ಮೋಸ್ಟ್ ಡಿಸೈರಬಲ್​ ಮ್ಯಾನ್ 2018ರ​ ಪಟ್ಟಿಯಲ್ಲಿ 4ನೇ ಸ್ಥಾನ ಗಿಟ್ಟಿಸಿಕೊಂಡ ವಿಜಯ್​ ದೇವರಕೊಂಡ-14ನೇ ಸ್ಥಾನಕ್ಕೆ ತೃಪ್ತಿಪಟ್ಟ ರಾಕಿಂಗ್​ ಸ್ಟಾರ್ ​ಯಶ್​..!

ಪ್ರತಿವರ್ಷದಂತೆ ಟೈಮ್ಸ್​ ಸಂಸ್ಥೆ ನಡೆಸುವ ಮೋಸ್ಟ್​ ಡಿಸೈರಬಲ್​ ಮ್ಯಾನ್​ 2018 ಸಮೀಕ್ಷೆಯಲ್ಲಿ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಮೊದಲನೇ ಸ್ಥಾನ ಗಿಟ್ಟಿಸಿಕೊಂಡರೆ, ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್​ ದೇವರಕೊಂಡ 4ನೇ ಸ್ಥಾನದಲ್ಲಿದ್ದಾರೆ. ರಾಕಿಂಗ್​ ಸ್ಟಾರ್ ಯಶ್​ 14ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

Anitha E | news18
Updated:June 2, 2020, 4:04 PM IST
ಮೋಸ್ಟ್ ಡಿಸೈರಬಲ್​ ಮ್ಯಾನ್ 2018ರ​ ಪಟ್ಟಿಯಲ್ಲಿ 4ನೇ ಸ್ಥಾನ ಗಿಟ್ಟಿಸಿಕೊಂಡ ವಿಜಯ್​ ದೇವರಕೊಂಡ-14ನೇ ಸ್ಥಾನಕ್ಕೆ ತೃಪ್ತಿಪಟ್ಟ ರಾಕಿಂಗ್​ ಸ್ಟಾರ್ ​ಯಶ್​..!
ಮೋಸ್ಟ್​ ಡಿಸೈರಬಲ್​ ಮ್ಯಾನ್​ 2018
  • News18
  • Last Updated: June 2, 2020, 4:04 PM IST
  • Share this:
ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ ಅವರ ಖ್ಯಾತಿ ದಿನೇ ದಿನೇ ಹೆಚ್ಚುತ್ತಲೇ ಇದೆ. 'ಅರ್ಜುನ್​ ರೆಡ್ಡಿ' ಸಿನಿಮಾದ ನಂತರ ರಾತ್ರೋರಾತ್ರಿ ಸ್ಟಾರ್​ ಪಟ್ಟಕ್ಕೇರಿದ ನಟ ವಿಜಯ್​. ಟಾಲಿವುಡ್​ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.ನಟ ವಿಜಯ್​ ದೇವರಕೊಂಡ ಅವರು 'ಮೋಸ್ಟ್​ ಡಿಸೈರಬಲ್​ ಮ್ಯಾನ್​ 2108'ರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಖ್ಯಾತಿ ದೇಶದಾದ್ಯಂತ ವ್ಯಾಪ್ತಿಸುತ್ತಿರುವುದಕ್ಕೆ ಇದು ಒಂದು ಉದಾಹರಣೆ.ಟೈಮ್ಸ್​ ಸಂಸ್ಥೆ ಭಾರತದಲ್ಲಿ ನಡೆಸಿರುವ 'ಮೋಸ್ಟ್​ ಡಿಸೈರಬಲ್​ ಮ್ಯಾನ್​ 2108 ಸಮೀಕ್ಷೆಯಲ್ಲಿ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಮೊದಲ ಸ್ಥಾನ ಪಡೆದುಕೊಂಡರೆ, ವಿಜಯ್​ ದೇವರಕೊಂಡ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೃತಿಕ್​ ರೋಷನ್​, ಜಾನ್​ ಅಬ್ರಹಂ, ಸುಶಾಂತ್ ಸಿಂಗ್​ ಅವರನ್ನು ಹಿಂದಿಕ್ಕಿ ವಿಜಯ್​ ಈ ಸ್ಥಾನಕ್ಕೇರಿದ್ದಾರೆ.

ಉಳಿದಂತೆ ಬಹುಭಾಷಾ ನಟ ದುಲ್ಕರ್​ ಸಲ್ಮಾನ್ 9ನೇ ಸ್ಥಾನದಲ್ಲಿದ್ದರೆ, 12ನೇ ಸ್ಥಾನದಲ್ಲಿ ಬಾಹುಬಲಿ ಪ್ರಭಾಸ್​, ​14ನೇ ಸ್ಥಾನದಲ್ಲಿ ರಾಕಿಂಗ್​ ಸ್ಟಾರ್​ ಯಶ್ ಹಾಗೂ 43ನೇ ಸ್ಥಾನದಲ್ಲಿ ಧನುಷ್​ ಇದ್ದಾರೆ.

ಬೆಂಗಳೂರಿನ ಹಾಟ್ ಐಕಾನ್ ಯಾರು ಎಂಬ ಪ್ರಶ್ನೆ ಕೊಟ್ಟು ಬೆಂಗಳೂರು ಟೈಮ್ಸ್ 2013ರಲ್ಲಿ ಆನ್​ ಲೈನ್​ ವೋಟಿಂಗ್​ ನಡೆಸಿತ್ತು. ಆಗ 'ಮೋಸ್ಟ್ ಡಿಸೈರಬಲ್ ಮ್ಯಾನ್' ಆಗಿ ಕನ್ನಡ ಚಿತ್ರರಂಗದ ನಟ ಯಶ್ ಆಯ್ಕೆಯಾಗಿದ್ದರು. ಆದರೆ ರಾಷ್ಟ್ರಮಟ್ಟದಲ್ಲಿ ನಡೆದಿರುವ ಸಮೀಕ್ಷೆಯಲ್ಲಿ ಅವರು 14ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ.
First published: May 17, 2019, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading