ರೌಡಿ ಸ್ಟಾರ್ ಎಂದೇ ಖ್ಯಾತರಾಗಿರುವ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ತಮ್ಮ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾರೆ. ಹೆಸರು ‘ಖುಶಿ (Kushi)’. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಸುಂದರಿ ಸಮಂತಾ (Samantha) ನಟಿಸುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಖುಷಿ'ಯಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ಅಭಿಮಾನಿಗಳಿಗೆ (Fans) ಬಹಳ ಸಂತವನ್ನು ಉಂಟು ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರ ಡಿಸೆಂಬರ್ 23 ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಜೋಡಿ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದೆ. ಸೋಮವಾರ ಚಿತ್ರತಂಡ ‘ಖುಷಿ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ (Motion Poster) ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಚಿತ್ರಕ್ಕೆ ಶಿವ ನಿರ್ವಾಣ ನಿರ್ದೇಶನ
ಈ ಚಿತ್ರವನ್ನು ನಿರ್ದೇಶಕ ಶಿವ ನಿರ್ವಾಣ ನಿರ್ದೇಶನ ಮಾಡಿದ್ದು, ಅವರು ಮಾನವೀಯ ಸಂಬಂಧಗಳು ಮತ್ತು ಭಾವನೆಗಳ ವಿಷಯದ ಆಧಾರವಾಗಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖ ನಿರ್ಮಾಣ ಸಂಸ್ಥೆಯಾದ ಮೈತ್ರೀ ಮೂವೀ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ:ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ ಪುಷ್ಪ ಸುಂದರಿ - ಫೋಟೋ ನೋಡಿ ಕ್ಯೂಟ್ ಎಂದ ಅಭಿಮಾನಿಗಳು
ಖುಶಿ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ನೋಡಿದರೆ ವಿಜಯ್ ದೇವರಕೊಂಡ ಮತ್ತು ಸಮಂತಾ ನವ ದಂಪತಿಯಂತೆ ಕಾಣುತ್ತಿದ್ದಾರೆ. ಆದರೆ ಇಬ್ಬರ ಮನಸ್ಥಿತಿಗಳು ಬೇರೆ ಬೇರೆ ಎಂದು ಕಾಣಿಸಿಸುತ್ತದೆ. ಚಿತ್ರವು ಮನರಂಜನೆಯ ಜೊತೆಗೆ ಮಾಹಿತಿಯನ್ನೂ ನೀಡುತ್ತದೆ. ಸದ್ಯ ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ.
ಅದ್ಭುತ ನಟ-ನಟಿಯರ ದಂಡಿದೆ ಈ ಚಿತ್ರದಲ್ಲಿ
ಖುಷಿ ಒಂದು ಸುಂದರ ರೋಮ್ಯಾಂಟಿಕ್ ಚಿತ್ರ ಆಗಲಿದೆ ಎಂದು ಪೋಸ್ಟರ್ ಹೇಳುತ್ತಿದೆ. ಅಲ್ಲದೇ ಈ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಡುವಿನ ಕಾಂಬಿನೇಶನ್ ಹೆಚ್ಚು ಗಮನ ಸೆಳೆಯುತ್ತಿದೆ. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಅಭಿನಯಿಸುತ್ತಿರುವ ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮರಾ ಕೆಲಸ, ಹೇಶಮ್ ಅಬ್ದುಲ್ ವಹಾಬ್ ಸಂಗೀತವಿದೆ.
ಇದನ್ನೂ ಓದಿ: ಭಾವನೆಗಳೇ ಬದುಕು ಎನ್ನುವ 'ಚಾರ್ಲಿ' - ರಕ್ಷಿತ್ ಸಿನೆಮಾದ ಟ್ರೇಲರ್ ನೋಡಿ ಎಮೋಷನಲ್ ಆದ ಅಭಿಮಾನಿಗಳು
ನ್ಯಾಚುರಲ್ ಸ್ಟಾರ್ ನಾನಿ ನಾಯಕನಾಗಿ ನಟಿಸಿದ್ದ ನಿನ್ನುಕೋರಿ ಸಿನಿಮಾದ ಮೂಲಕ ನಿರ್ದೇಶಕರಾದ ಶಿವ ನಿರ್ವಾಣ ಚೊಚ್ಚಲ ಸಿನಿಮಾದಿಂದಲೇ ಸೂಪರ್ ಹಿಟ್ ನಿರ್ದೇಶ ಎನಿಸಿಕೊಂಡವರು. ಅದರ ನಂತರ, ಚೈತನ್ಯ, ಮಜಿಲಿ ಎಂಬ ಹೆಸರಿನ ಮತ್ತೊಂದು ಫ್ಯಾಮಿಲಿ ಎಂಟರ್ಟೈನರ್ ಬಿಡುಗಡೆಯಾಗಿ ಮತ್ತೊಂದು ಸೂಪರ್ ಹಿಟ್ ಚಿತ್ರ ಆಗಿತ್ತು. ಅದಾದ ನಂತರ ನಾನಿ ಜೊತೆಗಿನ ಟೀಕೆ ಜಗದೀಶ್ ಸಿನಿಮಾಗೆ ಅವರು ನಿರೀಕ್ಷಿಸಿದ ಯಶಸ್ಸು ಸಿಗಲಿಲ್ಲ. ಇದೀಗ ‘ಖುಶಿ ಚಿತ್ರದ ಮೂಲಕ ಇನ್ನಷ್ಟು ಯಶಸ್ಸು ಗಳಿಸಲು ಶಿವ ನಿರ್ವಾಣ ಸಜ್ಜಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ