Vicky  Kaushal: ಅಕ್ಟೋಬರ್​ನಲ್ಲಿ ಸರ್ಧಾರ್ ಉಧಮ್ ಸಿಂಗ್ OTTಯಲ್ಲಿ ಬಿಡುಗಡೆಗೆ ಸಿದ್ಧ..

Sardar Udham: ಇತ್ತೀಷೆಗಷ್ಟೇ  ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ನಿರಾಶದಾಯಕ ಸುದ್ದಿಯೊಂದು ಸಿಕ್ಕಿತ್ತು. ಅವರು ನಟಿಸುತ್ತಿದ್ದ, ಇಮ್ಮೊರ್ಟಲ್​ ಅಶ್ವತ್ಥಾಮ ಚಿತ್ರ ಚಿತ್ರೀಕರಣವನ್ನು ಸ್ಥಗಿತ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದೀಗ ಅವರ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.  

ವಿಕ್ಕಿ ಕೌಶಲ್

ವಿಕ್ಕಿ ಕೌಶಲ್

  • Share this:
ವಿಕ್ಕಿ ಕೌಶಲ್ (Vicky  Kaushal)ಅವರ  ಮುಂದಿನ ಚಿತ್ರ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್(Sardar Udham Singh) ಅವರ ಜೀವನ ಆಧಾರಿತ  ಜೀವನಚರಿತ್ರೆ ಸರ್ದಾರ್ ಉಧಮ್​ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಟ ಗುರುವಾರ ಸಂಜೆ ಘೋಷಿಸಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಗಯಲ್ಲಿ  ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅವರು ಈ ಚಲನಚಿತ್ರವು ಈ ವರ್ಷದ ಅಕ್ಟೋಬರ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ ಎಂದು ಬಹಿರಂಗಪಡಿಸಿದ್ದಾರೆ.  

ಕ್ರಾಂತಿಕಾರಿಯ ಕಥೆಯನ್ನು ನಾವು ನಿಮ್ಮ ಮುಂದೆ ತರುತ್ತಿರುವಾಗ ನನ್ನ ಹೃದಯವು ಪ್ರೀತಿಯಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ.

ಇತ್ತೀಷೆಗಷ್ಟೇ  ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ನಿರಾಶದಾಯಕ ಸುದ್ದಿಯೊಂದು ಸಿಕ್ಕಿತ್ತು. ಅವರು ನಟಿಸುತ್ತಿದ್ದ, ಇಮ್ಮೊರ್ಟಲ್​ ಅಶ್ವತ್ಥಾಮ ಚಿತ್ರ ಚಿತ್ರೀಕರಣವನ್ನು ಸ್ಥಗಿತ ಮಾಡಲಾಗಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದೀಗ ಅವರ ಇನ್ನೊಂದು ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇದನ್ನೂ ಓದಿ: ತನ್ನ Longest Relationship ಬಗ್ಗೆ ರಿವೀಲ್ ಮಾಡಿದ ಬಾಲಿವುಡ್​ ನಟ ಸಲ್ಮಾನ್ ಖಾನ್

ಇನ್ನು ಚಿತ್ರೀಕರಣ ಸ್ಥಗಿತವಾಗಿರುವ ಕುರಿತು ಚಿತ್ರತಂಡ ಹೇಳಿಕೆ ಬಿಡುಗಡೆ ಮಾಡಿತ್ತು.  ಸ್ಕ್ರಿಪ್ಟ್‌ನ ಕೊನೆಯ ಡ್ರಾಫ್ಟ್ ಮತ್ತು ನಿರ್ಧಾರ ಮಾಡಲಾಗಿರುವ  ಬಜೆಟ್ ಹೊಂದಾಣಿಕೆಯಾಗಲಿಲ್ಲ ಎಂದು  ನಿರ್ಮಾಪಕ ಹೇಳಿದ್ದರು.  ಕೊರೊನಾ ಕಾರಣದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದ್ದರಿಂದ ನಾನು, ಆದಿತ್ಯ ಧರ್, ವಿಕ್ಕಿ ಕೌಶಲ್ ಈ ಚಿತ್ರದ ಚಿತ್ರೀಕರಣವನ್ನು ಸುಮಾರು 6 ರಿಂದ 9 ತಿಂಗಳವರೆಗೆ ಮುಂದಕ್ಕೆ ಹಾಕಿದ್ದೇವೆ ಎಂದು ನಿರ್ಮಾಪಕ ರೋನಿ ಸ್ಕ್ರೂವಾಲಾ ಹೇಳಿಕೆಯಲ್ಲಿ ತಿಳಿಸಿದ್ದರು.

ತಂಡವು ಬಜೆಟ್​ ವಿಚಾರದಲ್ಲಿ ಹೆಚ್ಚು ಕೆಲಸ ಮಾಡುತ್ತದೆ ಮತ್ತು ಒಟ್ಟಾರೆಯಾಗಿ ಪರಿಸ್ಥಿತಿ ಸುಧಾರಿಸಿದಾಗ ಚಿತ್ರೀಕರಣವನ್ನ ಆರಂಭಿಸುತ್ತೇವೆ ಎಂಬ ಭರವಸೆ ನೀಡಿದ್ದರು.  ಯಾವಾಗಲೂ ಚಿತ್ರದ ಬಜೆಟ್ ಎಷ್ಟಿದೆ ಎಂಬುದು ಮುಖ್ಯವಲ್ಲ. ಚಿತ್ರ ನೋಡಲು ಹೇಗಿದೆ, ಅದಕ್ಕೆ ಪ್ರೇಕ್ಷಕರ ಅಭಿಪ್ರಾಯ ಹೇಗಿತ್ತು ಎಂಬುದು ಮುಖ್ಯ ಎಂದು ಧರ್ ಹೇಳಿದ್ದು, . ಬಜೆಟ್ ವಿಚಾರ ನಿಜಕ್ಕೂ ಗಂಭೀರವಾದ್ದು, ಆದರೆ ಎಲ್ಲವನ್ನು ಮೀರಿ ಚಿತ್ರ ಮಾಡುವುದೇ ನಿರ್ದೇಶಕನ ಕೆಲಸ ಎಂದಿದ್ದರು. .

ಅಶ್ವಥಾಮ ಚಿತ್ರ ಬಗ್ಗೆ ಮಾತನಾಡುವುದಾದರೆ ಈ ಚಿತ್ರ ಉರಿ  ಪ್ರಪಂಚಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾದ ಪ್ರಪಂಚ ಎಂದು ನಿರ್ಮಾಪಕರು  ತಿಳಿಸಿದ್ದರು.  ಆದರೆ ನೈಜ ಜಾಗದಲ್ಲಿ, ಮತ್ತು ನಿಜ ಜೀವನದ ಘಟನೆಯನ್ನು ಆಧರಿಸಿದೆ.

ಉರಿ  ಯಶಸ್ಸಿನ ನಂತರ, ಅವರು ಮತ್ತೊಮ್ಮೆ ರೋನಿ ಸ್ಕ್ರೂವಾಲಾ ಅವರ ಆರ್‌ಎಸ್‌ವಿಪಿ ಪ್ರೊಡಕ್ಷನ್ ಹೌಸ್ ಮತ್ತು ವಿಕ್ಕಿ ಯೊಂದಿಗೆ ವೈಜ್ಞಾನಿಕ  ಕಥೆಯ ಆಧರಿತ 'ದಿ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರತಂಡದೊಂದಿಗೆ ಆದಿತ್ಯ ಧರ್ ಕೈಜೋಡಿಸಿದ್ದಾರೆ.

ಇದನ್ನೂ ಓದಿ: India Detectives ಸರಣಿ ಬಗ್ಗೆ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಹೇಳಿದ್ದು ಹೀಗೆ..!

ಇನ್ನು ವಿಕ್ಕಿ ಕೌಶಲ್ ವಿಚಾರಕ್ಕೆ ಬರುವುದಾದರೆ ಉರಿ ಚಿತ್ರದ ಮೂಲಕ ಪ್ರಸಿದ್ಧಿ ಪಡೆದ ನಂತರ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಹಲವಾರು ಸಿನೆಮಾಗಳು ಇವರ ಕೈನಲ್ಲಿದೆ.
Published by:Sandhya M
First published: