ಕೆನಡಾದ ರಸ್ತೆಯಲ್ಲಿ ಆಗಿದ್ದೇನು: ಕತ್ರಿನಾಗೆ ಕಾಲೆಳೆದವರು ಯಾರು?

news18
Updated:July 12, 2018, 3:03 PM IST
ಕೆನಡಾದ ರಸ್ತೆಯಲ್ಲಿ ಆಗಿದ್ದೇನು: ಕತ್ರಿನಾಗೆ ಕಾಲೆಳೆದವರು ಯಾರು?
news18
Updated: July 12, 2018, 3:03 PM IST
ನ್ಯೂಸ್ 18 ಕನ್ನಡ 

ಸಿನಿಮಾ ತಾರೆಯರಿಗೆ ವೈಯಕ್ತಿಕ ಜೀವನ ಅನ್ನೋದೆ ಇರುವುದಿಲ್ಲ. ಅವರು ಎಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡರು ಜನರು ಅವರನ್ನು ವಿಶೇಷವಾಗಿಯೇ ಕಾಣುತ್ತಾರೆ. ಆದರೆ ಕೆಲವೊಮ್ಮೆ ಅವರೊಂದಿಗೆ ಅಸಭ್ಯವಾಗಿಯೂ ವರ್ತಿಸುತ್ತಾರೆ. ಇದಕ್ಕೆ ಉದಾಹರಣೆ ಇತ್ತೀಚೆಗಷ್ಟೆ ಸುಶ್ಮಿತಾ ಸೇನ್​ ಕಾರ್ಯಕ್ರಮವೊಂದರಲ್ಲಿ ಬಹಳ ಹಿಂದೆ ಅಭಿಮಾನಿಯೊಬ್ಬರಿಂದ ತಮಗಾಗಿದ್ದ ಕಹಿ ಅನುಭವವನ್ನು ಹೇಳಿಕೊಂಡಿದ್ದರು.

ಇತ್ತೀಚೆಗೆ ನಟಿ ಕತ್ರಿನಾ ಕೈಫ್​ ಅವರಿಗೂ ಇಂತಹದ್ದೇ ಒಂದು ಅನುಭವವಾಗಿದೆ. ಅವರು ಕೆನಡಾದ ಹೋಟೆಲ್​ ಒಂದರಿಂದ ಹೊರ ಬಂದು ತಮ್ಮ ಕಾರಿನ ಬಳಿ ಹೋಗುವಾಗ ಕೆಲ ಅಭಿಮಾನಿಗಳು ಅವರನ್ನು ಚೇಡಿಸಿದ್ದಾರೆ. ನಿನ್ನೊಂದಿಗೆ ನಮಗೆ ಫೋಟೋ ತೆಗೆಸಿಕೊಳ್ಳುವ ಅಗತ್ಯ ಇಲ್ಲ. ಬೂ ಬೂ ಎಂದೆಲ್ಲ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕ್ಯಾಟ್​ ಕಳೆದ ರಾತ್ರಿಯ ಕಾರ್ಯಕ್ರಮದಿಂದಾಗಿ ತುಂಬಾ ಸುಸ್ತಾಗಿದೆ. ಹೀಗೆಲ್ಲ ಮಾಡಬೇಡಿ ಎಂದು ಹೇಳಿದರೂ, ಅಲ್ಲಿದ್ದವರು ತಮ್ಮ ಕೆಲಸವನ್ನು ಮುಂದುವರೆಸಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ವಿಡಿಯೋದಲ್ಲಿ ನೋಡಬಹುದು ಅಭಿಮಾನಿಗಳು ಹೇಗೆ ಕತ್ರಿನಾ ಅವರನ್ನು ಚೇಡಿಸುತ್ತಿದ್ದಾರೆ. ಅದರಲ್ಲೂ ಓರ್ವ ಹುಡುಗಿಯ ಧ್ವನಿ ಜೋರಾಗಿ ಕೇಳಿಸುತ್ತದೆ. ಇದರ ನಡುವೆಯೇ ಕೆಲ ಅಭಿಮಾನಿಗಳು ಕ್ಯಾಟ್​ ಜೊತೆಗೆ ಫೋಟೋಗಳನ್ನು ತೆಗೆಸಿಕೊಳ್ಳುವುದನ್ನು ನೋಡಬಹುದು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ