ಲಾಕ್ಡೌನ್ನಿಂದಾಗಿ ಸ್ಟಾರ್ ನಟರು ಅಭಿನಯಿಸಿರುವ ಸಿನಿಮಾಗಳೇ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ. ಇದರಿಂದಾಗಿ ಸಿನಿ ಪ್ರಿಯರು ಖುಷಿಯಾಗಿದ್ದಾರೆ. ಅಲ್ಲದೆ ಈಗ ಸಿನಿಮಾ ಸ್ಟಾರ್ಗಳು ನಿರ್ಮಾಪಕರಾಗುತ್ತಿದ್ದು, ವೆಬ್ ಸರಣಿ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಈಗ ನಟಿ ವಿದ್ಯಾ ಬಾಲನ್ ಸಹ ಇದೇ ದಾರಿ ಹಿಡಿದಿದ್ದಾರೆ.
ಕಿರುಚಿತ್ರ ನಟ್ಖಟ್ ಮೂಲಕ ವಿದ್ಯಾ ಬಾಲನ್ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್ ಒಂದು ಮಗುವಿನ ತಾಯಿಯಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಕಿರುಚಿತ್ರದ ಪೋಸ್ಟರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಿದ್ದರು.
![vidya balan turns as producer with her 1st short movie natkhat here is the first look poster]()
ವಿದ್ಯಾ ಬಾಲನ್
ಈಗ ನಟ್ಖಟ್ ಕಿರುಚಿತ್ರ ಆನ್ಲೈನ್ನಲ್ಲಿ ಇಂದು ಸಂಜೆ 4.30ಕ್ಕೆ ಯೂಟ್ಯೂಬ್ನಲ್ಲಿ ಪ್ರದರ್ಶನಗೊಂಡಿತು. 33 ನಿಮಿಷದ ಈ ಕಿರುಚಿತ್ರ ಅಮ್ಮ ಹಾಗೂ ಮಗುವಿನ ಸಂಬಂಧದ ಕುರಿತದ್ದಾಗಿದೆ.
ನಟ್ಖಟ್ ಕಿರುಚಿತ್ರವನ್ನು ವರ್ಲ್ಡ್ ಪ್ರೀಮಿಯರ್ ಮಾಡಲು ಮುಂಬೈ ಫಿಲ್ಮ್ ಫೆಸ್ಟಿವಲ್ ಆಯ್ಕೆ ಮಾಡಿದ್ದು, ಇಂದು ಸಂಜೆ 4.30ಕ್ಕೆ ವಿ ಆರ್ ಒನ್: ಎ ಗ್ಲೋಬಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶಿಸಲಾಯಿತು. ಈ ವೇದಿಕೆ ಮೂಲಕ ಕಿರುಚಿತ್ರವನ್ನು ಪ್ರದರ್ಶಿಸಲು ಉತ್ಸುಕರಾಗಿರುವುದಾಗಿ ವಿದ್ಯಾ ಬಾಲನ್ ಮಧ್ಯಾಹ್ನ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದಾಗ ಹೇಳಿಕೊಂಡಿದ್ದರು.
ಈ ಕಿರುಚಿತ್ರದಲ್ಲಿ ವಿದ್ಯಾ ಬಾಲನ್ ತನ್ನ ಮಗುವನ್ನು ಸರಿಯಾದ ದಾರಿಗೆ ತರಲು, ರಾತ್ರಿ ಮಲಗುವಾಗ ಕತೆಗಳನ್ನು ಹೇಳುತ್ತಾರೆ. ಈ ಕತೆಗಳ ಮೂಲಕ ಮಗುವಿನಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಾರಾ ಅನ್ನೋದೇ ಇದರ ಕತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ