• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Happy BirthDay Rashmika: ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್​ ದೇವರಕೊಂಡ ಕೊಟ್ಟ ಪ್ರೀತಿಯ ಕಾಣಿಕೆ ಏನು ಗೊತ್ತಾ..?

Happy BirthDay Rashmika: ರಶ್ಮಿಕಾ ಹುಟ್ಟುಹಬ್ಬಕ್ಕೆ ವಿಜಯ್​ ದೇವರಕೊಂಡ ಕೊಟ್ಟ ಪ್ರೀತಿಯ ಕಾಣಿಕೆ ಏನು ಗೊತ್ತಾ..?

ವಿಜಯ್​ ದೇವರಕೊಂಡ-ರಶ್ಮಿಕಾ

ವಿಜಯ್​ ದೇವರಕೊಂಡ-ರಶ್ಮಿಕಾ

ಕನ್ನಡದ ಕಿರಿಕ್​ ಹುಡುಗಿ ರಶ್ಮಿಕಾ ಈಗ ಟಾಲಿವುಡ್​ ಲಿಲ್ಲ. ಹೀಗೆಂದು ಹೇಳುತ್ತಿರುವುದು ನಾವಲ್ಲ. ನಟ ವಿಜಯ್​ ದೇವರಕೊಂಡ ರಶ್ಮಿಕಾರನ್ನು ಡಿಯರ್ ಲಿಲ್ಲಿ ಎಂದು ಬರೆದಿರುವ ಟ್ವೀಟ್​ ವೈರಲ್​ ಆಗುತ್ತಿದ್ದು, ಇಂದು ರಶ್ಮಿಕಾ ಹುಟ್ಟುಹಬ್ಬಕ್ಕೆ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.

ಮುಂದೆ ಓದಿ ...
 • News18
 • 4-MIN READ
 • Last Updated :
 • Share this:
  top videos

   - ಅನಿತಾ ಈ, 

   ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ಹೀಗಿರುವಾಗ ಅವರ ಸಹ ಕಲಾವಿದ ಹಾಗೂ ಸ್ನೇಹಿತ ವಿಜಯ್​ ದೇವರಕೊಂಡ ಸುಮ್ಮನಿರಲು ಹೇಗೆ ಸಾಧ್ಯ.

   ಇದನ್ನೂ ಓದಿ: ಹೊಸ ದಾಖಲೆ ಬರೆದ ಟಾಲಿವುಡ್​ ನಟ ನಾಗಾರ್ಜುನ: ಇದನ್ನು ಪ್ರಪಂಚದ ಸಿನಿ ರಂಗದಲ್ಲಿ ಯಾರೂ ಮಾಡಿರಲಾರರು..!

   ಅದರಲ್ಲೂ ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಹೆಸರು ಈಗಾಗಲೇ ತಳುಕು ಹಾಕಿಕೊಂಡಿದ್ದು, ತೆರೆ ಮೇಲೆ ಅವರಿಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಈ ಇಬ್ಬರೂ ಸದ್ಯ 'ಡಿಯರ್​ ಕಾಮ್ರೇಡ್​' ಸಿನಿಮಾದ ಚಿತ್ರೀಕರಣದಲ್ಲಿ ಒಟ್ಟಿಗೆ ಭಾಗಿಯಾಗುತ್ತಿದ್ದಾರೆ.

   ಇಷ್ಟೆಲ್ಲ ಇರುವಾಗ ವಿಜಯ್​ ದೇವರಕೊಂಡ ತಮ್ಮ ಪ್ರೀತಿಯ ಲಿಲ್ಲಿ ರಶ್ಮಿಕಾಗೆ ಕೇವಲ ಹುಟ್ಟುಹಬ್ಬದ ವಿಶ್​ ಮಾಡಿದರೆ ಹೇಗೆ. ಅವರು ಶುಭ ಕೋರುವುದರಲ್ಲೂ ಒಂದು ವಿಶೇಷತೆ ಇರಬೇಕಲ್ಲವೆ. ಅದಕ್ಕೆ ಅವರು ರಶ್ಮಿಕಾಗೆ ಒಂದು ಸರ್ಪ್ರೈಸ್​ ಗಿಫ್ಟ್​ ಕೊಟ್ಟಿದ್ದಾರೆ. ಅದನ್ನು ನೋಡಿದ ಮೇಲಂತೂ ರಶ್ಮಿಕಾ ದಂಗಾಗಿದ್ದಾರೆ. ಏನು ಆ ಗಿಫ್ಟ್​ ಅಂತೀರಾ ಇಲ್ಲಿದೆ ನೋಡಿ.

       ರಶ್ಮಿಕಾಗಾಗಿ ವಿಜಯ್​ ಒಂದು ವಿಡಿಯೋ ಮಾಡಿದ್ದು, ಅದನ್ನು ನೋಡಿದರೆ ಸಾಕು ನಿಮ್ಮ ಮುಖ ಅರಳಿ ಬಿಡುತ್ತದೆ. ಹೀಗಿರುವಾಗ ರಶ್ಮಿಕಾಗೆ ಹೇಗೆ ಆಗಿರಬೇಡ. ವಿಜಯ್​ ಕೊಟ್ಟ ಉಡುಗೊರೆಗೆ ರಶ್ಮಿಕಾ ಪ್ರತಿಕ್ರಿಯೆ ಹೇಗಿದೆ ನೀವೇ ಓದಿ.


   'ನೀವು ಮಾಡಿರುವ ವಿಡಿಯೋದಿಂದ ನನ್ನ ಅಭಿಮಾನಿಗಳಿಗೆ ಒಂದು ಸುತ್ತು ಹಾರ್ಟ್​ ಆಟ್ಯಾಕ್​  ಆಗುವಂತೆ ಮಾಡಿದೆ' ಎಂದು ರಶ್ಮಿಕಾ ಟ್ವೀಟ್​ ಮಾಡಿದ್ದಾರೆ.

   ಅಷ್ಟೇ ಅಲ್ಲ ವಿಜಯ್​ ದೇವರಕೊಂಡ ಹಾಗೂ ಅವರ 'ಡಿಯರ್​ ಕಾಮ್ರೆಡ್​' ಸಿನಿ ತಂಡವರು ರಶ್ಮಿಕಾ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಉಡುಗೊರೆ ಕೊಡಲು ನಿರ್ಧರಿಸಿದ್ದಾರೆ. 'ಈ ಚಿತ್ರದ ಮೊದಲ ಹಾಡನ್ನು ರಶ್ಮಿಕಾ ಹುಟ್ಟುಹಬ್ಬಕ್ಕೆ ಸಮರ್ಪಿಸಲಾಗುವುದು. ಈ ಹಾಡನ್ನು ಇದೇ ತಿಂಗಳ 8ರಂದು ಬೆಳಿಗ್ಗೆ 11.11ಕ್ಕೆ ಬಿಡುಗಡೆ ಮಾಡಲಾಗುವುದು' ಎಂದು ವಿಜಯ್​ ದೇವರಕೊಂಡ ಟ್ವೀಟ್​ ಮಾಡಿದ್ದಾರೆ.

   Dear Lilly,


   ಇನ್ನೂ ಈಗ ರಶ್ಮಿಕಾ ಹೆಸರು ಲಿಲ್ಲಿ ಅಂತೆ. ಅದು ವಿಜಯ್ ದೇವರಕೊಂಡ ಕೊಟ್ಟಿರುವುದು ಎಂದು ಕೆಲವರು ತಿಳಿದುಕೊಂಡಿದ್ದಾರೆ. ಆದರೆ 'ಡಿಯರ್​ ಕಾಮ್ರೆಡ್' ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಹೆಸರು ಲಿಲ್ಲಿ. ಅದಕ್ಕಾಗಿಯೇ ಈಗ ಕೊಡಗಿನ ಬೆಡಗಿ ಲಿಲ್ಲಿ ಎಂದೇ ಕರೆಯಲ್ಪಡುತ್ತಿದ್ದಾರೆ.

   ಇದನ್ನೂ ಓದಿ: 20 ವರ್ಷಗಳ ನಂತರ ತೆರೆ ಹಂಚಿಕೊಳ್ಳಲಿದ್ದಾರೆ ಬಾಲಿವುಡ್​ ಬಿಗ್​-ಬಿ ಅಮಿತಾಭ್​-ರಮ್ಯಾ ಕೃಷ್ಣ

   ಒಟ್ಟಾರೆ ಸ್ಯಾಂಡಲ್​ವುಡ್​ನಿಂದ ಟಾಲಿವುಡ್​ಗೆ ಸಿನಿ ಪಯಣ ಬೆಳಸಿದ ಕನ್ನಡದ ಹುಡುಗಿ ಹೀಗೆ ನೂರಾರು ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುತ್ತಾ ಖುಷಿಯಾಗಿರಲಿ ಎಂದು ಹಾರೈಸೋಣ.

   PHOTOS: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಪ್ರಿಯಾ ವಾರಿಯರ್​ರ ಈ ಚಿತ್ರಗಳು..!

   First published: