Video: ರಣಬೀರ್​ 'ಸಂಜು' ಆಗೋಕೆ ಎಷ್ಟೆಲ್ಲ ಕಷ್ಟಪಟ್ಟರು: ಅಷ್ಟಾಗಿಯೂ ಈ ಸಿನಿಮಾದಿಂದ ಒಮ್ಮೆ ರಿಜೆಕ್ಟ್​ ಆಗಿದ್ದು ಏಕೆ?

news18
Updated:July 7, 2018, 1:52 PM IST
Video: ರಣಬೀರ್​ 'ಸಂಜು' ಆಗೋಕೆ ಎಷ್ಟೆಲ್ಲ ಕಷ್ಟಪಟ್ಟರು: ಅಷ್ಟಾಗಿಯೂ ಈ ಸಿನಿಮಾದಿಂದ ಒಮ್ಮೆ ರಿಜೆಕ್ಟ್​ ಆಗಿದ್ದು ಏಕೆ?
news18
Updated: July 7, 2018, 1:52 PM IST
ನ್ಯೂಸ್​ 18 ಕನ್ನಡ

ಒಬ್ಬ ನಟನ ಜೀವನಾಧಾರಿತ ಕಥೆಯನ್ನ ತೆರೆಮೇಲೆ ತರೋದು ಎಷ್ಟು ಕಷ್ಟವೊ ಅದಕ್ಕಿಂತ ದುಪ್ಪಟ್ಟು ಕಷ್ಟ ಆ ನಟನಂತೆ ಕಲಾವಿದನನ್ನು ಕಾಣುವಂತೆ ಮಾಡುವುದು ಹಾಗೂ ಆ ನಟನಂತೆಯೇ ಅಭಿನಯಿಸುವಂತೆ ಮಾಡುವುದು. ಇದಕ್ಕೆಲ್ಲ ಬಾಲಿವುಡ್​ ನಿರ್ದೇಶಕರು  ವಿಪರೀತ ಕಷ್ಟಪಡುತ್ತಾರೆ.

ಸುಮ್ಮನೆ ಏನೊ ಒಂದು, ಹೇಗೋ ಒಂದು ಮಾಡಿ ಮುಗಿಸಿಬಿಟ್ಟರೆ ಸಾಕಪ್ಪ ಅಂತ ಮಾಡೋದಿಲ್ಲ. ನೋಡಿದರೆ ಕನಿಷ್ಠ ಮನಮುಟ್ಟಿಸುವಂತೆ ಆಗಬೇಕು. ಅಷ್ಟಂತೂ ಖಂಡಿತ ಕೆಲಸ ಮಾಡುತ್ತಾರೆ.

ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ 'ಸಂಜು' ಸಿನಿಮಾ, ಸಂಜಯ್ ದತ್ ಅವರ ಬಯೋಪಿಕ್​ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲಿ ರಣಬೀರ್ ಸಂಜು ಆಗಿದ್ದು ಹೇಗೆ ? ಎಷ್ಟೆಲ್ಲ ಕಷ್ಟ ಹಾಗೂ ಸವಾಲುಗಳನ್ನು ಎದುರಿಸಿದರು ಅಂತ ತಿಳಿಸೋ ವಿಡಿಯೋ ಒಂದನ್ನು ನಿರ್ದೇಶಕ ರಾಜ್​ಕುಮಾರ್​ ಹಿರಾನಿ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ರಣಬೀರ್​ ಸಂಜಯ್​ ಅವರ ಜೀವನದ ನಾಲ್ಕು ಹಂತಗಳಲ್ಲಿ ಯಾವ ರೀತಿ ಇದ್ದರೋ ಹಾಗೇ ಕಾಣಿಸಿಕೊಳ್ಳಲು ಪಟ್ಟ ಕಷ್ಟ, ಅದಕ್ಕಾಗಿ ಜಿಮ್​ನಲ್ಲಿ ಹರಿಸಿದ ಬೆವರು ಹಾಗೂ ಸಿದ್ಧತೆಯ ಹಂತದಲ್ಲಿ ಹಿರಾನಿ ಒಮ್ಮೆ ಅವರನ್ನು ತಿರಸ್ಕರಿಸಿದ್ದು ಎಲ್ಲವನ್ನೂ ತೋರಿಸಲಾಗಿದೆ. ಈ ವಿಡಿಯೋ ನಿಮಗಾಗಿ...

The making of Ranbir to Sanju. https://t.co/2Wnl6ejEqX #RanbirToSanju #RanbirKapoor @FoxStarHindi @VVCFilms #RajkumarHiraniFilms

— Rajkumar Hirani (@RajkumarHirani) July 6, 2018



ನಟ ಸಂಜಯ್​ ದತ್​ ಹೆಸರುವಾಸಿಯಾಗಿದ್ದೆ ಅವರ ಬಾಡಿ ಬಿಲ್ಡಿಂಗ್​ನಿಂದಾಗಿ. ಅವರಂತೆ ಮಸಜ್​ ಬೆಳೆಸಿಕೊಳ್ಳಲು ರಣಬೀರ್​ ಸಾಕಷ್ಟು ಸಮಯ ಜಿಮ್​ನಲ್ಲೇ ಕಳೆಯಬೇಕಾಗಿತ್ತು. ರಣಬೀರ್​ ಈ ಹಿಂದೆ ಮಾಡಿದ್ದ ಯಾವ ಸಿನಿಮಾಗಳಲ್ಲೂ ಅವರಿಗೆ ಬಾಡಿ ಬಿಲ್ಡ್​ ಮಾಡುವ ಅಗತ್ಯ ಬಿದ್ದಿರಲಿಲ್ಲ. ಇನ್ನೂ ವಯಸ್ಸಾದ ಸಂಜಯ್​ ದತ್​ ಅವರ ಮುಖ ಮದ್ಯ ಸೇವನೆಯಿಂದಾಗಿ ಜೋತು ಬಿದ್ದಂತಾಗಿದ್ದು, ಈ ಲುಕ್​ ಪಡೆಯಲು ಹಾಲಿವುಡ್​ನಿಂದ ಮೇಕಪ್​ ಕಲಾವಿದರನ್ನು ಕರೆಸಲಾಗಿತ್ತಂತೆ.
First published:July 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ