Vicky-Katrina: ಮದುವೆಯ ನಂತರ Lohri ಹಬ್ಬವನ್ನು ಒಟ್ಟಿಗೆ ಆಚರಿಸಿದ ವಿಕ್ಕಿ ಕೌಶಲ್‌–ಕತ್ರೀನಾ ಕೈಫ್‌

‘ಟೈಗರ್ ಜಿಂದಾ ಹೇ’ ನಟಿ ಕತ್ರೀನಾ ಕೈಫ್, ಪತಿ ವಿಕ್ಕಿ ಕೌಶಲ್ ಜೊತೆಗಿನ ಲೋಹ್ರಿ ಹಬ್ಬದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ವಿಕ್ಕಿ ಕೌಶಲ್‌, ಕತ್ರೀನಾ ಕೈಫ್‌

ವಿಕ್ಕಿ ಕೌಶಲ್‌, ಕತ್ರೀನಾ ಕೈಫ್‌

  • Share this:
ಕಳೆದೆರಡು ವರ್ಷಗಳಂತೆ ಈ ಬಾರಿಯೂ ಕೂಡ ಕೋವಿಡ್ -19 ಸಾಂಕ್ರಾಮಿಕ (Covid-19 pandemic), ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಆಚರಿಸಲ್ಪಡುವ ಹಬ್ಬಗಳ ಮೇಲೆ ಪರಿಣಾಮ ಬೀರಿದೆ. ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಹೊಸ ಉಡುಗೆ ತೊಡುಗೆ, ತರಾವರಿ ತಿನಿಸುಗಳು, ವಿಶೇಷ ಆಚರಣೆಗಳು ಇತ್ಯಾದಿಗಳ ಮೂಲಕ ಸಂತಸ ಪಡುತ್ತಿದ್ದ ಜನರ ಉತ್ಸಾಹಕ್ಕೆ ಕೋವಿಡ್ ಮಹಾಮಾರಿ ತಣ್ಣಿರೇರೆಚಿದೆ. ಈ ವಿಷಯದಲ್ಲಿ ಬೇರೆಯವರ ಕಥೆ ಏನೇ ಇದ್ದರೂ, ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ನಟಿ ಕತ್ರೀನಾ ಕೈಫ್ (Katrina Kaif) ಅವರ ಹಬ್ಬದ ಉತ್ಸಾಹಕ್ಕೆ ಒಂದಿನಿತೂ ಭಂಗ ಬಂದಿಲ್ಲವಂತೆ. ಯಾಕಂತೀರಾ? ಇತ್ತೀಚೆಗಷ್ಟೆ ಮದುವೆಯಾದ ಈ ಜೋಡಿ ಹಕ್ಕಿಗಳು ತಮ್ಮ ಹೊಸ ಜೀವನದ ಖುಷಿಯಲ್ಲಿ ತೇಲಾಡುತ್ತಿರುವಾಗ, ಹಬ್ಬದ ಉತ್ಸಾಹ (Excitement) ಕಡಿಮೆಯಾಗುವುದಿಲ್ಲ, ಬದಲಿಗೆ ಇಮ್ಮಡಿಯಾಗುವುದು ಸಹಜ ಅಲ್ಲವೇ? ಪ್ರತಿ ನವವಿವಾಹಿತರಿಗೂ ಅವರ ಮೊದಲ ಹಬ್ಬ ಬಹಳ ವಿಶೇಷ. ಅದೇ ರೀತಿ, ವಿಕ್ಕಿ ಕೌಶಲ್ ಕೂಡ ತಮ್ಮ ಪತ್ನಿ ಕತ್ರೀನಾ ಕೈಫ್ ಜೊತೆ ಮೊದಲ ಲೋಹ್ರಿಯನ್ನು ಸಂಭ್ರಮದಿಂದ (Celebrated) ಆಚರಿಸಿದ್ದಾರೆ.

ಲೋಹ್ರಿ ಹಬ್ಬದ ಕ್ಷಣ
ಟೈಗರ್ ಜಿಂದಾ ಹೇ’ ನಟಿ ಕತ್ರೀನಾ ಕೈಫ್, ಪತಿ ವಿಕ್ಕಿ ಕೌಶಲ್ ಜೊತೆಗಿನ ಲೋಹ್ರಿ ಹಬ್ಬದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಲೋಹ್ರಿ ಹಬ್ಬ ಚಳಿಗಾಲದ ಆಯನ ಸಂಕ್ರಾಂತಿ ಮತ್ತು ದೀರ್ಘ ದಿನಗಳ ಆಗಮನದ ಆಚರಣೆ. ಕತ್ರೀನಾ ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ಗಮನಿಸಿದರೆ, ಅವರು ಲೋಹ್ರಿ ಹಬ್ಬ ಆಚರಿಸಿಕೊಂಡ ಸ್ಥಳ ಯಾವುದೆಂದು ಸ್ಪಷ್ಟವಾಗುವುದಿಲ್ಲ, ಬಹುಶ: ಸೀ ಫೇಸಿಂಗ್‌ ಅಪಾರ್ಟ್‍ಮೆಂಟ್‍ನಲ್ಲಿ ಆಚರಿಸಿಕೊಂಡಿರಬಹುದು ಎಂದು ಊಹಿಸಬಹುದಷ್ಟೆ.

ಇದನ್ನೂ ಓದಿ: Katrina Kaif: ಮುಂದಿನ ಚಿತ್ರದ ಟೈಟಲ್ ಕಾರ್ಡ್​ನಲ್ಲಿ ಕತ್ರಿನಾ ಹೆಸರು ಚೇಂಜ್ ಮಾಡ್ತಾರಾ? ಹೀಗೊಂದು ಗುಸುಗುಸು ಶುರುವಾಗಿದೆ

ಪ್ರೇಮ ಲೋಕದಲ್ಲಿ ವಿಹರಿಸಿದ ಜೋಡಿ
ಆದರೆ, ಅವರಿಬ್ಬರ ಹಬ್ಬದ ಸಂಭ್ರಮ ಮಾತ್ರ ಖಂಡಿತಾ ಕಣ್ತುಂಬಿಸಿಕೊಳ್ಳುವಂತಿದೆ. ಸಾಂಪ್ರದಾಯಿಕ ಸಲ್ವಾರ್ ಕಮೀಜ್ ಮೇಲೆ ಜಾಕೆಟ್ ತೊಟ್ಟು ಮಿಂಚಿದರೆ, ವಿಕ್ಕಿ ಕೌಶಲ್ ಸ್ವೆಟ್‌ ಶರ್ಟ್ ಮತ್ತು ಟ್ರಾಕ್ ಪ್ಯಾಂಟ್ ತೊಟ್ಟಿರುವುದನ್ನು ಕಾಣಬಹುದು. ತನ್ನ ಕೈಯಿಂದ ಪತ್ನಿಯ ಭುಜವನ್ನು ಬಳಸಿ ವಿಕ್ಕಿ ನಿಂತಿರುವ ಒಂದು ಫೋಟೋವನ್ನು ಕಂಡರಂತೂ ಅಭಿಮಾನಿಗಳು ಮನಸೋಲುವುದು ಖಾತರಿ. ಮತ್ತೊಂದು ಫೋಟೋದಲ್ಲಿ ಅವರಿಬ್ಬರು ಒಬ್ಬರನ್ನೊಬ್ಬರು ಪ್ರಶಂಸೆಯ ದೃಷ್ಟಿಯಿಂದ ನೋಡುತ್ತಿರುವುದನ್ನು ಕಾಣಬಹುದು. ಪ್ರತಿಯೊಂದು ಫೋಟೋಗಳನ್ನು ಗಮನಿಸಿದಾಗಲೂ ಕ್ಯಾಟ್ – ವಿಕ್ಕಿ ದಂಪತಿ ಎಷ್ಟು ಖುಷಿಯಾಗಿದ್ದಾರೆ ಮತ್ತು ಪ್ರೇಮ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂಬುವುದು ಅರ್ಥವಾಗುತ್ತದೆ.


ಹೃದಯಸ್ಪರ್ಶಿ ಸಂದೇಶ
ಇತ್ತೀಚೆಗೆ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಒಂದನೇ ತಿಂಗಳ ವಿವಾಹೋತ್ಸವನ್ನು ಆಚರಿಸಿಕೊಂಡರು. ಕ್ಯಾಟ್ ತಮ್ಮ ಪತಿ ವಿಕ್ಕಿಗಾಗಿ ಹೃದಯಸ್ಪರ್ಶಿ ಸಂದೇಶವನ್ನು ಹೊಂದಿದ್ದ ಪೋಸ್ಟ್ ಒಂದನ್ನು ಸಾಮಾಜಿಕ ಜಾಣತಾಣದಲ್ಲಿ ಹಂಚಿಕೊಂಡಿದ್ದರು. ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಅವರು 2021ನೇ ಡಿಸೆಂಬರ್ 9ಕ್ಕೆ, ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಬರ್ವಾರ ಕೋಟೆಯ ಸಿಕ್ಸ್ ಸೆನ್ಸ್ ರೆಸಾರ್ಟ್‍ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿಜೃಂಭಣೆಯಿಂದ ಮದುವೆಯಾಗಿದ್ದರೂ ಈ ತಾರಾ ಜೋಡಿ ಬಾಲಿವುಡ್‍ನ ಪ್ರತಿಯೊಬ್ಬರಿಗೂ ಆಹ್ವಾನ ನೀಡಿರಲಿಲ್ಲ. ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮದುವೆಯಲ್ಲಿ ಅವರಿಬ್ಬರ ಕುಟುಂಬದವರು ಮತ್ತು ಹತ್ತಿರದ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು.

 ಇದನ್ನೂ ಓದಿ: Katrina Kaif ಧರಿಸಿರುವ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ? ವಜ್ರಖಚಿತ ಮಂಗಳಸೂತ್ರದ ವಿಶೇಷತೆ ಏನು ಇಲ್ಲಿದೆ ನೋಡಿ..

ಇನ್ನು ಈ ಜೋಡಿಯ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕತ್ರೀನಾ ಕೈಫ್, ಸಲ್ಮಾನ್ ಖಾನ್ ನಾಯಕರಾಗಿರುವ ಟೈಗರ್ 3 ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಕತ್ರೀನಾರ ಮೆರಿ ಕ್ರಿಸ್‍ಮಸ್ ಸಿನಿಮಾ ಕೂಡ ಸರದಿಯಲ್ಲಿದೆ. ಇನ್ನು ವಿಕ್ಕಿ ಕೌಶಲ್, ಲಕ್ಷ್ಮಣ್ ಉಟೇಕರ್ ಅವರ ಪ್ರಣಯ ಮತ್ತು ಕಾಮಿಡಿ ಕಥಾ ಹಂದರವುಳ್ಳ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾಗೆ ಸಾರಾ ಅಲಿ ಖಾನ್ ನಾಯಕಿ.
Published by:vanithasanjevani vanithasanjevani
First published: