HOME » NEWS » Entertainment » VIJAY DEVARAKONDA ACTED MOVIE LIGER WILL RELEASED ON SEPTEMBER 9TH RHHSN HTV

Liger Movie: ಓಟಿಟಿ ಆಫರ್ ರಿಜೆಕ್ಟ್, ಸೆ. 9ರಂದು ತೆರೆಗೆ ಬರಲಿದೆ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ

ಲೈಗರ್ ಚಿತ್ರದ ಟೈಟಲ್ ಅನೌನ್ಸ್ ಆದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಲಯನ್ ಮತ್ತು ಟೈಗರ್ ಅರ್ಥಾತ್ ಸಿಂಹ ಮತ್ತು ಹುಲಿ, ಎರಡು ಪ್ರಾಣಿಗಳ ಹೆಸರನ್ನು ಸೇರಿಸಿ ಲೈಗರ್ ಅಂತ ನಿರ್ದೇಶಕ ಪೂರಿ ಜಗನ್ನಾಥ್ ಶೀರ್ಷಿಕೆ ಫೈನಲ್ ಮಾಡಿದ್ದರು.

news18-kannada
Updated:June 22, 2021, 8:43 PM IST
Liger Movie: ಓಟಿಟಿ ಆಫರ್ ರಿಜೆಕ್ಟ್, ಸೆ. 9ರಂದು ತೆರೆಗೆ ಬರಲಿದೆ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ
ವಿಜಯ್ ದೇವರಕೊಂಡ
  • Share this:
2017ರಲ್ಲಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ರಾತ್ರೋ ರಾತ್ರಿ ಸೂಪರ್‌ಸ್ಟಾರ್ ಪಟ್ಟಕ್ಕೇರಿದ ನಟ ವಿಜಯ್ ದೇವರಕೊಂಡ. ಆ ಬಳಿಕ ಹಾಗೊಂದು ಹಿಟ್, ಹೀಗೊಂದು ಫ್ಲಾಪ್ ಕೊಟ್ಟರೂ, ಈ ರೌಡಿ ಹುಡುಗನಿಗೆ ಬೇಡಿಕೆ ಕಡಿಮೆ ಆಗಿಲ್ಲ. ಅದರಲ್ಲಂತೂ ಈಗೀಗ ನನ್ನ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆದರೆ 200 ಕೋಟಿ ರೂಪಾಯಿಗೂ ಜಾಸ್ತಿ ಗಳಿಕೆ ಮಾಡುತ್ತೆ, ಹೀಗಿರುವಾಗ ಕೇವಲ ಅಷ್ಟು ಹಣಕ್ಕೆ ಓಟಿಟಿಗೆ ಯಾಕೆ ಮಾರಲಿ ಅಂತ ಕಿಚಾಯಿಸಿದ್ದಾರೆ ವಿಜಯ್ ದೇವರಕೊಂಡ.

ಹೌದು, ವಿಜಯ್ ದೇವರಕೊಂಡ ನಟಿಸಿರುವ ಲೇಟೆಸ್ಟ್ ಸಿನಿಮಾ ಲೈಗರ್. ಇದು ರೊಮ್ಯಾಂಟಿಕ್ ಸ್ಪೋರ್ಟ್ಸ್ ಆಕ್ಷನ್ ಸಿನಿಮಾ ಆಗಿದ್ದು ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಪೂರಿ ಜಗನ್ನಾಥ್ ಅವರ ಜೊತೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಕೂಡ ಲೈಗರ್‌ಗೆ ಹಣ ಹಾಕಿದ್ದಾರೆ. ತೆಲುಗು ಹಾಗೂ ಹಿಂದೆ ಭಾಷೆಗಳಲ್ಲಿ ಏಕಕಾಲದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ದಕ್ಷಿಣದ ಬಹುಬೇಡಿಕೆಯ ಸೂಪರ್‌ಸ್ಟಾರ್ ಆಗಿರುವ ವಿಜಯ್ ದೇವರಕೊಂಡ ಅವರಿಗೆ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿದ್ದು ರಮ್ಯಕೃಷ್ಣ, ರೋಹಿತ್ ರಾಯ್, ಮಕರಂದ್ ದೇಶಪಾಂಡೆ, ಅಲಿ ಪ್ರಮುಖ ತಾರಾಗಣದಲ್ಲಿದ್ದಾರೆ. ತೆಲುಗು ಹಾಗೂ ಹಿಂದಿ ಜೊತೆಗೆ ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಿಗೂ ಲೈಗರ್ ಡಬ್ ಆಗಿ ರಿಲೀಸ್ ಆಗಲಿದೆ. ಹೀಗಾಗಿಯೇ ಈಗಾಗಲೇ ಓಟಿಟಿ ಹಾಗೂ ಟಿವಿ ಹಕ್ಕುಗಳಿಗೆ ಹಲವು ದಿನಗಳಿಂದ ಮಾತುಕತೆ ನಡೆಯುತ್ತಿದೆ.

ಇದನ್ನು ಓದಿ: Happy Birthday Geetha Shivarajkumar: ಪತ್ನಿ ಗೀತಾ ಹುಟ್ಟುಹಬ್ಬದ ಅಂಗವಾಗಿ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗಾಗಿ 10 ಲಕ್ಷ ನೀಡಿದ ಶಿವಣ್ಣ

ಮೂಲಗಳ ಪ್ರಕಾರ ಎಲ್ಲಾ ಐದೂ ಭಾಷೆಗಳ ಎಕ್ಸ್​ಕ್ಲ್ಯೂಸಿವ್ ಓಟಿಟಿ ರಿಲೀಸ್ ಹಾಗೂ ಟಿವಿ ರೈಟ್ಸ್​ಗಾಗಿ ಸಂಸ್ಥೆಯೊಂದು ಬರೋಬ್ಬರಿ 200 ಕೋಟಿ ರೂಪಾಯಿ ಆಫರ್ ನೀಡಿದೆಯಂತೆ. ಆದರೆ ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ ಇದು ತುಂಬಾ ಸಣ್ಣ ಆಫರ್, ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಿದರೆ ನಾನಿನ್ನೂ ಹೆಚ್ಚು ಹಣ ಮಾಡಿಕೊಳ್ತೀನಿ ಎಂದಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಲೈಗರ್ ಇದೇ ಸೆಪ್ಟೆಂಬರ್ 9ರಂದು ತೆರೆಗೆ ಬರಲಿದ್ದು, ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ಈಗಾಗಲೇ ಚಿತ್ರತಂಡ ಸಿದ್ಧತೆಗಳನ್ನೂ ಪ್ರಾರಂಭಿಸಿದೆ. ಅಷ್ಟರಲ್ಲಿ ಕೊರೋನಾ ಹಾವಳಿ ಮತ್ತಷ್ಟು ತಗ್ಗಿದರೆ ಚಿತ್ರತಂಡಕ್ಕೆ ತುಂಬಾ ಅನುಕೂಲವಾಗಲಿದೆ.
Youtube Video

ಲೈಗರ್ ಚಿತ್ರದ ಟೈಟಲ್ ಅನೌನ್ಸ್ ಆದಾಗಲೇ ಸಾಕಷ್ಟು ಕುತೂಹಲ ಮೂಡಿಸಿತ್ತು. ಲಯನ್ ಮತ್ತು ಟೈಗರ್ ಅರ್ಥಾತ್ ಸಿಂಹ ಮತ್ತು ಹುಲಿ, ಎರಡು ಪ್ರಾಣಿಗಳ ಹೆಸರನ್ನು ಸೇರಿಸಿ ಲೈಗರ್ ಅಂತ ನಿರ್ದೇಶಕ ಪೂರಿ ಜಗನ್ನಾಥ್ ಶೀರ್ಷಿಕೆ ಫೈನಲ್ ಮಾಡಿದ್ದರು. ಇನ್ನು ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಇಲ್ಲಿ ಅವರು ತೊದಲುವ ಸಮಸ್ಯೆ ಇರುವ ಒಬ್ಬ ಕಿಕ್ ಬಾಕ್ಸರ್ ಪಾತ್ರದಲ್ಲಿ ನಟಿಸುತ್ತಿದ್ದು, ಬಾಡಿ ಬಿಲ್ಡಿಂಗ್ ಜೊತೆಗೆ ದೂರದ ಥೈಲ್ಯಾಂಡ್‌ಗೆ ತೆರಳಿ ಸಮರ ಕಲೆಗಳ ತರಬೇತಿಯನ್ನೂ ಪಡೆದು ಬಂದಿದ್ದಾರೆ. ಹೀಗಾಗಿಯೇ ಅವರ ಅಭಿಮಾನಿಗಳಲ್ಲಿಯೂ ಲೈಗರ್ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಉಂಟು ಹಾಕಿದೆ. ಮುಂದೆ ಈ ಸಿನಿಮಾ ಹೇಗೆ ಅಭಿಮಾನಿಗಳನ್ನು ಸೆಳೆಯಲಿದೆ ಎಂದು ಕಾದು ನೋಡಬೇಕಿದೆ.

ನ್ಯೂಸ್ ​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: HR Ramesh
First published: June 22, 2021, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories