Vijay Master Twitter Review: ದಳಪತಿ ವಿಜಯ್​ ಅಭಿನಯದ ಮಾಸ್ಟರ್​ ಸಿನಿಮಾದ ಟ್ವಿಟರ್ ವಿಮರ್ಶೆ..!

Vijay Master Twitter Review: ಲಾಕ್​ಡೌನ್​ ಸಡಿಲಗೊಂಡ ನಂತರ ರಿಲೀಸ್​ ಆಗುತ್ತಿರುವ ಸ್ಟಾರ್​ ನಟನ ಮೊದಲ ಸಿನಿಮಾ. ಹೀಗಾಗಿಯೇ ಈ ಸಿನಿಮಾದ ಯಶಸ್ಸಿನ ಮೇಲೆ ದಕ್ಷಿಣ ಭಾರತದ ಚಿತ್ರರಂಗದ ಗಮನ ನೆಟ್ಟಿದೆ. ಖೈದಿ ಸಿನಿಮಾದ ನಂತರ ಲೋಕೇಷ್​ ಕನಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಬಗ್ಗೆ ಟ್ವೀಟಿಗರು ಕೊಟ್ಟಿರುವ ವಿಮರ್ಶೆ ಇಲ್ಲಿದೆ.

ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ

ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಹಾಗೂ ವಿಜಯ್ ಸೇತುಪತಿ

  • Share this:
ಕಾಲಿವುಡ್​ನ ಖ್ಯಾತ ನಟ ದಳಪತಿ ವಿಜಯ್​ ಹಾಗೂ ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೋಸ್ಟ್​ ಎಕ್ಸ್ಪೆಕ್ಟೆಡ್​ ಸಿನಿಮಾ ಮಾಸ್ಟರ್. ಲಾಕ್​ಡೌನ್​ ಸಡಿಲಗೊಂಡು ಚಿತ್ರಮಂದಿರಗಳು ಬಾಗಿಲು ತೆರೆದಾಗಿನಿಂದ ಯಾವ ದೊಡ್ಡ ಸ್ಟಾರ್​ಗಳೂ ಸಹ ಸಿನಿಮಾ ರಿಲೀಸ್​ ಮಾಡುವ ಧೈರ್ಯ ಮಾಡಿರಲಿಲ್ಲ. ಕನ್ನಡದಲ್ಲಿ ಹೊಸ ಸಿನಿಮಾಗಳು ರಿಲೀಸ್​ ಆಗಿದ್ದವಾದರೂ, ಜನರು ಮಾತ್ರ ಊಹಿಸಿದಷ್ಟು ಚಿತ್ರಮಂದಿರಗಳಿಗೆ ಬರಲೇ ಇಲ್ಲ. ಇದರಿಂದಾಗಿ ಚಿತ್ರಮಂದಿರಗಳು ಎಂದಿನಂತೆ ಸಹಜ ಸ್ಥಿತಿಗೆ ಮರಳುವವರೆಗೂ ಸ್ಟಾರ್​ ನಟರ ಸಿನಿಮಾಗಳನ್ನು ರಿಲೀಸ್​ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು ಕನ್ನಡ ಸಿನಿಮಾಗಳ ನಿರ್ಮಾಪಕರು. ಹೀಗಿರುವಾಗಲೇ ಕಾಲಿವುಡ್​ ದಳಪತಿ ವಿಜಯ್​ ಅವರ ಮಾಸ್ಟರ್ ಸಿನಿಮಾ ರಿಲೀಸ್ ದಿನಾಂಕ ಪ್ರಕಟಿಸಿತು. ಅದರಂತೆ ಇಂದು ಈ ಚಿತ್ರ ವಿಶ್ವದಾದ್ಯಂತ ರಿಲೀಸ್​ ಆಗಿದೆ. ಸಿನಿಮಾ ನೋಡಿದ ದಳಪತಿ ಅಭಿಮಾನಿಗಳು ಫುಲ್​ ಖುಷಿಯಲ್ಲಿದ್ದಾರೆ. ಸಿನಿಮಾ ನೋಡಿದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 

ಲಾಕ್​ಡೌನ್​ ಸಡಿಲಗೊಂಡ ನಂತರ ರಿಲೀಸ್​ ಆಗುತ್ತಿರುವ ಸ್ಟಾರ್​ ನಟನ ಮೊದಲ ಸಿನಿಮಾ. ಹೀಗಾಗಿಯೇ ಈ ಸಿನಿಮಾದ ಯಶಸ್ಸಿನ ಮೇಲೆ ದಕ್ಷಿಣ ಭಾರತದ ಚಿತ್ರರಂಗದ ಗಮನ ನೆಟ್ಟಿದೆ. ಖೈದಿ ಸಿನಿಮಾದ ನಂತರ ಲೋಕೇಷ್​ ಕನಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಬಗ್ಗೆ ಟ್ವೀಟಿಗರು ಕೊಟ್ಟಿರುವ ವಿಮರ್ಶೆ ಇಲ್ಲಿದೆ.

ಈ ಸಿನಿಮಾ ವಿಜಯ್​ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿಯಾದರೂ, ನಿಜಕ್ಕೂ ಇದು ಕ್ಲಾಸಿ ಭಾರತೀಯ ಸಿನಿಮಾ ಅಲ್ಲ ಎನ್ನುತ್ತಿದ್ದಾರೆ ಕೆಲವರು. ಇದು ವಿಜಯ್​ ಅಭಿನಯದ ಸ್ಟೈಲಿಶ್​ ಚಿತ್ರ. ಮನರಂಜನೆಗೆ ಯಾವುದೇ ಕಡಿಮೆ ಇಲ್ಲ ಎನ್ನುತ್ತಿದ್ದಾರೆ ಸಿನಿಪ್ರಿಯರು.ಮಾಳವೀಕ ಮೋಹನ್​ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಅನಿರುಧ್​ ರವಿಂದ್ರನ್​ ಸಂಗೀತ ನೀಡಿದ್ದಾರೆ. ಕಾಲಿವುಡ್​ ಹಾಗೂ ಟಾಲಿವುಡ್​ ಪ್ರೇಕ್ಷಕರು ಈ ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ಈಗ ಈ ಚಿತ್ರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗಿದೆ.

Vijay Master HD Stills, vijay master digital release, tamil Vijay, Vijay news,Vijay master, Vijay master release,Vijay master in amazon, ಮಾಸ್ಟರ್​, ವಿಜಯ್​, ದಳಪತಿ ವಿಜಯ್​, ವಿಜಯ್​ ಸೇತುಪತಿ
ಮಾಸ್ಟರ್ ಸಿನಿಮಾದಲ್ಲಿ ವಿಜಯ್​


ತೆಲುಗಿನಲ್ಲೂ ಸಹ ಸೋಲೊ ಬ್ರದುಕೆ ಸೋ ಬೆಟರ್ ಹಾಗೂ ರವಿತೇಜ ಅವರ ಕ್ರಾಕ್​ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಮಾಸ್ಟರ್ ಚಿತ್ರಕ್ಕೆ ಸಿಗುತ್ತಿರುವ ಸದ್ಯದ ರೆಸ್ಪಾನ್ಸ್ ನೋಡಿದರೆ, ಚಿತ್ರ ಇವತ್ತಿಗಂತೂ ಹಿಟ್​ ಎನ್ನಬಹುದಾಗಿದೆ. ಆದರೆ ಲಾಂಗ್​ ರನ್​ನಲ್ಲಿ ಮಾಸ್ಟರ್​ ಇದೇ ಜಾದೂ ಮಾಡಲಿದೆಯಾ ಅನ್ನೋದಕ್ಕೆ ಕಾದು ನೋಡಬೇಕಿದೆಯಷ್ಟೆ.
Published by:Anitha E
First published: