Jhund: ಅಮಿತಾಭ್ ಬಚ್ಚನ್ `ಜುಂಡ್’ ಸಿನಿಮಾಗೆ ಸ್ಪೂರ್ತಿ ಈ ವ್ಯಕ್ತಿ, `ಸ್ಲಮ್​ ಸಾಕರ್’​ ಶುರು ಮಾಡಿದ್ದೇ ಇವ್ರು!

ಈ ‘ಜುಂಡ್’ (Juhnd) ಚಿತ್ರದ ಕಥೆಗೆ ಸ್ಪೂರ್ತಿ ಯಾರು ಗೊತ್ತೇ? ನಮ್ಮ ದೇಶದಲ್ಲಿ ಸ್ಲಮ್ ಸಾಕರ್ (Slum Soccer) ಪ್ರಾರಂಭಿಸಿದ ವಿಜಯ್ ಬಾರ್ಸೆ (Vijay Bharse) ಎಂಬ ವ್ಯಕ್ತಿ ಎಂದು ಹೇಳಬಹುದು. ಎಂದರೆ ಅಮಿತಾಭ್ ಅವರು ಚಿತ್ರದಲ್ಲಿ ವಿಜಯ್ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದರ್ಥ.

ಅಮಿತಾಭ್​ ಬಚ್ಚನ್​, ವಿಜಯ್​ ಬಾರ್ಸೆ

ಅಮಿತಾಭ್​ ಬಚ್ಚನ್​, ವಿಜಯ್​ ಬಾರ್ಸೆ

  • Share this:
ಮೊನ್ನೆ ತಾನೇ ಬಾಲಿವುಡ್ (Bollywood) ನಟ ಆಮೀರ್ ಖಾನ್ (Amir Khan) ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ನಟನೆಯ ‘ಜುಂಡ್’(Jhund) ಚಿತ್ರವನ್ನು ಖಾಸಗಿ ಪ್ರದರ್ಶನದಲ್ಲಿ ನೋಡಿ ತುಂಬಾನೇ ಭಾವುಕರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈ ‘ಜುಂಡ್’ (Juhnd) ಚಿತ್ರದ ಕಥೆಗೆ ಸ್ಪೂರ್ತಿ ಯಾರು ಗೊತ್ತೇ? ನಮ್ಮ ದೇಶದಲ್ಲಿ ಸ್ಲಮ್ ಸಾಕರ್ (Slum Soccer) ಪ್ರಾರಂಭಿಸಿದ ವಿಜಯ್ ಬಾರ್ಸೆ (Vijay Bharse) ಎಂಬ ವ್ಯಕ್ತಿ ಎಂದು ಹೇಳಬಹುದು. ಎಂದರೆ ಅಮಿತಾಭ್ ಅವರು ಚಿತ್ರದಲ್ಲಿ ವಿಜಯ್ ಅವರ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದರ್ಥ. ಫ್ಯಾಂಡ್ರೀ ಮತ್ತು ಸೈರಾಟ್ ಚಿತ್ರಗಳನ್ನು ನಿರ್ದೇಶಿಸಿದ ನಾಗರಾಜ್ ಮಂಜುಳೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು ‘ಜುಂಡ್’ ಚಿತ್ರದ ಕಥೆಯು ನಾಗ್ಪುರ(Nagpur)ದ ಫುಟ್ಬಾಲ್ (Football) ತರಬೇತುದಾರನ ಜೀವನದ ಕಥೆಯಾಗಿದೆ. ಅವರು ಕಡಿಮೆ ಆದಾಯವನ್ನು ಹೊಂದಿರುವ ಮತ್ತು ಸ್ಲಮ್(Slum)ನಲ್ಲಿರುವ ಮಕ್ಕಳನ್ನು ಸಬಲೀಕರಣಗೊಳಿಸಲು ಒಂದು ಕ್ರೀಡೆಯ ಸಹಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದರು.

‘ಜುಂಡ್’ ರೀಲ್​ ಅಲ್ಲ.. ರಿಯಲ್​ ಸ್ಟೋರಿ!

ಆಮೀರ್ ಖಾನ್ ಅವರು ನಡೆಸಿಕೊಟ್ಟಂತಹ ‘ಸತ್ಯಮೇವ ಜಯತೆ’ ಕಾರ್ಯಕ್ರಮದ ಒಂದು ಸಂಚಿಕೆಯಲ್ಲಿ ವಿಜಯ್ ಬಾರ್ಸೆ ಅವರು ಕಾಣಿಸಿಕೊಂಡಿದ್ದರು ಮತ್ತು 2000 ರ ದಶಕದ ಆರಂಭದಲ್ಲಿ ನಾಗ್ಪುರದ ಹಿಸ್ಲೋಪ್ ಕಾಲೇಜಿನಲ್ಲಿ ಕ್ರೀಡಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ, ಒಮ್ಮೆ ಕೆಲವು ಮಕ್ಕಳನ್ನು ಮಳೆಯಲ್ಲಿ ಒಂದು ಮುರಿದ ಬಕೆಟ್ ಅನ್ನು ಒದೆಯುತ್ತಾ ಆಟವಾಡುತ್ತಿರುವುದನ್ನು ನೋಡಿ, ಅವರಿಗೆ ಆಟವಾಡಲು ಒಂದು ಫುಟ್‌ಬಾಲ್ ಅನ್ನು ಖರೀದಿಸಿ ಕೊಟ್ಟಿದ್ದರು ವಿಜಯ್. ಮಕ್ಕಳು ಸಂತೋಷದಿಂದ ಫುಟ್‌ಬಾಲ್ ಆಡಲು ಶುರು ಮಾಡಿದರು. ವಿಜಯ್ ತಮ್ಮ ಟಿಇಡಿಎಕ್ಸ್ ಮಾತುಕತೆಯಲ್ಲಿ ಈ ಘಟನೆಯನ್ನು ಹಂಚಿಕೊಂಡರು, ಅದರ ನಂತರ ಮತ್ತೊಂದು ಮಕ್ಕಳ ಗುಂಪು ಟೆನಿಸ್ ಚೆಂಡನ್ನು ಒದೆಯುತ್ತಿರುವುದನ್ನು ಅವರು ನೋಡಿದರು.

ಒಬ್ಬ ಶಿಕ್ಷಕ ಇಷ್ಟಲ್ಲಾ ಮಡ್ಬಹುದಾ?

ಶೀಘ್ರದಲ್ಲಿಯೇ ಆ ಎಲ್ಲಾ ಮಕ್ಕಳನ್ನು ಒಂದು ಆಟದ ಮೈದಾನದಲ್ಲಿ ಒಟ್ಟುಗೂಡಿಸಿದರು. ಈ ಚಿಕ್ಕ ಮಕ್ಕಳು ಮೈದಾನದಲ್ಲಿ ಇರುವವರೆಗೂ, ಅವರು ಪ್ರಪಂಚದ ದುಷ್ಪರಿಣಾಮಗಳಿಂದ ದೂರವಿರುತ್ತಾರೆ ಎಂದು ಅರಿತುಕೊಂಡರು. ರಾಷ್ಟ್ರದ ಭವಿಷ್ಯವನ್ನು ನಿರ್ಮಿಸಲು ಅವರು ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂದು ಅವರು ಭಾವಿಸಿದ್ದರು. "ಈ ಮಕ್ಕಳು ಮೈದಾನದಲ್ಲಿ ಆಡುವವರೆಗೂ ಕೆಟ್ಟ ಅಭ್ಯಾಸಗಳಿಂದ ದೂರವಿರುತ್ತಾರೆ ಎಂದು ನಾನು ಅರಿತುಕೊಂಡೆ. ಒಬ್ಬ ಶಿಕ್ಷಕ ಇನ್ನೇನು ಕೊಡಲು ಸಾಧ್ಯ" ಎಂದು ಅವರು ‘ಸತ್ಯಮೇವ ಜಯತೆ’ ಸಂಚಿಕೆಯಲ್ಲಿ ಹೇಳಿದ್ದರು.

2002ರಲ್ಲಿ ಜೋಪಡ್ಪಟ್ಟಿ ಫುಟ್‌ಬಾಲ್ ಆರಂಭ!

ಹೀಗೆ 2002 ರಲ್ಲಿ ಜೋಪಡ್ಪಟ್ಟಿ ಫುಟ್‌ಬಾಲ್ ಆಟದ ಪ್ರಯಾಣವು ಪ್ರಾರಂಭವಾಯಿತು, ಇದು ಅಂತಿಮವಾಗಿ 'ಸ್ಲಮ್ ಸಾಕರ್' ಎಂದು ಪ್ರಸಿದ್ಧವಾಯಿತು. ಈ ಲೀಗ್ ಗೆ ಜೋಪಡ್ಪಟ್ಟಿ ಫುಟ್‌ಬಾಲ್ ಎಂದು ಏಕೆ ಹೆಸರಿಟ್ಟಿದ್ದೀರಿ ಎಂದು ಅವರ ಸಹೋದ್ಯೋಗಿ ಕೇಳಿದಾಗ, ವಿಜಯ್ ತಮ್ಮ ಟಿಇಡಿಎಕ್ಸ್ ಭಾಷಣದಲ್ಲಿ "ಎಲ್ಲಾ ಆಟಗಾರರು ಕೊಳೆಗೇರಿಗಳಲ್ಲಿ ವಾಸಿಸುವುದರಿಂದ ಮತ್ತು ಅಲ್ಲಿಂದ ಬಂದವರಾಗಿದ್ದರು ಎಂದು ನನಗೆ ತಿಳಿದಿತ್ತು ಮತ್ತು ನಾನು ಅವರಿಗಾಗಿ ಮಾತ್ರ ಕೆಲಸ ಮಾಡಬೇಕು ಎಂದು ಕೊಂಡು ಆ ಹೆಸರನ್ನು ಇರಿಸಿದೆ" ಎಂದು ಹೇಳಿದರು.

ಇದನ್ನೂ ಓದಿ: ಐಶ್ವರ್ಯಾ ರೈ ಬ್ಯೂಟಿ ಸೀಕ್ರೆಟ್​ ಗೊತ್ತಾ? ಪ್ರತಿದಿನ ಮಿಸ್​ ಮಾಡ್ದೇ ಇದನ್ನೆಲ್ಲ ಮಾಡ್ತಾರಂತೆ ಮಾಜಿ ವಿಶ್ವ ಸುಂದರಿ!

ಸ್ವಲ್ಪ ಸಮಯದ ನಂತರ, ಈ ತಂಡವು ಚೆನ್ನಾಗಿ ಆಡಲು ಶುರು ಮಾಡಿ ನಗರ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪಂದ್ಯಗಳನ್ನು ಆಡಲಾರಂಭಿಸಿತ್ತು. 2003 ರಲ್ಲಿ ಒಂದು ಸುದ್ದಿ ಮಾಧ್ಯಮದಲ್ಲಿ ಬಂದ ಲೇಖನದಿಂದ ವಿಜಯ್ ಅವರು ಬೆಳಕಿಗೆ ಬಂದರು ಮತ್ತು ಅವರ ಈ ಕೆಲಸವು ಹೆಚ್ಚಿನ ಜನರಿಗೆ ತಿಳಿಯಿತು. ಸ್ಲಮ್ ಸಾಕರ್ ಲೀಗ್ ರಾಷ್ಟ್ರೀಯ ವಿದ್ಯಮಾನವಾಯಿತು, ಏಕೆಂದರೆ ದೇಶಾದ್ಯಂತದ ತರಬೇತುದಾರರು ಮತ್ತು ಮಕ್ಕಳು ಅದರೊಂದಿಗೆ ಸಂಬಂಧ ಹೊಂದಲು ಬಯಸಿದ್ದರು.

ಸ್ವಂತ ಹಣ ಬಳಸಿ ತರಬೇತಿ ನೀಡಿದ್ದರು!

ಆರಂಭಿಕ ದಿನಗಳಲ್ಲಿ, ವಿಜಯ್ ಅವರ ಪ್ರಯತ್ನಗಳಿಗೆ ಧನ ಸಹಾಯ ಮಾಡುವ ಪ್ರಾಯೋಜಕರು ಯಾರು ಇರಲಿಲ್ಲ, ಹಾಗಾಗಿ ಅವರು ತಮ್ಮ ಸ್ವಂತ ಹಣವನ್ನು ಬಳಸುತ್ತಿದ್ದರು. ಅಮೆರಿಕದಲ್ಲಿ ವಾಸಿಸುತ್ತಿದ್ದ ಅವರ ಮಗ ಈ ಬಗ್ಗೆ ಅಮೆರಿಕದ ಪತ್ರಿಕೆಯೊಂದರಲ್ಲಿ ಓದಿದಾಗ, ಅವರು ತಮ್ಮ ತಂದೆಗೆ ಸಹಾಯ ಮಾಡಲು ಹಿಂತಿರುಗಿದರು.

ಇದನ್ನೂ ಓದಿ: ಬಂದ.. ಬಂದ.. ರಣಬೇಟೆಗಾರ ಬಂದ! ಮಾರ್ಚ್​ 27ಕ್ಕೆ ಕೆಜಿಎಫ್​ 2 ಟ್ರೈಲರ್ ರಿಲೀಸ್​!

2007 ರಲ್ಲಿ ಸ್ಲಮ್ ಸಾಕರ್ ನ ರಾಷ್ಟ್ರೀಯ ಪಂದ್ಯಾವಳಿಯ ಬಗ್ಗೆ ಅಂತರಾಷ್ಟೀಯ ಮಟ್ಟದ ಸುದ್ದಿ ಮಾಧ್ಯಮವೊಂದು ಬರೆಯಲು ಶುರು ಮಾಡಿತ್ತು ಎಂದು ಬಾರ್ಸೆ ಹಂಚಿ ಕೊಂಡರು. ಹೋಮ್ ಲೆಸ್ ವಿಶ್ವಕಪ್ ನ ಅಂದಿನ ನಿರ್ದೇಶಕ ಆಂಡಿ ಹುಕ್ಸ್, ಬಾರ್ಸೆಯನ್ನು ದಕ್ಷಿಣ ಆಫ್ರಿಕಾದ ಕೇಪ್‌ಟೌನ್ ಗೆ ಆಹ್ವಾನಿಸಿದರು. ಅಲ್ಲಿ ವಿಜಯ್ ಅವರು ನೆಲ್ಸನ್ ಮಂಡೇಲಾ ಅವರನ್ನು ಭೇಟಿಯಾದರು. "ಆ ದಿನ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದಾಗ ನನ್ನ ಕೆಲಸಕ್ಕೆ ನನಗೆ ಅತಿದೊಡ್ಡ ಮನ್ನಣೆ ಸಿಕ್ಕಿತು” ಎಂದು ಅವರು ಹಂಚಿ ಕೊಂಡರು.
Published by:Vasudeva M
First published: