Video: ಮಹಿಳಾ ಅಭಿಮಾನಿಗಳಿಗಾಗಿ ತುಂಟ ರಣವೀರ್​ ಸಿಂಗ್​ ಮಾಡಿದ್ದೇನು?

news18
Updated:August 10, 2018, 12:19 PM IST
Video: ಮಹಿಳಾ ಅಭಿಮಾನಿಗಳಿಗಾಗಿ ತುಂಟ ರಣವೀರ್​ ಸಿಂಗ್​ ಮಾಡಿದ್ದೇನು?
news18
Updated: August 10, 2018, 12:19 PM IST
ನ್ಯೂಸ್​ 18 ಕನ್ನಡ 

ಸದಾ ತುಂಟುತನ ಹಾಗೂ ಹುಮ್ಮಸ್ಸಿನಿಂದ ಕೂಡಿರುವ ರಣವೀರ್ ಸಿಂಗ್​ ಅವರಿಗೆ ಮಹಿಳೆಯರ ಬಗ್ಗೆ ತುಂಬಾ ಗೌರವವಿದೆ. ಈ ಕುರಿತಾಗಿ ದೀಪಿಕಾ ಪಡುಕೋಣೆ ಸಹ ಸಾಕಷ್ಟು ಬಾರಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಹೌದು ರಣವೀರ್​ಸಿಂಗ್​ ಅವರಿಗೆ ಮಹಿಳೆಯರು ಹಾಗೂ ಕುಟುಂಬದ ಬಗ್ಗೆ ತುಂಬಾ ಗೌರವಿದೆ. ಹಾಗೂ ಸಂಬಂಧಗಳ ವಿಷಯದಲ್ಲಿ ಯಾರೂ ಬೆರಳು ಮಾಡಿ ತೋರಿಸುವಂತಹ ಗುಣ ಅವರದ್ದಲ್ಲ. ಈ ಗುಣದಿಂದಾಗಿಯೇ ನನಗೆ ರಣವೀರ್​ ಬಗ್ಗೆ ಗೌರವ ಎಂದೆಲ್ಲ ದೀಪಿಕಾ ಸಾಕಷ್ಟು ಬಾರಿ ತಮ್ಮ ಪ್ರೀತಿಯನ್ನ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಹೇಳುವ ಮಾತುಗಳಿಗೂ ರಣವೀರ್​ ನಡೆದುಕೊಳ್ಳುವುದಕ್ಕೂ ಸರಿಯಾಗಿಯೇ ಇದೆ. ಹೌದು ಇತ್ತೀಚೆಗೆ ಮುಂಬೈನಲ್ಲಿ ಸ್ಟೋರ್​ ಒಂದರ ಉದ್ಘಾಟನೆಗೆ ಬಂದಿದ್ದ ರಣವೀರ್​ ಸಿಂಗ್​ ಜತೆ ಸೆಲ್ಫಿ ತೆಗೆದುಕೊಳ್ಳು ಅಭಿಮಾನಿಗಳು ಮುಗಿಬೀಳುತ್ತಿದ್ದರು. ಆಗ ಆ ಗುಂಪಿನಲ್ಲಿದ್ದ ಮಹಿಳಾ ಅಭಿಮಾನಿಗಳಿಗೆ ತೊಂದರೆಯಾಗದಂತೆ ಹುಡುಗರನ್ನು ದೂರ ಸರಿಸಿ, ಸ್ವಲ್ಪ ನಿಧಾನವಾಗಿ ನಿಮ್ಮೊಂದಿಗೂ ಸೆಲ್ಫಿ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ.

 



Ranveer Singh At JACK & JONES Store | Ranveer Singh Out For Shopping


A post shared by 🔥🔥 (@bollywood.loverss_) on






ಮೊದಲು ಮಹಿಳೆಯರಿಗೆ ಸುರಕ್ಷಿತವಾಗಿ ಸೆಲ್ಫಿ ತೆಗೆಸಿಕೊಳ್ಳಲು ಅವಕಾಶ ಕೊಡಿಸಿ, ನಂತರ ಹುಡುಗರೊಂದಿಗೂ ಸೆಲ್ಫಿ ತೆಗೆಸಿಕೊಂಡಿದ್ದಾರೆ. ರಣವೀರ್​ ಅವರ ಈ ವಿಡಿಯೋ ಈಗ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗುತ್ತಿದೆ. ರಣವೀರ್​ ಸಿಂಗ್​ ಅಭಿಮಾನಿಗಳಲ್ಲದವರೂ ಸಹ ಈ ವಿಡಿಯೋವನ್ನು ಶೇರ್​ ಮಾಡುತ್ತಿರುವುದು ವಿಶೇಷ.

 




ರಣವೀರ್​ ಸಿಂಗ್​ ಹಾಗೂ ದೀಪಿಕಾ ಈ ವರ್ಷಾಂತ್ಯಕ್ಕೆ ಇಟಲಿಯಲ್ಲಿ ವಿವಾಹವಾಗಲಿದ್ದಾರೆ ಎಂಬ ಗಾಳಿ ಮಾತು ಬಿ-ಟೌನ್​ನಲ್ಲಿ ಹರಿದಾಡುತ್ತಿದೆ. ಆದರೆ ರಣವೀರ್​ ಸದ್ಯ 'ಗಲ್ಲಿ ಬಾಯ್' ಹಾಗೂ 'ಸಿಂಬಾ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ