ಬಾಲ ಹಿಡಿತಾರೆ ಅನ್ನೋದು ಬಹಳ ಹಿಂದೆಯೇ ಹುಟ್ಟುಕೊಂಡಿರುವ ಮಾತು. ಆಗಾಗ ಇದನ್ನ ನಮ್ಮ ಕನ್ನಡದ ಸಿನಿಮಾ ಮಂದಿ ಸಾಕ್ಷಿಕರಿಸುತ್ತಾ ಇರುತ್ತಾರೆ. ಈಗೀಗ ಸ್ಯಾಂಡಲ್‍ವುಡ್‍ನ ಯಾವುದಾದರೂ ಆಡಿಯೋ ಬಿಡುಗಡೆ ಇರಲಿ, ಮುಹೂರ್ತ ಇರಲಿ ಅಥವಾ ಇನ್ನಾವುದೇ ಕಾರ್ಯಕ್ರಮ ಇರಲಿ, ಅತಿಥಿ ಯಾರು ಅಂತ ಕೇಳಂಗೆ ಇಲ್ಲ. 'ಅರ್ಜುನ್ ರೆಡ್ಡಿ' ಸ್ಟಾರ್ ವಿಜಯ್ ದೇವರಕೊಂಡ ಬರುತ್ತಿದ್ದಾರೆ ಸಾರ್ ಅನ್ನೋ ಉತ್ತರ ಬರುತ್ತದೆ.

ಅಷ್ಟಕ್ಕೂ ವಿಜಯ ದೇವರಕೊಂಡ ತೆಲುಗರ ನಾಡಲ್ಲಿ ದೊಡ್ಡ ಮಟ್ಟದ ಸೆನ್ಸೇಷನ್ ಕ್ರಿಯೇಟ್ ಮಾಡಿರಬಹುದು, ಆದರೆ ಕರ್ನಾಟಕದಲ್ಲಿ ಅವರ ಹವಾ ಅಷ್ಟೊಂದು ಮಟ್ಟಕ್ಕೆ ಇದೆ ಅಂತ ಹೇಳೋಕೆ ಅಗೊಲ್ಲ. ಹಾಗೆ ಅವರು ಬಂದರು ಅನ್ನೋ ಕಾರಣಕ್ಕೆ ಯಾವುದೋ ಸಿನಿಮಾ ಹೈಪ್ ಪಡೆದುಕೊಳ್ಳುತ್ತೆ ಅಂತಲೂ ನಂಬೋಕೆ ಆಗೊಲ್ಲ.

ಎಲ್ಲೋ ಒಂದು ಕಡೆ, ಅರ್ಜುನ್ ರೆಡ್ಡಿ ಸ್ಟಾರ್ ವಿಜಯ್ ದೇವರಕೊಂಡ ಅವರನ್ನ ಕರೆಸಿದರೆ? ಕನ್ನಡ ಚಿತ್ರಗಳಿಗೆ ಎಷ್ಟು ಲಾಭವಾಗುತ್ತೋ ಏನೋ? ವಿಜಯ ದೇವರಕೊಂಡಗಂತೂ ಸಖತ್ ಸಹಾಯವಾಗುತ್ತದೆ. ಅವರು ಯಾವುದಾದರು ಕಾರ್ಯಕ್ರಮಕ್ಕೆ ಬಂದಾಗ, ನವಸ್ತೆ ಕನ್ನಡ ಚಿತ್ರಪ್ರೇಮಿಗಳಿಗೆ ಅಂತ ಒಂದೆರಡು ಕನ್ನಡ ಮಾತಾಡುತ್ತಾರೆ. ಕನ್ನಡದಲ್ಲಿ ನನಗೆ ಅವರಿಷ್ಟ ಇವರಿಷ್ಟ ಅನ್ನೋ ಸೆಂಟಿಮೆಂಟ್ ಡೈಲಾಗ್​ ಹೇಳಿ ಇಲ್ಲಿನ ಚಿತ್ರಪ್ರೇಮಿಗಳ ಮಸ್ಸು ಗೆಲ್ಲುವ ಪ್ರಯತ್ನ ಮಾಡೋದು ಖಂಚಿತ. ಈ ಮೂಲಕ ತಮ್ಮ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತರಿಸಿಕೊಳ್ಳುತ್ತಾರೆ.

ಮುಂದೊಂದು ದಿನ ಕರ್ನಾಟಕದಲ್ಲಿಯೂ ದೊಡ್ಡ ಮಾರುಕಟ್ಟೆ ಸೃಷ್ಟಿಯಾದ ಮೇಲೆ, ನಮ್ಮ ಕನ್ನಡ ಚಿತ್ರಗಳಿಗೇನೆ ಪೈಪೋಟಿ ಕೊಡೋ ಮಟ್ಟಕ್ಕೆ ಬೆಳಿತಾರೆ. ಅಲ್ಲಿಗೆ ಅವರನ್ನ ಹೊತ್ತು ಮೆರೆಸುತ್ತಿರೋ ನಮ್ಮ ಕನ್ನಡ ಚಿತ್ರೋದ್ಯಮದ ಮಂದಿ ನಮಗೆ ಥಿಯೇಟರ್ ಸಮಸ್ಯೆ ಆಗುತ್ತಿದೆ ಅಂತ ಲಬೋ ಲಬೋ ಅಂತಾರೆ. ಇಷ್ಟೇ ತಾನೆ ಆಗೋದು???
Loading...

 

 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ