Video: ಜೀವದ ಗೆಳೆಯ ನಿಕ್ ಜೋನಸ್ನ ಸಂಗೀತ ಕಾರ್ಯಕ್ರಮಕ್ಕೆ ಬಣ್ಣ ತುಂಬಿದ ಪ್ರಿಯಾಂಕಾ..!
news18
Updated:August 6, 2018, 3:12 PM IST
news18
Updated: August 6, 2018, 3:12 PM IST
ನ್ಯೂಸ್ 18 ಕನ್ನಡ
ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕನ್ ಗಾಯಕ ನಿಕ್ ಅವರ ನಿಶ್ಚಿತಾರ್ಥದ ವಿಷಯ ಬಹಿರಂಗಗೊಂಡು ಕೆಲವೇ ದಿನಗಳು ಕಳೆದಿವೆ. ಅದರಲ್ಲೂ ಕಳೆದ ಕೆಲ ತಿಂಗಳಿನಿಂದ ನಿಕ್ ಹಾಗೂ ಪ್ರಿಯಾಂಕಾ ಜೊತೆಜೊತೆಯಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿಂಗಪುರದಲ್ಲಿ ಇತ್ತೀಚೆಗೆ ನಡೆದ ಎಂಟಿವಿ ಸ್ಪಾಟ್ಲೈಟ್ ಸಂಗೀತ ಕಾರ್ಯಕ್ರಮದಲ್ಲಿ ನಿಕ್ಗಾಯನ ನಡೆದಿತ್ತು. ಇದರಲ್ಲಿ ವಿಐಪಿಗಳ ಸಾಲಿನಲ್ಲಿ ನಿಂತಿದ್ದ ಪ್ರಿಯಾಂಕಾ, ನಿಕ್ ಅವರನ್ನು ಹುರಿದುಂಬಿಸುತ್ತಿದ್ದರು. ಇದನ್ನ ಗಮನಿಸಿದ ಅಭಿಮಾನಿಯೊಬ್ಬರು ಅದನ್ನು ವಿಡಿಯೋ ಮಾಡಿ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೂ ಮುನ್ನ ಪ್ರಿಯಾಂಕಾ ಹಾಗೂ ನಿಕ್ ಕೈ ಕೈ ಹಿಡಿದು ಸಿಂಗಪುರದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚೆಗಷ್ಟೆ ಪ್ರಿಯಾಂಕಾ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಂದೇ ಲಂಡನ್ನಲ್ಲಿ ನಿಕ್ ಪ್ರಿಯಾಂಕಾರಿಗೆ ಉಂಗುರು ತೊಡಿಸುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ನಿಯತಕಾಲಿಕೆಯೊಂದು ಸುದ್ದಿ ಮಾಡಿತ್ತು.
ಅಲ್ಲದೆ ವಿವಾಹದ ಕಾರಣದಿಂದಲೇ ಪ್ರಿಯಾಂಕಾ, ಅಲ್ಮಾನ್ ಖಾನ್ ಜತೆ ಅಭಿನಯಿಸಬೇಕಿದ್ದ 'ಭಾರತ್' ಸಿನಿಮಾದಿಂದ ಹೊರ ಬಂದರು. ಈ ವಿಷಯವನ್ನು ಆ ಸಿನಿಮಾ ತಂಡವೇ ಖಚಿತಪಡಿಸಿತ್ತು.
ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕನ್ ಗಾಯಕ ನಿಕ್ ಅವರ ನಿಶ್ಚಿತಾರ್ಥದ ವಿಷಯ ಬಹಿರಂಗಗೊಂಡು ಕೆಲವೇ ದಿನಗಳು ಕಳೆದಿವೆ. ಅದರಲ್ಲೂ ಕಳೆದ ಕೆಲ ತಿಂಗಳಿನಿಂದ ನಿಕ್ ಹಾಗೂ ಪ್ರಿಯಾಂಕಾ ಜೊತೆಜೊತೆಯಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿಂಗಪುರದಲ್ಲಿ ಇತ್ತೀಚೆಗೆ ನಡೆದ ಎಂಟಿವಿ ಸ್ಪಾಟ್ಲೈಟ್ ಸಂಗೀತ ಕಾರ್ಯಕ್ರಮದಲ್ಲಿ ನಿಕ್ಗಾಯನ ನಡೆದಿತ್ತು. ಇದರಲ್ಲಿ ವಿಐಪಿಗಳ ಸಾಲಿನಲ್ಲಿ ನಿಂತಿದ್ದ ಪ್ರಿಯಾಂಕಾ, ನಿಕ್ ಅವರನ್ನು ಹುರಿದುಂಬಿಸುತ್ತಿದ್ದರು. ಇದನ್ನ ಗಮನಿಸಿದ ಅಭಿಮಾನಿಯೊಬ್ಬರು ಅದನ್ನು ವಿಡಿಯೋ ಮಾಡಿ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
#hyperplay PRIYANKA CHOPRA WAS HERE HYPING NICK JONAS UP HOW CUTE pic.twitter.com/nck7x6KFMy
— 🤪 (@jjinwoos) August 5, 2018
Loading...