Rajesh DuggumaneRajesh Duggumane
|
news18 Updated:July 24, 2019, 10:59 AM IST
ರಶ್ಮಿಕಾ-ಕರಣ್
- News18
- Last Updated:
July 24, 2019, 10:59 AM IST
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ತೆಲುಗಿಗೆ ರಿಮೇಕ್ ಆಗಿತ್ತು. ಈಗ ಅದು ಬಾಲಿವುಡ್ಗೂ ರಿಮೇಕ್ ಆಗುತ್ತಿದೆ. ಅಚ್ಚರಿ ಎಂದರೆ ರಶ್ಮಿಕಾ ಮಂದಣ್ಣ ಅವರ ಮತ್ತೊಂದು ಸಿನಿಮಾ ಈಗ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದೆ. ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ಚಿತ್ರದ ರಿಮೇಕ್ ಹಕ್ಕು ಮಾರಾಟವಾಗಿರುವುದು ವಿಶೇಷ!
ಅಷ್ಟಕ್ಕೂ ಯಾವುದು ಆ ಚಿತ್ರ? ‘ಡಿಯರ್ ಕಾಮ್ರೇಡ್’! ಹೌದು, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಎರಡನೇ ಬಾರಿಗೆ ಒಟ್ಟಾಗಿ ನಟಿಸಿರುವ ಈ ಚಿತ್ರ, ಶುಕ್ರವಾರ ತೆರೆಗೆ ಬರುತ್ತಿದೆ. ಈ ಚಿತ್ರ ತೆಲುಗು, ಕನ್ನಡ, ಹಿಂದಿ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗೆ ಆಗಲಿದೆ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದಕ್ಕೆ ಅಸಲಿ ಕಾರಣ ಈಗ ಬಯಲಾಗಿದೆ. 'ಡಿಯರ್ ಕಾಮ್ರೇಡ್' ಬಾಲಿವುಡ್ಗೆ ರಿಮೇಕ್ ಆಗುತ್ತಿರುವುದರಿಂದ ಹಿಂದಿಗೆ ಡಬ್ ಆಗುತ್ತಿಲ್ಲ.
‘ಡಿಯರ್ ಕಾಮ್ರೇಡ್’ ಚಿತ್ರವನ್ನು ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ನೋಡಿ ಅವರು ಮನಸೋತಿದ್ದಾರಂತೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಕರಣ್, “ಇದು ಒಂದು ಅದ್ಬುತ ಪ್ರೇಮ ಕಥೆ. ಸಂಗೀತ ತುಂಬ ಉತ್ತಮವಾಗಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅಭಿನಯ ಉತ್ತಮವಾಗಿದೆ. ಧರ್ಮ ಮೂವಿಸ್ ಇದನ್ನು ರಿಮೇಕ್ ಮಾಡುತ್ತಿದೆ,” ಎಂದಿದ್ದಾರೆ.
ಸದ್ಯ ಈ ವಿಚಾರ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಸಂತಸವನ್ನು ಹೆಚ್ಚಿಸಿದೆ. ಈ ಮೊದಲು ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾ ‘ಕಬೀರ್ ಸಿಂಗ್’ ಹೆಸರಲ್ಲಿ ಹಿಂದಿಯಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಭಾರತದ ಬಾಕ್ಸ್ ಆಫೀಸ್ನಲ್ಲಿ 271 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರ ಕೂಡ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿ ಕರಣ್ ಇದ್ದಾರೆ.
First published:
July 24, 2019, 10:54 AM IST