Video: ಚಿಕ್ಕಪ್ಪ ಪವನ್​ ಹುಟ್ಟುಹಬ್ಬಕ್ಕೆ ರಾಮ್​ಚರಣ್​ ಕೊಡುತ್ತಿರುವ ಉಡುಗೊರೆ ಏನು ಗೊತ್ತಾ?

news18
Updated:September 1, 2018, 6:21 PM IST
Video: ಚಿಕ್ಕಪ್ಪ ಪವನ್​ ಹುಟ್ಟುಹಬ್ಬಕ್ಕೆ ರಾಮ್​ಚರಣ್​ ಕೊಡುತ್ತಿರುವ ಉಡುಗೊರೆ ಏನು ಗೊತ್ತಾ?
news18
Updated: September 1, 2018, 6:21 PM IST
ನ್ಯೂಸ್​ 18 ಕನ್ನಡ 

ತೆಲುಗಿನ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ನಾಳೆ (ಸೆ.2) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪವನ್​ ಅಭಿಮಾನಿಗಳು ಅದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮನೆಯಲ್ಲೂ ಅವರ ಹುಟ್ಟುಹಬ್ಬದ ಆಚರಣೆಗೆ ತಯಾರಿ ಜೋರಾಗಿದೆ ನಡೆದಿದೆ.

ಇತ್ತೀಚೆಗಷ್ಟೆ ಅಪ್ಪ ಚಿರಂಜೀವಿ ಹುಟ್ಟುಹಬ್ಬಕ್ಕೆ ಮಗ ರಾಮ್​ಚರಣ್​ ಉಡುಗೊರೆಯಾಗಿ 'ಸೈರಾ ನರಸಿಂಹರೆಡ್ಡಿ' ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದ್ದರು. ಅದರಲ್ಲೂ ಅವರ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಈ ಟ್ರೇಲರ್​ ಬಿಡುಗಡೆ ಮಾಡಿದ್ದರು ಸಿನಿಮಾದ ನಿರ್ಮಾಪಕ ರಾಮ್​ಚರಣ್​.

ಈಗ ಚಿಕ್ಕಪ್ಪ ಪವನ್​ ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೇ ರಾಮ್​ಚರಣ್​ ತಮ್ಮ ಫೇಸ್​ಬುಕ್​ ಮೂಲಕ ಒಂದು ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಅದರಲ್ಲಿ ಚಿಕ್ಕಪ್ಪ ಪವನ್​ ಹುಟ್ಟುಹಬ್ಬಕ್ಕೆ ಸರ್ಪ್ರೈಸ್​ ಗಿಫ್ಟ್​ ಕೊಡುವುದಾಗಿ ಹೇಳಿದ್ದಾರೆ.



ಅದು ಸಹ ವಿಡಿಯೋ ರೂಪದಲ್ಲಿ. ಆದರೆ ಅದು ಯಾವ ವಿಡಿಯೋ ಹೇಗಿರುತ್ತೆ ಅಂತ ನೋಡೋಕೆ ನೀವು ಒಂದು ದಿನ ಕಾಯಲೇಬೇಕು.
First published:September 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ