Video: ಲೀಕ್​ ಆಯಿತು ಜೋಗಿ ಪ್ರೇಮ್​ ಕಿಸ್ಸಿಂಗ್​ ವಿಡಿಯೋ!

news18
Updated:July 9, 2018, 7:07 PM IST
Video: ಲೀಕ್​ ಆಯಿತು ಜೋಗಿ ಪ್ರೇಮ್​ ಕಿಸ್ಸಿಂಗ್​ ವಿಡಿಯೋ!
news18
Updated: July 9, 2018, 7:07 PM IST
ನ್ಯೂಸ್​ 18 ಕನ್ನಡ 

ಜೋಗಿ ಪ್ರೇಮ್​ ಏನೇ ಮಾಡಿದರೂ ಹೊಸದಾಗಿರುತ್ತೆ. ಆದರೆ ಪ್ರೇಮ್​ ಈಗ ಹೊಸದಾಗಿ ಅದೇನೊ ಕಲಿತುಬಿಟ್ಟಿದ್ದಾರೆ. ಏನೇ ಮಾತಾಡಬೇಕು ಅಂದರೂ 'ಸೋ ಸೋ...', 'ಎಂಟೈರ್ ಕರ್ನಾಕಟ ಹೌಸ್‍ಫುಲ್' ಅಂತಿದ್ದ ಪ್ರೇಮ್​, ಈಗ ಹೊಸದೊಂದನ್ನು ಕಲಿತು ಸಿಕ್ಕಾಪಟ್ಟೆ  ಟೆನ್ಶನ್ ಕೊಡುತ್ತಿದ್ದಾರೆ. 'ದಿ ವಿಲನ್' ಇನ್ನೇನು ತೆರೆಗಪ್ಪಳಿಸೋಕೆ ರೆಡಿಯಿರೊ ಈ ಸಮಯದಲ್ಲಿ ಪ್ರೇಮ್​ ಅವರ ಈ ಹೊಸ ಅಭ್ಯಾಸ ಎಲ್ಲರಿಗೂ ಶಾಕ್ ನೀಡಿದೆ.

ಪ್ರೇಮ್​ ಸಿನಿರಂಗಕ್ಕೆ ಬಂದಾಗಿನಿಂದಲೂ ಮಾತು ಕಾಮಿಡಿ, ಕೆಲಸ ಗಂಭೀರವಾಗಿ ಮಾಡೋ ವ್ಯಕ್ತಿ. ಪ್ರೇಮ್​ ಮಾತನಾಡೋದನ್ನ ನೀವೇನಾದರೂ ಈ ಹಿಂದೆ ಕೇಳಿದ್ದರೆ ನೀವು ಗಮನಿಸಿರುತ್ತೀರಾ, ಮಾತು ಮಾತಿಗೂ ಸೋ ಸೋ ಅನ್ನೋದನ್ನ ಬಹಳ ಬಳಸುತ್ತಿದ್ದರು. ಇದು ಅವರ ಸ್ಟೈಲ್​. ಇದನ್ನ ಪದೇ ಪದೇ ನೋಡಿ ಯೂಟ್ಯೂಬಿನಲ್ಲಿ ಸುಮಾರು ಜನರ ಖಾತೆಯಲ್ಲಿ ವೀಕ್ಷಣೆ ಜಾಸ್ತಿಯಾಗಿರೊ ದಾಖಲೆ ಇದೆ.


ಆದರೆ ಈಗ ಪ್ರೇಮ್​ ಇತ್ತೀಚೆಗೆ ಅದ್ಯಾಕೊ ಬಾಲಿವುಡ್​, ಹಾಲಿವುಡ್​ನವರಂತೆ ಕಿಸ್ ಕೊಡೋಕೆ ಶುರುಮಾಡಿದ್ದಾರೆ. ಸರಿ ಮೊನ್ನೆ ಏನೊ ಮಿಸ್ ಆಗಿರಬೇಕು, ಅದಕ್ಕೆ ಹೀಗೆ ಮೂರ್ನಾಲ್ಕು ಬಾರಿ ಕಿಸ್ ಕೊಟ್ಟಿರಬೇಕು ಅಂದುಕೊಂಡರೆ, ಅಷ್ಟರಲ್ಲೇ ಇನ್ನೊಂದು ವಿಡಿಯೊ ಬಂತು.ಹಾಲಿವುಡ್ ಸಿನಿಮಾಗಳನ್ನ ರಾತ್ರಿಹೊತ್ತು ಜಾಸ್ತಿಹೊತ್ತು ನೋಡಿಯೋ ಅಥವಾ  ಬಾಲಿವುಡ್ ಮ್ಯಾನರಿಸಮ್ಸ್ ಇರೊ ವಿಡಿಯೋಗಳನ್ನು ಜಾಸ್ತಿ ನೋಡಿಯೋ ಪ್ರೇಮ್​ ಹೀಗಾಗಿ ಬಿಟ್ಟಿದ್ದಾರೆ. ಸೋ ಏನಾದರೂ ಆಗಲಿ ಪ್ರೇಮ್​ ಅವರ 'ದಿ ವಿಲನ್​'ಗಾಗಿ ಎಲ್ಲರೂ ಕಾಯುತ್ತಾ ಇದ್ದಾರೆ.
Loading...

 
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...