ಬಾಲಿವುಡ್ನ (Bollywood) ಬೇಬಿ ಡಾಲ್ ಅಳೋದನ್ನು ನೋಡಿದ್ದೀರಾ? ಸನ್ನಿ ಲಿಯೋನ್ ಅವರ ಮಾತು ಹಾಗೂ ನಗು (Smile) ತುಂಬಾ ಚಂದ. ಕ್ಯೂಟ್ (Cute) ಆಗಿ ಸ್ಮೈಲ್ ಮಾಡುತ್ತಿದ್ದಾರೆ ಈ ಚೆಲುವೆ. ಆದರೆ ಅವರು ಎಂದಾದರೂ ಅಳೋದನ್ನು (Crying) ನೋಡಿದ್ದೀರಾ? ಸನ್ನಿ ಲಿಯೋನ್ (Sunny Leone) ಕಣ್ಣೀರಿಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅದೂ ಕೂಡಾ ಕಾನ್ (Cannes) ಫಿಲ್ಮ್ ಫೆಸ್ಟಿವಲ್ನಲ್ಲಿ ನಟಿ ಕಣ್ಣೀರಿಟ್ಟಿದ್ದಾರೆ. ಕಾನ್ 2023ರಲ್ಲಿ ಭಾರತೀಯ ಚಿತ್ರರಂಗದ ಬಹಳಷ್ಟು ತಾರೆಗಳು (Stars) ಮಿಂಚಿದ್ದಾರೆ. ಈ ಬಾರಿ ಸನ್ನಿ ಲಿಯೋನ್ ಮೊದಲ ಬಾರಿಗೆ ಕಾನ್ 2023ರ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಅನುರಾಗ್ ಕಷ್ಯಪ್ ನಿರ್ದೇಶನದ ಕೆನೆಡಿ ಸಿನಿಮಾದಲ್ಲಿ ಸನ್ನಿ ಲಿಯೋನ್ ಹಾಗೂ ರಾಹುಲ್ ಭಡ್ ನಟಿಸಿದ್ದು ಈ ಸಿನಿಮಾ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರೀಮಿಯರ್ ಶೋ ಆಗಿದೆ. ಕಾನ್ನ ಮಿಡ್ನೈಟ್ ಸ್ಕ್ರೀನಿಂಗ್ನಲ್ಲಿ ಸಿನಿಮಾ ಪ್ರದರ್ಶನವಾಗಿದ್ದು ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ ನಿರ್ದೇಶಕ ಅನುರಾಗ್ ಕಷ್ಯಪ್ ಅವರು ಪ್ರೀಮಿಯರ್ ಶೋನ ವಿಡಿಯೋ ಒಂದನ್ನು ರೀ ಶೇರ್ ಮಾಡಿದ್ದಾರೆ. ಇದರಲ್ಲಿ ಜನರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಾಣಬಹುದು. ಸನ್ನಿ ಲಿಯೋನ್ ಹಾಗೂ ರಾಹುಲ್ ಭಟ್ ಕೂಡಾ ವಿಡಿಯೋದಲ್ಲಿ ಕಾಣಿಸಿದ್ದಾರೆ.
ಸಿನಿಮಾ ನೋಡಿದ ಜನರು ಸುಮಾರು 7 ನಿಮಿಷಗಳ ಕಾಲ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಲಾಪ್ ಮಾಡಿದ್ದಾರೆ. ಸಿನಿಮಾದಲ್ಲಿ ಸತ್ತು ಹೋಗಿದ್ದಾರೆ ಎಂದುಕೊಂಡ ಮಾಜಿ ಅಧಿಕಾರಿ ಭ್ರಷ್ಟ ವ್ಯವಸ್ಥೆ ಎದುರಾಗಿ ಹೋರಾಡು ಕಥೆ ಇದಾಗಿದೆ. ಈ ಸಿನಿಮಾ ಕಾನ್ 2023ರಲ್ಲಿ ಮಿಡ್ನೈಟ್ ಶೋಗೆ ಆಯ್ಕೆಯಾಗಿತ್ತು. ಸಿನಿಮಾ ಫೆಸ್ಟಿವಲ್ಗೆ ಈ ವರ್ಷ ಭಾರತದಿಂದ ಆಯ್ಕೆಯಾದ ಎರಡೇ ಎರಡು ಸಿನಿಮಾಗಳಲ್ಲಿ ಕೆನೆಡಿಯೂ ಒಂದಾಗಿದೆ.
ಇದನ್ನೂ ಓದಿ: Pavitra Lokesh: ನನ್ನ ಬೆಡ್ರೂಮ್-ಪವಿತ್ರಾ ಸೌಂದರ್ಯ! ನರೇಶ್ ಹೇಳಿದ್ದಿಷ್ಟು
ಸನ್ನಿ ಲಿಯೋನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೆಡ್ ಕಾರ್ಪೆಟ್ ಲುಕ್ ಶೇರ್ ಮಾಡಿದ್ದಾರೆ. ಕೆನೆಡಿಯ ವರ್ಲ್ಡ್ ಪ್ರೀಮಿಯರ್. ನಾನು ಭಾರತೀಯ ಸಿನಿಮಾ ಪ್ರತಿನಿಧಿಸಲು ಹೆಮ್ಮೆ ಪಡುತ್ತೇನೆ. ನನಗೂ ತಂಡಕ್ಕೂ ಇದೊಂದು ವಿಶೇಷ ಅನುಭವ ಎಂದು ಬರೆದಿದ್ದಾರೆ. ನಟಿ ಇನ್ನೊಂದು ಪೋಸ್ಟ್ ಶೇರ್ ಮಾಡಿದ್ದರು. ಅದರಲ್ಲಿ ನಟಿ ಗಾಂಗ್ಸ್ ಆಫ್ ವಾಸೇಪುರ್ ನಿರ್ದೇಶಕ, ಸಹ ನಟ ರಾಹುಲ್ ಭಟ್ ಜೊತೆ ಪೋಸ್ ಕೊಡುವುದನ್ನು ಕಾಣಬಹುದು.
#Kennedy Film Got 7Minutes Standing Ovation @ 76th @Festival_Cannes On May 24, 2023🔥🔥
Stars: @itsRahulBhat - @SunnyLeone
Music: @AamirAzizJmi - @boyblanck
Direction: @anuragkashyap72
Releasing Soon In Theatres!!pic.twitter.com/xntdHiR8ck
— Cinema Updates™ (@_cinemaupdates) May 25, 2023
ಬಾಲಿವುಡ್ ನಟಿ ಸನ್ನಿ ಲಿಯೋನ್ ಈ ಬಾರಿ ಮೊದಲ ಬಾರಿಗೆ ಕಾನ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವಾರು ಫೋಟೋಗಳನ್ನು ಕೂಡಾ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟಿ ಈ ಬಗ್ಗೆ ತಮ್ಮ ಕೆಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ.
ನನ್ನನ್ನು ಈವರೆಗೆ ಜನರು ನೀವು ಕೇವಲ ಆ ಸ್ಟಾರ್ ಎಂದು ಕರೆಯುತ್ತಿದ್ದರು. ಆದರೆ ಇನ್ನು ನನ್ನನ್ನು ಹಾಗೆ ಕರೆಯಲು ಸಾಧ್ಯವಿಲ್ಲ ಎಂದಿದ್ದಾರೆ.ಬಾಲಿವುಡ್ ನಟಿಯಾಗಿ ಗುರುತಿಸಿಕೊಂಡಿರುವ ಸನ್ನಿ ಲಿಯೋನ್ ಅವರು ಈಗ ಕಾನ್ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ತಮ್ಮನ್ನು ತಾವು ಪ್ರೂವ್ ಮಾಡಿದ್ದಾರೆ. ನಟಿಯ ರೆಡ್ ಕಾರ್ಪೆಟ್ ಲುಕ್ಸ್ ವೈರಲ್ ಆಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ