ನಟ ವಿದ್ಯುತ್ ಜಮ್ವಾಲ್ ಈಗ ಗ್ಯಾಂಗ್ಸ್ಟರ್ ಆಗಿದ್ದಾರೆ. ಸದಾ ಆ್ಯಕ್ಷನ್ ಸಿನಿಮಾಗಳಲ್ಲಿ ತಮ್ಮ ಸಾಹಸ ಪ್ರದರ್ಶಿಸುತ್ತಿದ್ದ ಈ ನಟ ಈಗ ಸ್ನೇಹಿತರೊಂದಿಗೆ ಸೇರಿಕೊಂಡು ಗ್ಯಾಂಗ್ ಕಟ್ಟಿದ್ದಾರಂತೆ. ಇದೇನು ಗ್ಯಾಂಗ್ ಹಾಗೂ ಗ್ಯಾಂಸ್ಟರ್ ಅಂತಿದ್ದಾರೆ ಅನ್ಕೋಬೇಡಿ. ಅದಕ್ಕೂ ಕಾರಣ ಇದೆ.
ವಿದ್ಯುತ್ ಜಮ್ವಾಲ್ ಈಗ 'ಗ್ಯಾಂಗ್ಸ್ಟರ್' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅಭಿನಯದ ಹೊಸ ಸಿನಿಮಾ 'ಯಾರಾ'ದಲ್ಲಿ ವಿದ್ಯುತ್ ಗ್ಯಾಂಗ್ಸ್ಟರ್ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಈಗ ಬಿಡುಗಡೆಯಾಗಿದೆ. ಇದರಲ್ಲೂ ಜಮ್ವಾಲ್ ಅವರ ಸಾಹಸದ ದೃಶ್ಯಗಳು ನಿಮ್ಮನ್ನು ರಂಜಿಸಲಿವೆ.
ನಾಲ್ವರು ನಟೋರಿಸ್ ಕ್ರಿಮಿನಲ್ಗಳ ನಡುವಿನ ಸ್ನೇಹ ಸಂಬಂಧದ ಬಗ್ಗೆ ಹೇಳುತ್ತದೆ ಈ ಟ್ರೇಲರ್. ಚೋಕ್ಡಿ ಗ್ಯಾಂಗ್ನಲ್ಲಿ ವಿದ್ಯುತ್ ಜಮ್ವಾಲ್, ಅಮಿತ್ ಸಾಧ್, ವಿಜಯ್ ವರ್ಮಾ ಹಾಗೂ ಕೆನ್ನಿ ಬಸುಮತಾರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಲ್ವರು ಗ್ಯಾಂಗ್ಸ್ಟರ್ಗಳು ತಮ್ಮ ಕೆಲಸ ಹಾಗೂ ಹೆಸರಿನಿಂದ ಗುರುತಿಸಲ್ಪಡುವುದಿಲ್ಲ. ಬಲದಾಗಿ ಅವರ ನಡುವಿನ ಸ್ನೇಹದಿಂದ ಸದಾ ಗುರುತಿಸಲ್ಪಡುತ್ತಿರುತ್ತಾರೆ. ಈ ಗೆಳೆಯರ ಜೀವನದ ಜರ್ನಿಯೇ ಈ 'ಯಾರಾ' ಸಿನಿಮಾ.
ಇದನ್ನೂ ಓದಿ: ಹೆಡ್ ಮಸಾಜ್ ವಿಡಿಯೋ ಹಂಚಿಕೊಂಡ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಹೇಳಿದ್ದೇನು..?
ತಿಗ್ಮಾಂಶು ಧೂಲಿಯ ನಿರ್ದೇಶನದ 'ಯಾರಾ' ಸಿನಿಮಾ ಇದೇ ತಿಂಗಳ 30ರಂದು ಒಟಿಟಿ ಮೂಲಕ ಜೀ5ನಲ್ಲಿ ತೆರೆಕಾಣಲಿದೆ. ವಿದ್ಯುತ್ ಜಮ್ವಾಲ್ಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಅವರೇ ಈ ನಾಲ್ವರು ಪಾತ್ರಗಳ ಕುರಿತಾಗಿ ಕತೆ ಹೇಳುತ್ತಿರುತ್ತಾರಂತೆ.
ಪೂಜಾ ಹೆಗ್ಡೆ ಫಿಟ್ನೆಸ್ ಗುಟ್ಟು
ಫಾರೂಕ್ ಕಬೀರ್ ನಿರ್ದೇಶನದ 'ಖುದಾ ಆಫಿಜ್' ಸಿನಿಮಾದಲ್ಲೂ ವಿದ್ಯುತ್ ಜಮ್ವಾಲ್ ನಟಿಸಿದ್ದಾರೆ. ಇದೂ ಸಹ ಒಟಿಟಿ ಮೂಲಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಲಿದೆ. ಇನ್ನು ಈ ಸಿನಿಮಾಗಳ ರಿಲೀಸ್ ಕುರಿತಾಗಿ ಪ್ರಕಟಿಸಲು ಹಾಟ್ಸ್ಟಾರ್ ಆಯೋಜಿಸಿದ್ದ ಆನ್ಲೈನ್ ಸುದ್ದಿಗೋಷ್ಠಿಗೆ ತಮ್ಮನ್ನು ಕರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು ವಿದ್ಯುತ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ