• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bollywood: ಆ ನಿರ್ದೇಶಕ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿದ್ದ; ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾ ಬಾಲನ್

Bollywood: ಆ ನಿರ್ದೇಶಕ ನನ್ನನ್ನು ರೂಮಿಗೆ ಕರೆದುಕೊಂಡು ಹೋಗಿದ್ದ; ಕಾಸ್ಟಿಂಗ್ ಕೌಚ್ ಕರಾಳ ಅನುಭವ ಬಿಚ್ಚಿಟ್ಟ ವಿದ್ಯಾ ಬಾಲನ್

ನಟಿ ವಿದ್ಯಾ ಬಾಲನ್​

ನಟಿ ವಿದ್ಯಾ ಬಾಲನ್​

ಸಂದರ್ಶನದಲ್ಲಿ ಮಾತನಾಡಿದ ಬಾಲನ್‌, ನನಗೂ ಕಾಸ್ಟಿಂಗ್‌ ಕೌಚ್‌ ಅನುಭವ ಸ್ವಲ್ಪ ಮಟ್ಟಿಗೆ ಆಗಿದೆ. ಆದರೆ ಅದನ್ನು ನಾನು ಹೆದರದೆ ಧೈರ್ಯವಾಗಿ ನಿಭಾಯಿಸಿ ತಪ್ಪಿಸಿಕೊಂಡೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.

 • Trending Desk
 • 5-MIN READ
 • Last Updated :
 • Karnataka, India
 • Share this:

ಸಿನಿಮಾ ಉದ್ಯಮದ (Film Industry) ದೊಡ್ಡ ಪಿಡುಗು ಎಂದರೆ ಅದು ಕಾಸ್ಟಿಂಗ್ ಕೌಚ್, (Casting Couch) ಭಾರತೀಯ ಚಿತ್ರರಂಗದಲ್ಲಿ ದಶಕಗಳಿಂದ ಈ ಒಂದು ಪದ್ಧತಿ ಅಸ್ತಿತ್ವದಲ್ಲಿದೆ. ಆದರೆ ಹಿಂದೆ ಕಲಾವಿದರು ತಮ್ಮ ಭವಿಷ್ಯಕ್ಕೆ ಹೆದರಿ ಇದರ ಬಗ್ಗೆ ತುಟಿಕ್‌ ಪಿಟಿಕ್‌ ಎನ್ನುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಕಾಸ್ಟಿಂಗ್‌ ಕೌಚ್‌ ಬಗ್ಗೆ ದೊಡ್ಡ ಕಲಾವಿದರಿಂದ ಹಿಡಿದು ಎಲ್ಲರೂ ಮುಕ್ತವಾಗಿ ತಮಗಾದ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.


ಚಿತ್ರರಂಗದಲ್ಲಿ ಆ ಕಾಲದಿಂದಲೂ ಇದ್ದ ಕಾಸ್ಟಿಂಗ್‌ ಕೌಚ್‌ ಎಂಬ ಕೆಟ್ಟ ಪದ್ಧತಿ ಈ ಕಾಲದ ಬೋಲ್ಡ್‌ ನಟಿಮಣಿಯರಿಗೂ ತಪ್ಪಿಲ್ಲ. ಇಲಿಯಾನಾ ಡಿಕ್ರೂಜ್, ಶ್ರುತಿ ಹರಿಹರನ್, ಪಾರ್ವತಿ ಮೆನನ್, ನಯನ ತಾರಾ ಅಷ್ಟೇ ಯಾಕೆ ಬಾಲಿವುಡ್‌ ಬೋಲ್ಡ್‌ ಬ್ಯೂಟಿ ಮತ್ತು ನಟಿ ವಿದ್ಯಾ ಬಾಲನ್‌ಗೂ (Vidya balan) ತಪ್ಪಿಲ್ಲ.


ನಟಿ ವಿದ್ಯಾ ಬಾಲನ್​


ವಿದ್ಯಾ ಬಾಲನ್‌ಗೂ ಆಗಿತ್ತು ಕಾಸ್ಟಿಂಗ್‌ ಕೌಚ್‌ ಎಂಬ ಕರಾಳ ಅನುಭವ


ಹೌದು ಬಾಲಿವುಡ್‌ ನಟಿ ವಿದ್ಯಾ ಬಾಲನ್‌ಗೂ ಈ ಕಹಿ ಅನುಭವವಾಗಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರನ್ನು ನಿರ್ದೇಶಕರೊಬ್ಬರು ಹೋಟೆಲಿನ ರೂಮಿಗೆ ಬರಲು ಹೇಳಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.


ಕೆಟ್ಟ ಸಂದರ್ಭದಿಂದ ಸ್ವಯಂ ರಕ್ಷಣೆ ಪಾಠ ಕಲಿತೆ ಎಂದ ಬಾಲನ್‌


ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ವಿದ್ಯಾ ಬಾಲನ್ ಅವರಿಗಾದ ಕಾಸ್ಟಿಂಗ್‌ ಕೌಚ್‌ ಅನುಭವ ಮತ್ತು ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಬಂದೆ ಎಂಬುದರ ಬಗ್ಗೆ ಹೇಳಿದ್ದಾರೆ.


ಈ ಅನುಭವದಿಂದ ನಾನು ಸಾಕಷ್ಟು ಪಾಠ ಕಲಿತೆ, ಧೈರ್ಯದಿಂದ ಸಂದರ್ಭವನ್ನು ಎದುರಿಸುವ ಶಕ್ತಿ ಪಡೆದೆ, ಸ್ವಯಂ ಸಂರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಕಲಿತೆ ಎಂಬುದರ ಬಗ್ಗೆ ಹೇಳಿದ್ದಾರೆ.


ಹೋಟೆಲ್ ರೂಮಿಗೆ ಬಾ ಎಂದ ನಿರ್ದೇಶಕನಿಗೆ ಚಳ್ಳೆಹಣ್ಣು ತಿನಿಸಿದ ವಿದ್ಯಾ ಬಾಲನ್


ಸಂದರ್ಶನದಲ್ಲಿ ಮಾತನಾಡಿದ ಬಾಲನ್‌, ನನಗೂ ಕಾಸ್ಟಿಂಗ್‌ ಕೌಚ್‌ ಅನುಭವ ಸ್ವಲ್ಪ ಮಟ್ಟಿಗೆ ಆಗಿದೆ. ಆದರೆ ಅದನ್ನು ನಾನು ಹೆದರದೆ ಧೈರ್ಯವಾಗಿ ನಿಭಾಯಿಸಿ ತಪ್ಪಿಸಿಕೊಂಡೆ ಎಂದಿದ್ದಾರೆ.


ತಮ್ಮ ಕೆರಿಯರ್ ಹಾಗೂ ಸಿನಿಮಾಗಳು ಕೈತಪ್ಪಿ ಹೋಗಿದ್ದರ ಬಗ್ಗೆ ಮಾತನಾಡುತ್ತಾ ನಿರ್ದೇಶಕರೊಬ್ಬರು ತಮ್ಮನ್ನು ಹೋಟೆಲ್ ರೂಮಿಗೆ ಕರೆದಿದ್ದರು ಎಂಬ ವಿಷಯವನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


ಈ ಬಗ್ಗೆ ಮಾತನಾಡಿದ ವಿದ್ಯಾ, ನನಗೆ ನೆನಪಿದೆ. ನಾನು ಚೆನ್ನೈನಲ್ಲಿ ಕೆಲಸದ ನಿಮಿತ್ತ ಒಬ್ಬ ನಿರ್ದೇಶಕರನ್ನು ಭೇಟಿ ಮಾಡಿದೆ. ಆಗ ನಾನು ಅವರಿಗೆ ಕಾಫಿ ಶಾಪ್‍ಗೆ ಹೋಗಿ ಮಾತನಾಡೋಣ ಎಂದು ಹೇಳಿದ್ದೆ. ಆದರೆ ಅವರು ಪದೇ ಪದೇ ರೂಮಿಗೆ ಹೋಗುವುದರ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೆ ನನ್ನ ಜೊತೆ ಮಾತನಾಡಬೇಕು ಎಂದರೆ ರೂಮಿಗೆ ಬರಬೇಕು ಎಂದು ಹೇಳುತ್ತಿದ್ದನು.


ಈ ವೇಳೆ ನನಗೆ ನಿರ್ದೇಶಕನ ಉದ್ದೇಶ ತಿಳಿಯಿತು. ಧೈರ್ಯ ಮಾಡಿ ಆತನ ಜೊತೆ ಹೋಟೆಲ್‌ ರೂಮಿಗೆ ಹೋದೆ. ಆದರೆ ನಾನು ಇಲ್ಲಿ ಒಂದು ಉಪಾಯ ಮಾಡಿದೆ. ನಾವಿಬ್ಬರೂ ಮಾತನಾಡುವಾಗ ರೂಮ್‌ ಬಾಗಿಲನ್ನು ಹಾಕದಂತೆ ನೋಡಿಕೊಂಡೆ.
ಈ ಸಮಯದಲ್ಲಿ ನನಗೆ ಇದೊಂದು ಮಾರ್ಗ ಕಂಡುಬಂದಿದ್ದು. ನಂತರ ನಿರ್ದೇಶಕ ಏನೂ ಮಾತನಾಡದೇ ಅಲ್ಲಿಂದ ಹೊರಟು ಹೋದರು. ಈ ಅನುಭವ ನನಗೆ ಸಂಪೂರ್ಣ ಕಾಸ್ಟಿಂಗ್‌ ಕೌಚ್‌ ಅಲ್ಲದಿದ್ದರೂ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು, ನಮ್ಮನ್ನು ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿತೆ. ಮುಂದೆ ಇದರ ಪರಿಣಾವಾಗಿ ನನಗೆ ಆ ಚಿತ್ರದಲ್ಲಿ ಚಾನ್ಸ್‌ ಸಿಗಲಿಲ್ಲ ಎಂದು ವಿದ್ಯಾ ಬಾಲನ್‌ ತಮ್ಮ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: