ದಸರಾಗೆ ಸೆಟ್ಟೇರಲಿದೆ ವಿಜಯ್​ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಸಿನಿಮಾ..!

news18
Updated:October 12, 2018, 5:24 PM IST
ದಸರಾಗೆ ಸೆಟ್ಟೇರಲಿದೆ ವಿಜಯ್​ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಸಿನಿಮಾ..!
news18
Updated: October 12, 2018, 5:24 PM IST
ನ್ಯೂಸ್​ 18 ಕನ್ನಡ 

ಟಾಲಿವುಡ್​ನ ರೌಡಿ ಸಿಎಂ ವಿಜಯ್​ ದೇವರಕೊಂಡ ಏನೇ ಮಾಡಿದರೂ ಈಗ ಅದು ಸುದ್ದಿಯಾಗುತ್ತೆ. ಅಷ್ಟರ ಮಟ್ಟಿಗೆ ಅವರಿಗೆ ಅಭಿಮಾನಿಗ ಬಳಗವಿದೆ. ಮಾಡಿದ್ದು ಬೆರೆಳೆಣಿಕೆ ಸಿನಿಮಾಗಳಾದರೂ ತಮ್ಮ ಅಭಿನಯದಿಂದ ಸಾಕಷ್ಟು ಹೆಸರು ಸಂಪಾದಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ತೆರೆಕಂಡ 'ನೋಟಾ' ಸಿನಿಮಾದ ಸೋಲಿನಿಂದಾಗಿ ಧೈರ್ಯಗೆಡದ ವಿಜಯ್​ ತಮ್ಮನ್ನು ಟೀಕಿಸುವವರು ಹಾಗೂ ಅಣಕಿಸುವವರಿಗೆ ಬಹಿರಂಗ ಪತ್ರವನ್ನು ಬರೆದಿದ್ದರು. ಅದು ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿತ್ತು.

ಈಗ ಸದ್ಯ ಅವರ ಹೊಸ ಸಿನಿಮಾದ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಹೌದು ಪ್ರೋಡಕ್ಷನ್​ ನಂ 46 ಬ್ಯಾನರ್​ ಅಡಿ ಈ ಬಾರಿ ವಿಜಯ್​ ಅಭಿನಯಿಸಲಿದ್ದಾರೆ. 'ಒನಮಾಲು', 'ಮಳ್ಳಿ ಮಳ್ಳಿ ಇದಿ ರಾನಿ ರೋಜು' ಗಳಂತಹ ಸಿನಿಮಾಗಳನ್ನು ನಿರ್ದೇಶಿಸಿದ ಕ್ರಾಂತಿ ಮಾಧವ್​ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.ಅ.18 ಅಂದರೆ ದಸರಾ ಹಬ್ಬದಂದೇ ಈ ಚಿತ್ರ ಸೆಟ್ಟೇರಲಿದೆ. ಅಂದೇ ಸಿನಿಮಾದ ತಾರಾಗಣ ಹಾಗೂ ಇತರೆ ವಿವರಗಳನ್ನು ಬಹಿರಂಗಪಡಿಸಲಾಗುವುದು ಎನ್ನಲಾಗುತ್ತಿದೆ.

ರಾಶಿ ಖನ್ನಾ, ಐಶ್ವರ್ಯಾ ರಾಜೇಶ್​ ಹಾಗೂ ಇಸಾಬೆಲ್ಲ ಡಿ  ನಾಯಕಿಯರಾಗಿ ಅಭಿನಯಿಸುತ್ತಿದ್ದು, ಗೋಪಿ ಸುಂದರ್​ ಸಂಗೀತ ನೀಡುತ್ತಿದ್ದಾರೆ. 'ಉಂಗರಾಲ ರಾಂಬಾಬು' ಎಂಬ ಫ್ಲಾಪ್​ ಸಿನಿಮಾ ನೀಡಿದ ನಂತರ ಕ್ರಾಂತಿ ಮಾಧವ್​ ಈ ಹೊಸ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
Loading...

ವಿಜಯ್​ ದೇವರಕೊಂಡ ಸಹ ಸದ್ಯ 'ನೋಟಾ' ಸಿನಿಮಾದ ಸೋಲಿನ ನಂತರ ಹೊಸ ಸಿನಿಮಾಗೆ ಸಹಿ ಹಾಕಿದ್ದು, ನಿರ್ದೇಶಕ ಸಹ ಫ್ಲಾಪ್​ ಸಿನಿಮಾ ನೀಡಿದ ನಂತರ ಮತ್ತೊಂದು ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ.
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...