Video: ಮತ್ತೆ ಮದುವೆ ಆಗಲಿದ್ದಾರಾ ಹೃತಿಕ್​ ಮತ್ತು ಸುಸೈನ್​ ಖಾನ್​..!

news18
Updated:July 30, 2018, 5:28 PM IST
Video: ಮತ್ತೆ ಮದುವೆ ಆಗಲಿದ್ದಾರಾ ಹೃತಿಕ್​ ಮತ್ತು ಸುಸೈನ್​ ಖಾನ್​..!
news18
Updated: July 30, 2018, 5:28 PM IST
ನ್ಯೂಸ್​ 18 ಕನ್ನಡ 

ಬಾಲಿವುಡ್​ ತಾರಾ ಜೋಡಿಗಳಲ್ಲಿ ವಿಚ್ಛೇದನ ಸರ್ವೇ ಸಾಮಾನ್ಯ. ವಿಚ್ಛೇದನ ಪಡೆದ ನಂತರವೂ ಮಾಜಿ ಗಂಡ-ಹೆಂಡತಿ ಮಕ್ಕಳೊಂದಿಗೆ ಆಗಾಗ ಒಂದೆಡೆ ಸೇರುವುದು, ಹೊರಗಡೆ ಓಡಾಡುವುದು ಸಾಮಾನ್ಯ. ಅಲ್ಲದೆ ಕೆಲವೊಬ್ಬರಂತೂ ಮತ್ತೆ ಒಂದಾಗುವುದೆಲ್ಲ ನಡೆಯುತ್ತಿರುತ್ತದೆ.

ಇದಕ್ಕೆ ಹೃತಿಕ್​-ಸುಸೈನ್​ ಜೋಡಿ ಸಹ ಹೊರತಾಗಿಲ್ಲ. ಹೌದು ಬಾಲ್ಯದ ಗೆಳೆತನ ಪ್ರೀತಿಗೆ ಬದಲಾಗಿ ಮದುವೆಯಾಗಿದ್ದರು. ಮುದ್ದಾದ ಇಬ್ಬರು ಮಕ್ಕಳಾದ ನಂತರ ಕಾರಣಾಂತರಗಳಿಂದ ಇವರು ವಿಚ್ಛೇದನ ಪಡೆದಿದ್ದರು.

ಆಗ ಈಗ ಈ ಜೋಡಿ ಮತ್ತೆ ಒಂದಾಗುವ ಶುಭ ಸೂಚನೆ ನೀಡುತ್ತಿದ್ದಾರೆ. ಹೌದು ಇತ್ತೀಚೆಗೆ ಮಕ್ಕಳು ಹಾಗೂ ಮಾಜಿ ಹೆಂತಿ ಸುಸೈನ್​ ಖಾನ್​ ಜತೆಗೆ ಹೃತಿಕ್​ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇಬ್ಬರು ಮಕ್ಕಳೊಂದಿಗೆ ಸ್ವಿಟ್ಜರ್​ಲೆಂಡ್​ನಲ್ಲಿ ರಜೆಯ ಮಜವನ್ನು ಅನುಭವಿಸಿದ ಹೃತಿಕ್​, ಮತ್ತೆ ಈಗ ಚಿಕ್ಕ ಮಗ ಹೃದಾನ್​ ಹಾಗೂ ಸುಸೈನ್​ ಜತೆ ಸಿನಿಮಾ ನೋಡುತ್ತಾ ಕಾಲ  ಕಳೆದಿದ್ದಾರೆ.

ಆದರೆ ಮೂಲಗಳ ಪ್ರಕಾರ ಹೃತಿಕ್​ ಹಾಗೂ ಸುಸೈನ್​ ತಮ್ಮ ಮಕ್ಕಳಿಗಾಗಿ ಜತೆಯಲ್ಲಿ ಸಮಯ ಕಳೆಯುತ್ತಿದ್ದು, ಮಕ್ಕಳಿಗೆ ತಂದೆ-ತಾಯಿಯ ಪ್ರೀತಿಯ ಕೊರತೆ ಕಾಣದಂತೆ ನೋಡಿಕೊಳ್ಳುತ್ತಿದ್ದಾರಂತೆ.

Loading...
4 ವರ್ಷಗಳ ಪ್ರೀತಿಯ ನಂತರ 2000ದಲ್ಲಿ ವಿವಾಹವಾಗಿದ್ದರು. ನಂತರ ಕಾರಣಾಂತರಗಳಿಂದಾಗಿ 2014ರಲ್ಲಿ ದೂರಾಗಬೇಕಾಯಿತು.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...