Khushi Film: ಖುಷಿ ಫಿಲ್ಮ್​ ಟೈಟಲ್​ ಟ್ರ್ಯಾಕ್​ ರಿಲೀಸ್​ - ಮತ್ತೆ ಮೋಡಿ ಮಾಡಿದ ಸಮಂತಾ, ದೇವರಕೊಂಡ ಜೋಡಿ

Samantha - Vijaya Devarakonda: ಈ ಬಗ್ಗೆ ವಿಜರ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣದ ಸಮಯದಲ್ಲಿ ಅವರ ಕ್ಷಣಗಳನ್ನು ಒಳಗೊಂಡ ಖುಶಿ ಟ್ರ್ಯಾಕ್‌ನ ಪ್ರೊಮೊ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

title track release

title track release

  • Share this:
ರೌಡಿ ಸ್ಟಾರ್ ಎಂದೇ ಖ್ಯಾತರಾಗಿರುವ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ತಮ್ಮ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾರೆ. ಹೆಸರು ‘ಖುಶಿ (Kushi)’. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಸುಂದರಿ ಸಮಂತಾ (Samantha) ನಟಿಸುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಖುಷಿ'ಯಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ಅಭಿಮಾನಿಗಳಿಗೆ (Fans) ಬಹಳ ಸಂತವನ್ನು ಉಂಟು ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರ ಡಿಸೆಂಬರ್ 23 ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಜೋಡಿ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದೆ. ಇದೀಗ ಈ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದ್ದು, ಅದ್ಭುತ ಪ್ರತಿಕ್ರಿಯೆ ಲಭಿಸಿದೆ.

ಈ ಬಗ್ಗೆ ವಿಜರ್ ದೇವರಕೊಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣದ ಸಮಯದಲ್ಲಿ ಅವರ ಕ್ಷಣಗಳನ್ನು ಒಳಗೊಂಡ ಖುಶಿ ಟ್ರ್ಯಾಕ್‌ನ ಪ್ರೊಮೊ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಜೋಡಿಗಳ ಕೆಮಿಸ್ಟ್ರಿ ಪರದೆಯ ಮೇಲೆ ಮೋಡಿ ಮಾಡುತ್ತಿದ್ದು, ಇದರ ಪೂರ್ತಿ ಹಾಡನ್ನು ಕೇಳಬೇಕು ಎಂದು ಅನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಮಂತಾ - ವಿಜಯ್ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ

ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶೀರ್ಷಿಕೆ ಟ್ರ್ಯಾಕ್ ಅನ್ನು ಹಂಚಿಕೊಂಡ ವಿಜಯ್ ದೇವರಕೊಂಡ, ನಿಮ್ಮ ಅಗಾಧವಾದ ಪ್ರೀತಿಯಿಂದ ನಮಗೆ ಬಹಳ ಸಂತೋಷವಾಗಿದೆ. ಈ ಎಲ್ಲಾ ಪ್ರೀತಿಯನ್ನು ನಾವು ಈ ಕ್ರಿಸ್‌ಮಸ್‌ನಲ್ಲಿ ದೊಡ್ಡ ಪರದೆಯ ಮೇಲೆ ತರುತ್ತೇವೆ - ಹೊಸ ವರ್ಷದ ಮಧ್ಯೆ ನೀವು ಈ ಚಿತ್ರವನ್ನು ಎಂಜಾಯ್ ಮಾಡಬಹುದು. ಈಗ ನೀವು ಅತಿಯಾಗಿ ಪ್ರೀತಿಸುವ ಖುಷಿ ಚಿತ್ರದ ಟೈಟಲ್ ಟ್ರ್ಯಾಕ್ ಇಲ್ಲಿದೆ.

ಇದನ್ನೂ ಓದಿ: ಸಿನಿಮಾದಲ್ಲಿ ಆಕ್ಷನ್ ಹೇಗೆ ಪ್ಲಾನ್ ಮಾಡ್ತಾರೆ ನೋಡಿ, ಖುದ್ದು ಪ್ರಶಾಂತ್ ನೀಲ್ ಹೇಳಿದ್ದಾರೆ

ಈ ಚಿತ್ರ ಡಿಸೆಂಬರ್ 23 ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು. ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ." ಇತ್ತೀಚಿಗೆ ಬಿಡುಗಡೆಯಾದ ಚಿತ್ರದ, ಫಸ್ಟ್ ಲುಕ್ ಮತ್ತು ಬಿಟಿಎಸ್ ವಿಡಿಯೋಗಳಲ್ಲಿ ಇಬ್ಬರ ಕೆಮಿಸ್ಟಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಅಭಿಮಾನಿಗಳು ಈ ಚಿತ್ರವನ್ನು ದೊಡ್ಡ ಪರದೆಯಲ್ಲಿ ಒಟ್ಟಿಗೆ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.ಹೃದಯಂ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ ಮತ್ತು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. ಅವರು ಮಾನವೀಯ ಸಂಬಂಧಗಳು ಮತ್ತು ಭಾವನೆಗಳ ವಿಷಯದ ಆಧಾರವಾಗಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖ ನಿರ್ಮಾಣ ಸಂಸ್ಥೆಯಾದ ಮೈತ್ರೀ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಖುಶಿ ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಸೇರಿದಂತೆ ಇತರ ನಟ, ನಟಿಯರಿದ್ದಾರೆ.

ಇದನ್ನೂ ಓದಿ: ರೊಮ್ಯಾಂಟಿಕ್​ ಚಿತ್ರದಲ್ಲಿ ಸಮಂತಾ - ವಿಜಯ್​ ದೇವರಕೊಂಡ, ಖುಷಿ ಚಿತ್ರದ ಮೋಷನ್​ ಪೋಸ್ಟರ್​ ರಿಲೀಸ್​

ಹೆಚ್ಚಿನ ನಿರೀಕ್ಷೆಯಲ್ಲಿರುವ ಅಭಿಮಾನಿಗಳು

ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿದ್ದ ನಿನ್ನುಕೋರಿ ಸಿನಿಮಾದ ಮೂಲಕ ನಿರ್ದೇಶಕರಾದ ಶಿವ ನಿರ್ವಾಣ ಚೊಚ್ಚಲ ಸಿನಿಮಾದಿಂದಲೇ ಸೂಪರ್ ಹಿಟ್ ನಿರ್ದೇಶ ಎನಿಸಿಕೊಂಡವರು. ಅದರ ನಂತರ, ಚೈತನ್ಯ, ಮಜಿಲಿ ಎಂಬ ಹೆಸರಿನ ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಬಿಡುಗಡೆಯಾಗಿ ಮತ್ತೊಂದು ಸೂಪರ್ ಹಿಟ್ ಚಿತ್ರ ಆಗಿತ್ತು. ಅದಾದ ನಂತರ ನಾನಿ ಜೊತೆಗಿನ ಟೀಕೆ ಜಗದೀಶ್ ಸಿನಿಮಾಗೆ ಅವರು ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಇದೀಗ ‘ಖುಶಿ ಚಿತ್ರದ ಮೂಲಕ ಇನ್ನಷ್ಟು ಯಶಸ್ಸು ಗಳಿಸಲು ಶಿವ ನಿರ್ವಾಣ ಸಜ್ಜಾಗಿದ್ದಾರೆ.
Published by:Sandhya M
First published: