Video: ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಶಾರುಖ್​-ಅಮೀರ್​ ಖಾನ್​!

news18
Updated:July 11, 2018, 4:32 PM IST
Video: ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಶಾರುಖ್​-ಅಮೀರ್​ ಖಾನ್​!
news18
Updated: July 11, 2018, 4:32 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ನಲ್ಲಿ ಈಗೇನಿದ್ದರೂ ಖಾನ್​ಗಳದ್ದೇ ಕಾರುಬಾರು. ಶಾರುಖ್​, ಅಮೀರ್​, ಸಲ್ಮಾನ್​ ಹಾಗೂ ಸೈಫ್​ ಯಾವ ಸಿನಿಮಾ ಮಾಡಿದರೂ ಅದು ಹಿಟ್​ ಆಗುತ್ತದೆ ಅನ್ನೋ ನಂಬಿಕೆ ಈಗಲೂ ಬಿ-ಟೌನ್​ನಲ್ಲಿದೆ.

ಈ ಹಿಂದೆ ಸಹ ಖಾನ್​ಗಳು ತೆರೆ ಹಂಚಿಕೊಂಡಿರುವ ಸಿನಿಮಾಗಳು ಸಾಕಷ್ಟು ಹಿಟ್​ ಆಗಿವೆ. ಶಾರುಖ್​ ಸಲ್ಮಾನ್​ ಅಭಿನಯದ 'ಕುಚ್​ ಕುಚ್​ ಹೋತಾ ಹೈ', ಸೈಫ್​-ಸಲ್ಲು ಅಭಿನಯದ 'ಹಮ್​ ಸಾತ್​ ಸಾತ್​ ಹೈ', ಅಲ್ಲು-ಅಮೀರ್​ ಅಭಿನಯದ ಕ್ಲಾಸಿಕ್​ ಹಿಟ್​ 'ಅಂದಾಜ್​ ಅಪ್ನಾ ಅಪ್ನಾ' ಕಾಡಿಮಿ ಸಿನಿಮಾ, ಅಮೀರ್​-ಸೈಫ್​ ಅಭಿನಯದ 'ದಿಲ್​ ಚಾಹತಾ ಹೈ' ಸಿನಿಮಾ ಬಾಕ್ಸಾಫಿಸ್​ನಲ್ಲಿ ದೂಳೆಬ್ಬಿಸಿದ್ದವು.

ಆದರೆ ಈ ಖಾನ್​ ಜೋಡಿಗಳಲ್ಲಿ ಇಂದಿಗೂ ಅಮೀರ್​ ಹಾಗೂ ಶಾರುಖ್​ ಅವರನ್ನು ಯಾರೂ ಸಹ ಒಂದೇ ವೇದಿಕೆ ಮೇಲೆ ನೋಡಿಯೇ ಇಲ್ಲ. ಕಾರಣ ಅವರಿಬ್ಬರ ನಡುವೆ ಇರುವ ಮನಸ್ತಾಪ. ಆದರೆ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡುವ ಅವಕಾಶ ಮಾತ್ರ ಇನ್ನೂ ಇದೆ.  ಬೆಳ್ಳಿ ತೆರೆ ಎಂದ ಕೂಡಲೇ ಅಮೀರ್​-ಶಾರುಖ್​ ಅವರು ಹೊಸ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂದುಕೊಳ್ಳಬೇಡಿ. ಆದರೆ ಈ ಖಾನ್​ಗಳು ಅಭಿನಯಿಸಿರುವ ಸಿನಿಮಾ ಬಹಳ ಹಿಂದೆಯೇ ಬಂದು ಹೋಗಿದೆ.

ಹೌದು 1993ರಲ್ಲಿ ತೆರೆ ಕಂಡಿರುವ 'ಪೆಹೆಲಾ ನಶಾ' ಸಿನಿಮಾದಲ್ಲಿ ಶಾರುಖ್, ಅಮೀರ್​ ಹಾಗೂ ಸೈಫ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಷಯ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಈ ಸಿನಿಮಾದಲ್ಲಿ ಶಾರುಖ್​-ಅಮೀರ್​ ಪಕ್ಕ ಪಕ್ಕ ನಿಂತು ಖುಷಿಯಿಂದ ಅಭಿನಯಿಸಿದ್ದಾರೆ. ಈ ಸಿನಿಮಾದ ವಿಡಿಯೋ ನಿಮಗಾಗಿ...

First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ