Video: ಬಿಗ್‌ಬಾಸ್‌ ಬೇಬಿ ನಿವೇದಿತಾ ಗೌಡಗೆ ಸೋಕಿದ 'ಕಿಕಿ' ಜ್ವರ!

news18
Updated:July 31, 2018, 6:00 PM IST
Video: ಬಿಗ್‌ಬಾಸ್‌ ಬೇಬಿ ನಿವೇದಿತಾ ಗೌಡಗೆ ಸೋಕಿದ 'ಕಿಕಿ' ಜ್ವರ!
news18
Updated: July 31, 2018, 6:00 PM IST
ನ್ಯೂಸ್​ 18 ಕನ್ನಡ 

ಬಿ-ಟೌನ್​, ಸ್ಯಾಂಡಲ್​ವುಡ್​ ಸೇರಿದಂತೆ ದೇಶದೆಲ್ಲೆಡೆ 'ಕಿಕಿ' ಜ್ವರದ್ದೇ ಸದ್ದು. ಈ ಜ್ವರದಿಂದಾಗಿ ಸಾಕಷ್ಟು ಮಂದಿ ಪೆಟ್ಟು ಮಾಡಿಕೊಂಡಿದ್ದು, ಜ್ವರದಿಂದ ದೂರವಿರಲು ಸಾಕಷ್ಟು ಕಡೆ ಎಚ್ಚರಿಕೆ ನೀಡಲಾಗುತ್ತಿದೆ. ಆದರೂ ಈ ಜ್ವರಕ್ಕೆ ಹೆಚ್ಚಾಗಿ ಬಲಿಯಾಗುತ್ತಿರೋದು ಮಾತ್ರ ಸೆಲೆಬ್ರಿಟಿಗಳೇ? ಈಗ ಬಿಗ್​ಬಾಸ್​ ಬೇಬಿ ನಿವೇದಿತಾ ಗೌಡ ಅವರಿಗೂ ಈ ಜ್ವರ ಬಂದಿದೆ. ಇದು ಯಾವ ಹೊಸ ಜ್ವರ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ವಿದೇಶದಲ್ಲಿ ಆರಂಭವಾದ 'ಕಿಕಿ' ಚಾಲೆಂಜ್​ ಎಂಬ ಜ್ವರಕ್ಕೆ ಬಾಲಿವುಡ್​ ಮಂದಿಯಷ್ಟೇ ಅಲ್ಲ ಈಗ ಕನ್ನಡದ  ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸಹ 'ಕಿಕಿ'  ಸವಾಲನ್ನು ಸ್ವಿಕರಿಸಿ ಆ ಹಾಡಿಗೆ ಹೆಜ್ಜೆ ಹಾಕಿ, ವಿವಾದಕ್ಕೆ ಸಿಲುಕಿದ್ದಾರೆ.

ಚಲಿಸುವ ಕಾರಿನಿಂದ ಇಳಿದು ಹೆಜ್ಜೆ ಹಾಕುವ ಅಪಾಯಕಾರಿ 'ಕಿಕಿ' ಸವಾಲಿಗೆ ಎಲ್ಲೆಡೆ ಈಗ ನಿಷೇಧ ಹೇರಲಾಗುತ್ತಿದೆ. ಅಂತಹ ಸವಾಲನ್ನು ನಿವೇದಿತಾ ಗೌಡ ಸ್ವೀಕರಿಸಿದ್ದು, ಅದರ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಅಪಾಯಕಾರಿ ಎಂದು ತಿಳಿದಿದ್ದರೂ ಈ ಸವಾಲನ್ನು ಸ್ವೀಕರಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
Loading...

Video credit goes to my fav ppl on earth ❤❤ #kikichallenge 💓 @vardhan_2298 @ravi45sin @rithish_mahadevu #Praneeth #oshin


A post shared by Niveditha Gowda 👑 (@niveditha__gowda) on
First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ