Video: ವೈರಲ್​ ಆಯಿತು ಕುದುರೆಯೊಂದಿಗೆ ರೇಸ್​ ಮಾಡಿದ ಸಲ್ಮಾನ್​ ಖಾನ್​ ವಿಡಿಯೋ

news18
Updated:June 22, 2018, 12:35 PM IST
Video: ವೈರಲ್​ ಆಯಿತು ಕುದುರೆಯೊಂದಿಗೆ ರೇಸ್​ ಮಾಡಿದ ಸಲ್ಮಾನ್​ ಖಾನ್​ ವಿಡಿಯೋ
news18
Updated: June 22, 2018, 12:35 PM IST
ನ್ಯೂಸ್​ 18 ಕನ್ನಡ 

ಬಾಕ್ಸಾಫಿಸ್​ನಲ್ಲಿ'ರೇಸ್​ 3' ಸಿನಿಮಾ ಗಳಿಕೆ ವಿಷಯದಲ್ಲಿ ಕುದುರೆಯಂತೆ ಓಡುತ್ತಿದ್ದರೆ, ಸಲ್ಮಾನ್​ ಖಾನ್​ ನಿಜ ಜೀವನದಲ್ಲಿ ಕುದುರೆಯೊಂದಿಗೆ ರೇಸ್ ಮಾಡುತ್ತಿದ್ದಾರೆ. ಅವರ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈ ವಿಡಿಯೋದಲ್ಲಿ ನೀವು ನೋಡಬಹುದು ಸಲ್ಮಾನ್​ ಹಾಗೂ ಕುದುರೆ ರೇಸ್​ ಆರಂಭಿಸಿದಾಗ, ಇಬ್ಬರೂ ನೇರವಾಗಿಯೇ ಓಡುತ್ತಾರೆ. ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ಕುದುರೆ ಓಡುವ ದಿಕ್ಕನ್ನು ಬದಲಿಸುತ್ತದೆ. ಆದರೆ ಸಲ್ಮಾನ್​ ಮಾತ್ರ ನೇರವಾಗಿ ಓಡುವ ಮೂಲಕ ರೇಸ್​ ಅನ್ನು ಮುಗಿಸುತ್ತಾರೆ. ಆದರೆ ರೇಸ್​ನ ಮುಗಿಯುವ ಕೊನೆಯ ಗೆರೆ ಎಲ್ಲಿತ್ತೋ ಯಾರಿಗೂ ಗೊತ್ತಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಸಲ್ಮಾನ್​ ಎಲ್ಲಿ ನಿಲ್ಲುತ್ತಾರೋ ಅದೇ ರೇಸ್​ನ ಅಂತ್ಯ.





ಈ ಹಿಂದೆ 'ರೇಸ್ 3' ಸಿನಿಮಾದ ಟ್ರೇಲರ್​ ಬಿಡುಗಡೆಯಾದಾಗ ಅದನ್ನು ಟ್ರೋಲ್​ ಮಾಡಲಾಗಿತ್ತು. ಆದರೆ ಈ ಸಿನಿಮಾ ಬಿಡುಗಡೆಯಾದ 6 ದಿನದಲ್ಲೇ 142.01 ಕೋಟಿ ಬಾಚಿಕೊಂಡಿದೆ.
First published:June 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ