ಲಾಕ್ಡೌನ್ನಿಂದಾಗಿ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳು ಬಾಗಿಲು ಮುಚ್ಚಿದಾಗ ಸಿನಿ ಪ್ರಿಯರು ಒಟಿಟಿ ಪ್ಲಾಟ್ಫಾರ್ಮ್ನ ಮೊರೆ ಹೋಗಿದ್ದರು. ಆಗಿನಿಂದ ಇಲ್ಲಿಯವರೆಗೂ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂ ಹೀಗೆ ಡಿಜಿಟಲ್ ವೇದಿಕೆಗಳಲ್ಲಿ ವೆಬ್ ಸರಣಿ ಹಾಗೂ ಸಿನಿಮಾಗಳನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಒಟಿಟಿ ವೇದಿಕೆಯ ಮೂಲಕ ಸಾಕಷ್ಟು ಫಿಲ್ಮ್ ಮೇಕರ್ಸ್ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನೇ ಬಿಡುಗಡೆ ಮಾಡುತ್ತಿದ್ದಾರೆ. ಹಲವಾರು ವೆಬ್ ಸರಣಿಗಳು ಸಿನಿಮಾ ಮಂದಿರಗಳ ಕೊರತೆಯನ್ನು ನೀಗಿಸುತ್ತಿವೆ. ನಟನೆಯ ಜೊತೆಗೆ ನಿರ್ಮಾಪಕಿಯಾಗಿರುವ ಅನುಷ್ಕಾ ಶರ್ಮಾ ಸಹ ಪಾತಾಲ್ಲೋಕ್ ಎಂಬ ವೆಬ್ ಸರಣಿಯನ್ನು ನಿರ್ಮಿಸಿ ರಿಲೀಸ್ ಮಾಡಿದ್ದರು. ಆಗಲೇ ನಟಿ ವಿದ್ಯಾ ಬಾಲನ್ ಸಹ ನಿರ್ಮಾಪಕಿಯಾಗಿ ಒಂದು ಕಿರುಚಿತ್ರ ನಿರ್ಮಿಸಿದರು. ಅದಕ್ಕೆ ನಟ್ಖಟ್ ಎಂದು ಶೀರ್ಷಿಕೆ ನೀಡಲಾಗಿದೆ. ಜೊತೆಗೆ ಏಕ್ ಕಹಾನಿ ಸುನೋಗೆ ಎಂಬ ಟ್ಯಾಗ್ ಲೈನ್ ಸಹ ಇಡಲಾಗಿದೆ.
ನಟ್ಖಟ್ ಕಿರುಚಿತ್ರದಲ್ಲಿ ವಿದ್ಯಾಬಾಲನ್ ಅವರೇ ನಟಿಸಿದ್ದು, ಈ ಹಿಂದೆಯೇ ಇದರ ಫಸ್ಟ್ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು. ನಂತರ ಟ್ರೇಲರ್ ಸಹ ಬಿಡುಗಡೆಯಾಗಿತ್ತು. ನಟ್ಖಟ್ ಕಿರುಚಿತ್ರವನ್ನು ವರ್ಲ್ಡ್ ಪ್ರೀಮಿಯರ್ ಮಾಡಲು ಮುಂಬೈ ಫಿಲ್ಮ್ ಫೆಸ್ಟಿವಲ್ ಆಯ್ಕೆ ಮಾಡಿತ್ತು. ಅದರಂತೆ ವಿ ಆರ್ ಒನ್: ಎ ಗ್ಲೋಬಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶಿಸಲಾಗಿತ್ತು.
33 ನಿಮಿಷದ ಈ ಕಿರುಚಿತ್ರ ಅಮ್ಮ ಹಾಗೂ ಮಗುವಿನ ಸಂಬಂಧದ ಕುರಿತದ್ದಾಗಿದೆ. ಶಾನ್ ವ್ಯಾಸ್ ನಿರ್ದೇಶನ ಕಿರುಚಿತ್ರದ ಮೂಲಕ ವಿದ್ಯಾ ಬಾಲನ್ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್ ಒಂದು ಮಗುವಿನ ತಾಯಿಯಾಗಿ ನಟಿಸಿದ್ದಾರೆ. ಈ ಕಿರುಚಿತ್ರ ಇಂಡಿಯ ಶಾರ್ಟ್ ಫಿಲ್ಮ್ ಫೆಸ್ಟಿವಲ್ 2020ರ ಮೂರನೇ ಆವೃತ್ತಿಯಲ್ಲಿ ಪ್ರದರ್ಶನಗೊಂಡಿದ್ದು, ಮೊದಲ ಪ್ರಶಸ್ತಿ ಪಡೆದುಕೊಂಡಿದೆ. ಈ ಮೂಲಕ ಈಗ ನೇರವಾಗಿ ಆಸ್ಕರ್ಗೆ ನಾಮನಿರ್ದೇಶನಗೊಂಡಿದೆ.
ಈ ವೇದಿಕೆ ಮೂಲಕ ಕಿರುಚಿತ್ರವನ್ನು ಪ್ರದರ್ಶಿಸಲು ಉತ್ಸುಕರಾಗಿರುವುದಾಗಿ ವಿದ್ಯಾ ಬಾಲನ್ ಮಧ್ಯಾಹ್ನ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದಾಗ ಹೇಳಿಕೊಂಡಿದ್ದರು.
ಈ ಕಿರುಚಿತ್ರದಲ್ಲಿ ವಿದ್ಯಾ ಬಾಲನ್ ತನ್ನ ಮಗುವನ್ನು ಸರಿಯಾದ ದಾರಿಗೆ ತರಲು, ರಾತ್ರಿ ಮಲಗುವಾಗ ಕತೆಗಳನ್ನು ಹೇಳುತ್ತಾರೆ. ಈ ಕತೆಗಳ ಮೂಲಕ ಮಗುವಿನಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಾರಾ ಅನ್ನೋದೇ ಇದರ ಕತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ