Vijay Devarakonda: ವರ್ಲ್ಡ್​ ಫೇಮಸ್​ ಲವರ್ ಆದ ವಿಜಯ್​ ದೇವರಕೊಂಡ: ಖುಷಿಯಲ್ಲಿ ಮಹಿಳಾ ಅಭಿಮಾನಿಗಳು ​..!

World Famous Lover: ಡಿಯರ್ ಕಾಮ್ರೇಡ್​ ಅಭಿಮಾನಿಗಳನ್ನು ರಂಜಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದಾದ ನಂತರ ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ವಿಜಯ್​ ಅಭಿನಯಿಸಲಿರುವ ಸುದ್ದಿ ಹೊರ ಬಿದ್ದಿತ್ತು. ಈಗ ವಿಜಯ್​ ದೇವರಕೊಂಡ ಅವರ ಮತ್ತೊಂದು ಹೊಸ ಸಿನಿಮಾದ ಟೈಟಲ್​ ರಿವೀಲ್ ಆಗಿದೆ.

Anitha E | news18-kannada
Updated:September 17, 2019, 3:19 PM IST
Vijay Devarakonda: ವರ್ಲ್ಡ್​ ಫೇಮಸ್​ ಲವರ್ ಆದ ವಿಜಯ್​ ದೇವರಕೊಂಡ: ಖುಷಿಯಲ್ಲಿ ಮಹಿಳಾ ಅಭಿಮಾನಿಗಳು ​..!
ವರ್ಲ್ಡ್​ ಫೇಮಸ್​ ಲವರ್​ ಆದ ವಿಜಯ್​ ದೇವರಕೊಂಡ
  • Share this:
'ಅರ್ಜುನ್​ ರೆಡ್ಡಿ' ಸಿನಿಮಾದಿಂದಾಗಿ ವಿಜಯ್​ ದೇವರಕೊಂಡ ರಾತ್ರೋರಾತ್ರಿ ಸ್ಟಾರ್​ ಪಟ್ಟಕ್ಕೇರಿದರು. ಜತೆಗೆ ಸಾಕಷ್ಟು ಮಂದಿ ಅಭಿಮಾನಿಗಳನ್ನೂ ಸಂಪಾದಿಸಿಕೊಂಡರು. ಈ ಚಿತ್ರದ ನಂತರ ವಿಜಯ್​ ಹಾಗೂ ರಶ್ಮಿಕಾ ಅಭಿನಯದ 'ಗೀತ ಗೋವಿಂದಂ' ಸಿನಿಮಾ ಸಹ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಿತ್ತು. ನಂತರ ಇದೇ ಜೋಡಿ 'ಡಿಯರ್​ ಕಾಮ್ರೇಡ್​' ಸಿನಿಮಾದಲ್ಲಿ ಮೋಡಿ ಮಾಡುವಲ್ಲಿ ಸೋತಿತ್ತು.

ಆದರೂ 'ಡಿಯರ್ ಕಾಮ್ರೇಡ್​' ಅಭಿಮಾನಿಗಳನ್ನು ರಂಜಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿತ್ತು. ಇದಾದ ನಂತರ ಪೂರಿ ಜಗನ್ನಾಥ್​ ನಿರ್ದೇಶನದಲ್ಲಿ ವಿಜಯ್​ ಅಭಿನಯಿಸಲಿರುವ ಸುದ್ದಿ ಹೊರ ಬಿದ್ದಿತ್ತು. ಈಗ ವಿಜಯ್​ ದೇವರಕೊಂಡ ಅವರ ಮತ್ತೊಂದು ಹೊಸ ಸಿನಿಮಾದ ಟೈಟಲ್​ ರಿವೀಲ್ ಆಗಿದೆ.

Vijay Devarakonda, Not Yash to Star in Puri Jagannadh's Next Film
ಪೂರಿ ಜಗನ್ನಾಥ್​, ವಿಜಯ್​ ದೇವರಕೊಂಡ ಹಾಗೂ ನಟಿ ಚಾರ್ಮಿ


ಹೌದು, 'ಅರ್ಜುನ್​ ರೆಡ್ಡಿ'ಯಲ್ಲಿ ಪ್ರಾಮಾಣಿಕ ಪ್ರೇಮಿಯಾಗಿದ್ದ ವಿಜಯ್​ ದೇವರಕೊಂಡ ಈಗ #WorldFamousLover ಆಗಿದ್ದಾರೆ. ಇದು ದೇವಕೊಂಡ ಅಭಿನಯಿಲಿರುವ ಹೊಸ ಸಿನಿಮಾದ ಶೀರ್ಷಿಕೆ. ಇದನ್ನು ವಿಜಯ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.


ಕ್ರಿಯೇಟಿವ್​ ಕಮರ್ಷಿಯಲ್ ಬ್ಯಾನರ್​ನಲ್ಲಿ ಸೆಟ್ಟೇರಲಿರುವ 'ವರ್ಲ್ಡ್​ ಫೇಮಸ್​ ಲವರ್​' ಸಿನಿಮಾವನ್ನು ಕ್ರಾಂತಿ ಮಾಧವ್​ ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ರಾಶಿ ಖನ್ನಾ, ಇಸಾಬೆಲ್ಲಾ, ಐಶ್ವರ್ಯಾ ರಾಜೇಶ್​ ಹಾಗೂ ಕ್ಯಾಥರೀನ್​ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Saaho collections: ಸಾಹೋ ಎಫೆಕ್ಟ್​: ಲಾಭದಲ್ಲಿ ನಿರ್ಮಾಪಕರು, ನಷ್ಟ ಹೋದ ವಿತರಕರು..!

ಈಗಾಗಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಈಗ ಅದಕ್ಕೆ ಶೀರ್ಷಿಕೆ ಫಿಕ್ಸ್​ ಮಾಡಲಾಗಿದೆ. ಜತೆಗೆ ಸಿನಿಮಾ ಪ್ರಚಾರದ ಕಾರ್ಯವನ್ನೂ ಆರಂಭಿಸಿದೆ ಚಿತ್ರತಂಡ. ಇನ್ನು ಈ ಚಿತ್ರದ ಫಸ್ಟ್​ಲುಕ್ ಸೆ.20ಕ್ಕೆ ಬಿಡುಗಡೆಯಾಗಲಿದೆ.

ಬೆಂಗಳೂರಿನಿಂದ ಬಾಲಿವುಡ್​ವರೆಗೂ ಪಯಣ ಬೆಳೆಸಿದ ಕನ್ನಡಿಗ ಈಗ ರಿಷಭ್​ ಶೆಟ್ಟಿ ಸಿನಿಮಾದಲ್ಲಿ..!


 
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ