ಮರಕ್ಕೆ ಜೋತು ಬಿದ್ದು ವರ್ಕೌಟ್​ ಮಾಡುತ್ತಿರುವ ಬಿ-ಟೌನ್​ ನಟನ ವಿಡಿಯೋ ವೈರಲ್​..!

Vidyut Jammwal: ಲಾಕ್​ಡೌನ್​ನಿಂದಾಗಿ ಜಿಮ್​ಗಳನ್ನು ಮುಚ್ಚಲಾಗಿದ್ದು, ಫಿಟ್ನೆಸ್​ ಫ್ರೀಕ್​ಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದರೂ ನಿತ್ಯ ವ್ಯಾಯಾಮ ಮಾಡಲು ಎಲ್ಲರೂ ತಮ್ಮದೇ ಆದ ದಾರಿಗಳನ್ನು ಹುಡುಕಿಕೊಂಡಿದ್ದಾರೆ. ಅಂತೆಯೇ ನಟ ವಿದ್ಯುತ್​ ಜಮ್ವಾಲ್​ ಸಹ ತಮ್ಮದ ಆದ ಸ್ಟೈಲ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ.

Anitha E | news18-kannada
Updated:June 29, 2020, 3:53 PM IST
ಮರಕ್ಕೆ ಜೋತು ಬಿದ್ದು ವರ್ಕೌಟ್​ ಮಾಡುತ್ತಿರುವ ಬಿ-ಟೌನ್​ ನಟನ ವಿಡಿಯೋ ವೈರಲ್​..!
ವಿದ್ಯುತ್​ ಜಮ್ವಾಲ್​
  • Share this:
ಬಾಲಿವುಡ್​ನಲ್ಲಿ ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್ ನಂತರ ಸಾಹಸದ ವಿಷಯಕ್ಕೆ ಬಂದರೆ ಕೇಳಿ ಬರೋದು ವಿದ್ಯುತ್​ ಜಮ್ವಾಲ್​ ಅವರ ಹೆಸರು. ಮಾರ್ಷಲ್​ ಆರ್ಟ್​ ಎಕ್ಸ್​ಪರ್ಟ್​ ಆಗಿರುವ ಜಮ್ವಾಲ್​ ಅವರನ್ನು ನೋಡಿದರೆ ಸಾಕು ಅವರ ಫಿಟ್ನೆಸ್​ ಹೇಗಿದೆ ಎಂದು ಅರ್ಥವಾಗುತ್ತದೆ. 

ನಟ ವಿದ್ಯುತ್ ಜಮ್ವಾಲ್​ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಸಾಹಸ ಪ್ರವೃತ್ತಿ ಉಳ್ಳವರು. ಅವರು ಮಾಡುವ ಸಾಹಸದ ಬಗ್ಗೆ ಅವರ ಇನ್​ಸ್ಟಾಗ್ರಾಂ ನೋಡಿದರೆ ತಿಳಿಯುತ್ತದೆ. ಇನ್ನು ಲಾಕ್​ಡೌನ್​ನಲ್ಲಂತೂ ಅವರನ್ನು ಕೇಳುವಂತೆಯೇ ಇಲ್ಲ.

 
 View this post on Instagram
 

Your Black Belt has an Expiry date: The day you stop learning or Training.. #kalaripayattu #ITrainlikeVidyutJammwal #countryboy


A post shared by Vidyut Jammwal (@mevidyutjammwal) on


ಲಾಕ್​ಡೌನ್​ನಿಂದಾಗಿ ಜಿಮ್​ಗಳನ್ನು ಮುಚ್ಚಲಾಗಿದ್ದು, ಫಿಟ್ನೆಸ್​ ಫ್ರೀಕ್​ಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದರೂ ನಿತ್ಯ ವ್ಯಾಯಾಮ ಮಾಡಲು ಎಲ್ಲರೂ ತಮ್ಮದೇ ಆದ ದಾರಿಗಳನ್ನು ಹುಡುಕಿಕೊಂಡಿದ್ದಾರೆ. ಅಂತೆಯೇ ನಟ ವಿದ್ಯುತ್​ ಜಮ್ವಾಲ್​ ಸಹ ತಮ್ಮದ ಆದ ಸ್ಟೈಲ್​ನಲ್ಲಿ ವರ್ಕೌಟ್​ ಮಾಡುತ್ತಿದ್ದಾರೆ. 
View this post on Instagram
 

Use your innate RAW Animal Strength. #ITrainLikeVidyutJammwal #CountryBoy #kalaripayattu


A post shared by Vidyut Jammwal (@mevidyutjammwal) on


ತಮ್ಮ ತೋಟದ ಮನೆಯಲ್ಲಿರುವ ಮರಕ್ಕೆ ಜೋತು ಬಿದ್ದ ಜಮ್ವಾಲ್​, ಕೊಂಬೆ ಹಿಡಿದು ಪುಲ್ ಅಪ್​ ವ್ಯಾಯಾಮ ಮಾಡುತ್ತಿದ್ದಾರೆ. ಅವರ ಈ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.

  
View this post on Instagram
 

Hang on people. The future is worth looking forward to #ITrainlikeVidyutJammwal #CountryBoy #kalaripayattu


A post shared by Vidyut Jammwal (@mevidyutjammwal) on


'ಕಮಾಂಡೋ' ಸರಣಿ ಸಿನಿಮಾಗಳು ಹಾಗೂ 'ಜಂಗ್ಲಿ' ಚಿತ್ರದಲ್ಲಿ ನಟಿಸಿರುವ ಜಮ್ವಾಲ್​ ಬಹುಪಾಲು ಆ್ಯಕ್ಷನ್​ ಸೀಕ್ವೆನ್ಸ್​ಗಳನ್ನು ತಾವೇ ಮಾಡುತ್ತಾರೆ.
ಇದನ್ನೂ ಓದಿ: Rashmika-Mahesh Babu: ಮಹೇಶ್​ ಬಾಬು ಮನೆ ತಲುಪಿತು ರಶ್ಮಿಕಾ ಕೊಡಗಿನಿಂದ ಕಳುಹಿಸಿದ ಈ ಉಡುಗೊರೆ..!

Skanda Ashok: ಮಗುವಿನ ನಿರೀಕ್ಷೆಯಲ್ಲಿ ರಾಧಾ ರಮಣ ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್​- ಶಿಖಾ..!ಇದನ್ನೂ ಓದಿ: ತಮಿಳು ನಟ ವಿಜಯ್​ಗಾಗಿ ಹುಲಾಹೂಪ್​ ಹಿಡಿದು ಡ್ಯಾನ್ಸ್ ಮಾಡಿದ ಸಂಯುಕ್ತಾ ಹೆಗಡೆ
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading