ಸೆಟ್ಟೇರಲಿದೆ ವಿದ್ಯಾ ಬಾಲನ್​ ಅಭಿನಯದ ಜಯಲಲಿತಾ ಜೀವನಾಧಾರಿತ ಸಿನಿಮಾ..!

Anitha E | news18
Updated:December 14, 2018, 2:12 PM IST
ಸೆಟ್ಟೇರಲಿದೆ ವಿದ್ಯಾ ಬಾಲನ್​ ಅಭಿನಯದ ಜಯಲಲಿತಾ ಜೀವನಾಧಾರಿತ ಸಿನಿಮಾ..!
  • News18
  • Last Updated: December 14, 2018, 2:12 PM IST
  • Share this:
ತಮಿಳುನಾಡಿನ ಅಮ್ಮ ಎಂದೇ ಖ್ಯಾತರಾದ ಪುರಚ್ಚಿ ತಲೈವಿ ಜಯಲಲಿತಾ ಅವರ ಜೀವನಾಧಾರಿತ ಸಿನಿಮಾ ಬರುತ್ತಿರುವ ವಿಷಯ ತಿಳಿದೇ ಇದೆ. ಅದರಲ್ಲೂ ಒಂದಲ್ಲ... ಎರಡಲ್ಲ...  ಮೂರು ಸಿನಿಮಾಗಳು ಸೆಟ್ಟೇರುತ್ತಿವೆ.

ಈ ಹಿಂದೆಯೇ ಹೇಳಿದಂತೆ  'ಐರನ್​ ಲೇಡಿ' ಶೀರ್ಷಿಕೆಯಲ್ಲಿ ಜಯಲಲಿತಾ ಅವರ ಪಾತ್ರದಲ್ಲಿ ನಿತ್ಯಾ ಮೆನನ್​ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಪ್ರಿಯದರ್ಶಿನಿ ಅವರು ನಿರ್ದೇಶಿಸುತ್ತಿದ್ದಾರೆ.

ಇದನ್ನು ಓದಿ: ಗೂಗಲ್​ ಸರ್ಚ್​ನಲ್ಲಿ ಐದನೇ ಸ್ಥಾನದಲ್ಲಿ ಕಿರಿಕ್​ ರಶ್ಮಿಕಾ ಮಂದಣ್ಣ..!

ಜಯಲಲಿತಾ ಜೀವನಾಧಾರಿತ ಸಿನಿಮಾ ಭಾರತೀರಾಜಾ ನಿರ್ದೇಶನದಲ್ಲಿ ಸೆಟ್ಟೇರಲಿರುವ ಮಾಹಿತಿ ಲಭ್ಯವಾಗಿದೆ. ಇದರೊಂದಿಗೆ ಲೈಕಾ ಸಂಸ್ಥೆ ಸಹ ಜಯಲಲಿತಾ ಅವರ ಕುರಿತಾದ ಸಿನಿಮಾ ನಿರ್ಮಿಸುತ್ತಿದ್ದು, ಎ.ಎಲ್​. ವಿಜಯ್​ ಇದರ ಸಾರಥ್ಯ ವಹಿಸಿದ್ದಾರೆ.

ಕಾಲಿವುಡ್​ನಲ್ಲಿ ವಿಜಯ್​ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸ ಮುಗಿದಿದೆ. ಇದಕ್ಕೆ ನಟಿ ವಿದ್ಯಾಬಾಲನ್​ ಆಯ್ಕೆಯಾಗಿದ್ದು, ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಲಿದೆಯಂತೆ.

ಈ ಸಿನಿಮಾ ಕುರಿತಾದ ಅಧಿಕೃತ ಪ್ರಕಟಣೆ ಜಯಲಲಿತಾ ಅವರ ಹುಟ್ಟುಹಬ್ಬದಂದು ಅಂದರೆ ಫೆಬ್ರುವರಿ 24ರಂದು ಹೊರ ಬೀಳಲಿದೆಯಂತೆ. ಈ ಸಿನಿಮಾವನ್ನು 2020 ಫೆ.24ರಂದು ರಿಲೀಸ್​ ಮಾಡಲು ನಿರ್ಧರಿಸಲಾಗಿದೆಯಂತೆ.

 
First published:December 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ