Vicky Kaushal: ವಿಕ್ಕಿ ಕೌಶಲ್ ಅಭಿನಯದ The Immortal Ashwatthama ಚಿತ್ರದ ಚಿತ್ರೀಕರಣ ಸ್ಥಗಿತ?

The Immortal Ashwatthama : ಸ್ಕ್ರಿಪ್ಟ್‌ನ ಕೊನೆಯ ಡ್ರಾಫ್ಟ್ ಮತ್ತು ನಿರ್ಧಾರ ಮಾಡಲಾಗಿರುವ  ಬಜೆಟ್ ಹೊಂದಾಣಿಕೆಯಾಗಲಿಲ್ಲ ಎಂದು  ನಿರ್ಮಾಪಕ ಹೇಳಿದ್ದಾರೆ. ಕೊರೊನಾ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಕ್ಕಿ ಕೌಶಲ್ ( Vicky Kaushal)ಅಭಿಮಾನಿಗಳಿಗೆ ನಿರಾಶಾದಾಯಕ ಸುದ್ದಿಯೊಂದು ಬಂದಿದ್ದು,  ವಿಕ್ಕಿ ನಟಿಸುತ್ತಿದ್ದ ವೈಜ್ಞಾನಿಕ ಕಥಾ ಹಂದರವನ್ನು ಹೊಂದಿದ್ದ     ಇಮ್ಮೊರ್ಟಲ್    ಅಶ್ವತ್ಥಾಮ(The Immortal Ashwatthama.) ಚಿತ್ರದ ಚಿತ್ರೀಕರಣವನ್ನು ಸ್ಥಗಿತ ಮಾಡಲಾಗಿದೆ. . ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಕೂಡ ನಟಿಸುತ್ತಿದ್ದು,  ಮತ್ತೊಮ್ಮೆ  ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿರುವ  ನಿರ್ಮಾಪಕ ರೋನಿ ಸ್ಕ್ರೂವಾಲಾ, ಚಿತ್ರದ ಚಿತ್ರೀಕರಣವನ್ನು ಇನ್ನೂ ಆರರಿಂದ ಒಂಬತ್ತು ತಿಂಗಳುಗಳವರೆಗೆ ಮುಂದೂಡಲಾಗಿದೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ  ಚಿತ್ರದ ನಿರ್ಮಾಣದ ವೆಚ್ಚವು ಅದರ ನಿಗದಿಪಡಿಸಿದ ಬಜೆಟ್ ಅನ್ನು ಮೀರಿರುವ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸ್ಕ್ರಿಪ್ಟ್‌ನ ಕೊನೆಯ ಡ್ರಾಫ್ಟ್ ಮತ್ತು ನಿರ್ಧಾರ ಮಾಡಲಾಗಿರುವ  ಬಜೆಟ್ ಹೊಂದಾಣಿಕೆಯಾಗಲಿಲ್ಲ ಎಂದು  ನಿರ್ಮಾಪಕ ಹೇಳಿದ್ದಾರೆ. ಕೊರೊನಾ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾನು, ಆದಿತ್ಯ ಧರ್, ವಿಕ್ಕಿ ಕೌಶಲ್ ಈ ಚಿತ್ರದ ಚಿತ್ರೀಕರಣವನ್ನು ಸುಮಾರು 6 ರಿಂದ 9 ತಿಂಗಳವರೆಗೆ ಮುಂದಕ್ಕೆ ಹಾಕಿದ್ದೇವೆ ಎಂದು ನಿರ್ಮಾಪಕ ರೋನಿ ಸ್ಕ್ರೂವಾಲಾ ಹೇಳಿಕೆಯಲ್ಲಿತಿಳಿಸಿದ್ದಾರೆ. ತಂಡವು ಬಜೆಟ್​ ವಿಚಾರದಲ್ಲಿ ಹೆಚ್ಚು ಕೆಲಸ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಪರಿಸ್ಥಿತಿ ಸುಧಾರಿಸಿದಾಗ ಚಿತ್ರೀಕರಣವನ್ನ ಆರಂಭಿಸುತ್ತೇವೆ ಎಂದಿದ್ದಾರೆ.

ಕೆಲ ಮಾಧ್ಯಮಗಳ ವರದಿಯು ಒಂದು ಮೂಲದ ಪ್ರಕಾರ, ಉರಿ ಚಿತ್ರ  100 ಕೋಟಿ ಬಜೆಟ್ ಚಿತ್ರದಂತೆ ಕಂಡರೂ ಸಹ ನಿರ್ದೇಶಕ ಆದಿತ್ಯ ಧರ್ ಕೇವಲ 25 ಕೋಟಿ ರೂಪಾಯಿಗಳಿಗೆ ಆಕ್ಷನ್ ಚಿತ್ರ ಮಾಡಿದ್ದಾರೆ. ಇದಕ್ಕೆ ಕಾರಣ ಆದಿತ್ಯ ಚಿತ್ರ ನಿರ್ಮಾಣದ ಶಾಲೆಯಿಂದ ಬಂದವರು. ಹೇಗೆ ಕಡಿಮೆ ಬಜೆಟ್​ನಲ್ಲಿ ಚಿತ್ರ ನಿರ್ಮಿಸಬಹುದು ಎಂಬುದನ್ನ ತಿಳಿದಿದ್ದಾರೆ.

ಇದನ್ನೂ ಓದಿ: Salman Khan-Akshay Kumar ಸೇರಿದಂತೆ 30 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು..!

ಇನ್ನು ಉರಿ ಚಿತ್ರಕ್ಕಾಗಿ ಅತ್ಯಂತ ಕಡಿಮೆ ಬಜೆಟ್  ಸಮಯದಲ್ಲಿ ಕೆಲಸ ಮಾಡುವುದು ತಂಡಕ್ಕೆ ಹೇಗೆ ಸಹಾಯ ಮಾಡಿದೆ ಎಂದು ಧರ್ ಹೇಳಿದ್ದರು. ಅಲ್ಲದೇ ಯಾವಾಗಲೂ ಧರ್ ಚಿತ್ರ ಬಜೆಟ್ ಕಡಿಮೆ ಇರಬೇಕು ಎಂದು ಇಚ್ಛೆ ವ್ಯಕ್ತಪಡಿಸುತ್ತಾರೆ. ಹೆಚ್ಚು ಬಜೆಟ್​ ಚಿತ್ರ ಸೋಮಾರಿಯನ್ನಾಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಾವಾಗಲೂ ಚಿತ್ರದ ಬಜೆಟ್ ಎಷ್ಟಿದೆ ಎಂಬುದು ಮುಖ್ಯವಲ್ಲ. ಚಿತ್ರ ನೋಡಲು ಹೇಗಿದೆ, ಅದಕ್ಕೆ ಪ್ರೇಕ್ಷಕರ ಅಭಿಪ್ರಾಯ ಹೇಗಿತ್ತು ಎಂಬುದು ಮುಖ್ಯ ಎಂದು ಧರ್ ಹೇಳುತ್ತಾರೆ. ಬಜೆಟ್ ವಿಚಾರ ನಿಜಕ್ಕೂ ಗಂಭೀರವಾದ್ದು, ಆದರೆ ಎಲ್ಲವನ್ನು ಮೀರಿ ಚಿತ್ರ ಮಾಡುವುದೇ ನಿರ್ದೇಶಕನ ಕೆಲಸ ಎಂದಿದ್ದಾರೆ.

ಅಶ್ವಥಾಮ ಚಿತ್ರ ಬಗ್ಗೆ ಮಾತನಾಡುವುದಾದರೆ ಈ ಚಿತ್ರ ಉರಿ  ಪ್ರಪಂಚಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಪ್ರಪಂಚ ಎಂದು ನಿರ್ಮಾಪಕರು  ಹೇಳಿದ್ದಾರೆ. ಆದರೆ ನೈಜ ಜಾಗದಲ್ಲಿ, ಮತ್ತು ನಿಜ ಜೀವನದ ಘಟನೆಯನ್ನು ಆಧರಿಸಿದೆ. ಉರಿ  ಯಶಸ್ಸಿನ ನಂತರ, ಅವರು ಮತ್ತೊಮ್ಮೆ ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಪ್ರೊಡಕ್ಷನ್ ಹೌಸ್ ಮತ್ತು ವಿಕ್ಕಿ ಯೊಂದಿಗೆ ವೈಜ್ಞಾನಿಕ  ಕಥೆಯ ಆಧರಿತ 'ದಿ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರತಂಡದೊಂದಿಗೆ ಆದಿತ್ಯ ಧರ್ ಕೈಜೋಡಿಸಿದ್ದಾರೆ.

ಇದನ್ನೂ ಓದಿ: ತಮಿಳಿನ ಬ್ಲಾಕ್‌ಬಸ್ಟರ್‌ ಸೂರರೈ ಪೊಟ್ರು ಹಿಂದಿ ರಿಮೇಕ್​ನಲ್ಲಿ ಅಕ್ಷಯ್ ಕುಮಾರ್ ?

ಇನ್ನು ವಿಕ್ಕಿ ಕೌಶಲ್ ವಿಚಾರಕ್ಕೆ ಬರುವುದಾರ ಉರಿ ಚಿತ್ರದ ಮೂಲಕ ಪ್ರಸಿದ್ಧಿ ಪಡೆದ ನಂತರ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಹಲವಾರು ಸಿನೆಮಾಗಳು ಇವರ ಕೈನಲ್ಲಿದೆ.
Published by:Sandhya M
First published: