ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ಗೆ (Vignesh Shivan ) ಕಳೆದ 2022 ಸೂಪರ್ ಸ್ಪೆಷಲ್ ಆಗಿತ್ತು. ಮದುವೆ, ಅವಳಿ ಮಕ್ಕಳು, ಸಿನಿಮಾ ಹೀಗೆ ಎಲ್ಲವೂ ಡಬಲ್ ಧಮಾಕಾದಂತಿತ್ತು. ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಜೂನ್ 9, 2022 ರಂದು ಹಸೆಮಣೆ ಏರಿದ್ದರು. ಆದಾದ ನಂತರ ಸರಿಯಾಗಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಗುಡ್ ನ್ಯೂಸ್ (Good News) ನೀಡುವ ಮೂಲಕ ಅವಳಿ ಮಕ್ಕಳನ್ನು (Children) ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದರು.
ಮದುವೆ, ಮಕ್ಕಳು, ಸಿನಿಮಾ
ನಯನತಾರಾ ಮತ್ತು ಶಿವನ್ ಜೋಡಿ ಕಳೆದ ವರ್ಷದ ಬೆಸ್ಟ್ ಜೋಡಿಯಾಗಿತ್ತು, ಹಾಗೆಯೇ ನಯನತಾರಾ ಮದುಮಗಳಾಗಿ ತೊಟ್ಟುಕೊಂಡ ಉಡುಪು ಇನ್ನೂ ಕೂಡ ಟ್ರೆಂಡಿಂಗ್ನಲ್ಲಿದೆ.
ಇಬ್ಬರ ಮದುವೆ ನಂತರ ಹೆಚ್ಚು ಸುದ್ದಿಯಾಗಿದ್ದು ಅವರ ಅವಳಿ ಮಕ್ಕಳು. ಬಾಡಿಗೆ ತಾಯಿ ಮೂಲಕ ಜನಿಸಿರುವ ಈ ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರುಗಳನ್ನು ಇಡಲಾಗಿದೆ.
ಅಭಿಮಾನಿಗಳು ಅವರ ಅವಳಿ ಮಕ್ಕಳ ಮುಖದರ್ಶನ ಮಾಡಲು ಕಾಯುತ್ತಿದ್ದಾರೆ. ಹೊಸ ವರ್ಷಕ್ಕಾದರೂ ಮಕ್ಕಳ ಮುಖದರ್ಶನ ಮಾಡಿಸುತ್ತಾರಾ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಸ್ಟಾರ್ಸ್ ನಿರಾಶೆ ಮಾಡಿದ್ದಾರೆ. ವಿಘ್ನೇಶ್ ಶಿವನ್ ಮಕ್ಕಳ ಮುಖವನ್ನು ಮರೆಮಾಚಿ ಹೊಸ ವರ್ಷದ ಮೊದಲ ಪೋಸ್ಟ್ ಮಾಡಿದ್ದಾರೆ.
ವಿಘ್ನೇಶ್ ಶಿವನ್ ಹೊಸ ವರ್ಷದ ಪೋಸ್ಟ್
2023 ಹೊಸ ವರ್ಷವನ್ನು ನಯನತಾರಾ, ಶಿವನ್ ಇಬ್ಬರು ತಮ್ಮ ಅವಳಿ ಮಕ್ಕಳೊಂದಿಗೆ ಆಚರಿಸಿದ್ದು, ಆ ಸಂಭ್ರಮದ ಫೋಟೋಗಳನ್ನು ಶಿವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳ, ಮುದ್ದು ಮಡದಿಯ ಫೋಟೋ ಜೊತೆ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಮೂಲಕ ಪೋಸ್ಟ್ ಮಾಡಿದ್ದಾರೆ.
ಶಿವನ್, ಟ್ವಿಟರ್ ಪೋಸ್ಟ್ನಲ್ಲಿ ಪುಟ್ಟ ಮಕ್ಕಳ ಕೈಗಳನ್ನು ಮತ್ತು ದಂಪತಿ ಮಕ್ಕಳ ಮುಖವನ್ನು ಮರೆಮಾಚಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ಪೋಸ್ಟ್ನಲ್ಲಿ 2022ರಲ್ಲಿ ನಡೆದ ಅವರ ಮದುವೆ ಮತ್ತು ಮಕ್ಕಳ ಆಗಮನದ ಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Part Two 😍☺️😇❤️ 👶 👶
The #Two #Uyir #Ulagam #WikkiNayan #Nayanthara pic.twitter.com/AeLLHncNTP
— Vignesh Shivan (@VigneshShivN) January 1, 2023
ವೈಯಕ್ತಿಕ ಬದುಕಲ್ಲಿ ಮತ್ತು ಸಿನಿರಂಗದಲ್ಲಿ ಹಲವು ಮೈಲಿಗಲ್ಲುಗಳಿಗೆ ಸಾಕ್ಷಿಯಾದ ಸವಿನೆನಪಿನ ವರ್ಷವನ್ನು ಶಿವನ್ ವಿಶೇಷವಾಗಿ ಪರಿಗಣಿಸಿದ್ದಾರೆ. ಅಲ್ಲದೇ ಕಾತುವಾಕುಲ ರೆಂಡು ಕಾದಲ್ ಮತ್ತು ಕನೆಕ್ಟ್ ಸಿನಿಮಾವನ್ನು ಬೆಂಬಲಿಸಿದ್ದಕ್ಕಾಗಿ ವಿಘ್ನೇಶ್ ಶಿವನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಕಳೆದ ವರ್ಷ ಹಸೆಮಣೆ ಏರಿದ್ದ ಸ್ಟಾರ್ಸ್
ನಯನತಾರಾ ಮತ್ತು ವಿಘ್ನೇಶ್ ಶಿವನ್ ಹಲವು ವರ್ಷಗಳ ಡೇಟಿಂಗ್ ನಂತರ ಗುರು ಹಿರಿಯರ ಸಮ್ಮುಖದಲ್ಲಿ ಜೂನ್ 9ರಂದು ಹಸೆಮಣೆ ಏರಿದ್ದರು. ಈ ಮದುವೆಗೆ ಸೌತ್ ಮತ್ತು ಬಾಲಿವುಡ್ನ ಸ್ಟಾರ್ಸ್ ಸಾಕ್ಷಿಯಾಗಿದ್ದರು.
ಸೂಪರ್ ಸ್ಟಾರ್ ರಜನೀಕಾಂತ್, ಬಿಟೌನ್ ಬಿಗ್ ಸ್ಟಾರ್ ಶಾರುಖ್ ಖಾನ್, ಮತ್ತು ನಿರ್ದೇಶಕ ಅಟ್ಲೀ ಜತೆಗೆ ಸೌತ್ನ ಸ್ಟಾರ್ ಸೂರ್ಯ ದಂಪತಿ, ವಿಜಯ್ ಸೇತುಪತಿ, ಇಳಯರಾಜ ಮದುವೆಗೆ ಬಂದಿದ್ದರು.
ಇದಾದ ನಾಲ್ಕು ತಿಂಗಳ ಬಳಿಕ ದಂಪತಿಗಳು ಅವಳಿ ಮಕ್ಕಳನ್ನು ಸ್ವಾಗತಿಸಿದರು. ಅಕ್ಟೋಬರ್ 9ರಂದು, ಟ್ವಿಟರ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದರು.
ದಂಪತಿಗಳ ಸಿನಿಮಾ ಕೆಲಸ
ನಯನತಾರಾ ಕೊನೆಯದಾಗಿ ಕನೆಕ್ಸ್ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ದಂಪತಿಗಳಿಗೆ ಕಳೆದ ವರ್ಷ ಯಶಸ್ಸು ತಂದುಕೊಟ್ಟ ಚಿತ್ರವಾಗಿದೆ. ಇನ್ನೂ ನಯನತಾರಾ ಅಟ್ಲೀ ನಿರ್ದೇಶನದ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದು ಈ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಮತ್ತು ಇರೈವನ್ ಚಿತ್ರದಲ್ಲೂ ಸಹ ನಟಿ ನಟಿಸಲಿದ್ದಾರೆ.
ಜೊತೆಗೆ ವಿಘ್ನೇಶ್ ಶಿವನ್ ಅಜಿತ್ ಕುಮಾರ್ ಅವರ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ. ಅದರ ಕೆಲಸವನ್ನು ಪ್ರಾರಂಭಿಸಲು ಅವರು ಎಕೆ 62 ರ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಇದೇ ವರ್ಷ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ