ಬಾಲಿವುಡ್ನ (Bollywood) ಬಹು ಬೇಡಿಕೆಯ ನಟರ ಸಾಲಿನಲ್ಲಿ ನಟ ವಿಕ್ಕಿ ಕೌಶಲ್ ಕೂಡ ಒಬ್ಬರು. ತಮ್ಮ ನೈಜ ನಟನೆ, ಪ್ರತಿಭೆ ಮೂಲಕವೇ ಸಿನಿ ಪ್ರಿಯಕರ ಮನಗೆದ್ದಿರುವ ವಿಕ್ಕಿ ಕೌಶಲ್ (Vicky Kaushal)ಯಾವುದೇ ಪಾತ್ರ ನೀಡಿದರೂ ಬಹಳ ಲೀಲಾಜಾಲವಾಗಿ ನಟಿಸುತ್ತಾರೆ. ಉರಿ (Uri) ಚಿತ್ರದ ಮೂಲಕ ಬಾಲಿವುಡ್ನಲ್ಲಿ ಭಾರೀ ಸದ್ದು ಮಾಡಿದ್ದ ವಿಕ್ಕಿ ಕೌಶಲ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಒಂದೊಂದು ಸಿನಿಮಾದಲ್ಲಿಯೂ ವಿಭಿನ್ನವಾಗಿ ನಟಿಸುವ ಈ ನಟಿಗೆ ಸದ್ಯ ಬಾಲಿವುಡ್ನಲ್ಲಿ ಆಫರ್ ಮೇಲೆ ಆಫರ್ಗಳು ಹರಿದು ಬರುತ್ತಿದೆ. ಇನ್ನೂ ಈತನ ಕಾಲ್ ಶೀಟ್ಗಾಗಿ ಅನೇಕ ನಿರ್ಮಾಪಕರು ಕಾಯುತ್ತಿದ್ದಾರೆ. ಈ ನಡುವೆ ಬಾಲಿವುಡ್ ಖ್ಯಾತ ನಿರ್ದೇಶಕ ಆನಂದ್ ಎಲ್ ರಾಯ್ (Aanand L Rai) ಅವರ ಮುಂದಿನ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಟಿಸಬೇಕಾಗಿತ್ತು. ಆದರೆ ಡೇಟ್ ಸಮಸ್ಯೆಯಿಂದ ಈ ಸಿನಿಮಾದಿಂದ ವಿಕ್ಕಿ ಕೌಶಲ್ ಹೊರ ನಡೆದಿದ್ದಾರೆ.
ವಿಕ್ಕಿ ಕೌಶಲ್ಗಾಗಿ ಪ್ಯೂರ್ ಲವ್ಸ್ಟೋರಿ ಹೆಣೆದಿದ್ದ ಆನಂದ್ ಎಲ್ ರೈ
ಹೌದು, ರಾಂಝಾನಾ, ತನು ವೆಡ್ಸ್ ಮನು, ಮತ್ತು ತನು ವೆಡ್ಸ್ ಮನು ರಿಟರ್ನ್ಸ್ ನಂತಹ ಸೂಪರ್ ಹಿಟ್ ಚಲನಚಿತ್ರಗಳನ್ನು ಬಾಲಿವುಡ್ಗೆ ನೀಡಿದ್ದ ಆನಂದ್ ಎಲ್ ರಾಯ್ ಅವರು, ವಿಕ್ಕಿ ಕೌಶಲ್ಗೆಂದೇ ಒಂದು ಪ್ಯೂರ್ ಲವ್ ಸ್ಟೋರಿಯೊಂದನ್ನು ಹೆಣೆದಿದ್ದರು. ಇನ್ನೂ ಈ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟು ವಿಕ್ಕಿ ಕೌಶಲ್ ಅವರೊಂದಿಗೆ ಮಾತುಕತೆ ಕೂಡ ನಡೆಸಿದ್ದರು ಮತ್ತು ವಿಕ್ಕಿ ಕೂಡ ಈ ಸಿನಿಮಾದಲ್ಲಿ ನಟಿಸುವುದಾಗಿ ಗ್ರೀನ್ ಸಿಗ್ನಲ್ ನೀಡಿದ್ದರು.
ಆನಂದ್ ಎಲ್ ರಾಯ್ ಹಾಗೂ ವಿಕ್ಕಿ ಕೌಶಲ್ ಮಧ್ಯೆ ಡೇಟ್ ಕ್ಲಾಶ್
ಎಲ್ಲವೂ ಕೂಡ ಒಕೆ ಆಗಿತ್ತು ಮತ್ತು ಸ್ಕ್ರಿಪ್ಟ್ ಕೆಲಸ ಕೂಡ ಮುಗಿದಿತ್ತು. ಇನ್ನೇನೂ ಚಿತ್ರದ ಶೂಟಿಂಗ್ ಶುರು ಮಾಡಬೇಕೆಂದಾಗ ಆನಂದ್ ಎಲ್ ರಾಯ್ ಅವರ ಡೇಟ್ಸ್ ಹಾಗೂ ವಿಕ್ಕಿ ಕೌಶಲ್ ಡೇಟ್ಸ್ಗೂ ಮ್ಯಾಚ್ ಆಗಿಲ್ಲ. ಸಾಧ್ಯವಾದಷ್ಟು ಬೇಗ ಚಿತ್ರೀಕರಣವನ್ನು ಆರಂಭಿಸಲು ವಿಕ್ಕಿ ಇಚ್ಛಿಸಿದರು. ಆದರೆ ಆನಂದ್ ಎಲ್ ರಾಯ್ ಅವರಿಗೆ ಪ್ರಿ-ಪ್ರೊಡಕ್ಷನ್ಗೆ ಸಮಯ ಬೇಕಾಗಿತ್ತು ಮತ್ತು ಬೇಸಿಗೆ ಸಮಯದಲ್ಲಿ ಶೂಟಿಂಗ್ ಪ್ರಾರಂಭಿಸಲು ಪ್ಲಾನ್ ಮಾಡಲಾಗಿತ್ತು. ಇದರಿಂದ ವಿಕ್ಕಿ ಕೌಶಲ್ ಡೇಟ್ಸ್ಗೆ ಸಮಸ್ಯೆಯಾಗಿದೆ.
ಬೇಸಿಗೆ ವೇಳೆ ವಿಕ್ಕಿ ಕೌಶಲ್ ಬಹು ನಿರೀಕ್ಷಿತ ಅಶ್ವಥಾಮ ಚಿತ್ರದ ಶೂಟಿಂಗ್
ಈ ಬಗ್ಗೆ ಸಾಕಷ್ಟ ಭಾರೀ ಚರ್ಚೆ ನಡೆಸಿ, ಆಲೋಚನೆ ನಡೆಸಿ, ಎಲ್ಲಾ ರೀತಿ ಪ್ರಯತ್ನಿಸಿದರೂ ಡೇಟ್ ಕ್ಲಾಶ್ ಆದ ಹಿನ್ನೆಲೆ ವಿಕ್ಕಿ ಹಾಗೂ ಆನಂದ್ ಎಲ್ ರಾಯ್ ಚಿತ್ರದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಬೇಸಿಗೆ ವೇಳೆ ವಿಕ್ಕಿ ಕೌಶಲ್ ತಮ್ಮ ಬಹು ನಿರೀಕ್ಷಿತ ಅಶ್ವಥಾಮ ಚಿತ್ರದ ಶೂಟಿಂಗ್ ಅನ್ನು ಆದಿತ್ಯ ಧರ್ ಅವರೊಂದಿಗೆ ಪ್ರಾರಂಭಿಸುತ್ತಿದ್ದೇನೆ. ಈ ಮಹಾಕಾವ್ಯದ ಚಿತ್ರದ ಶೂಟಿಂಗ್ಗೆ ಯಾವುದೇ ರೀತಿ ಅಡ್ಡಿಯನ್ನುಂಟು ಮಾಡಲು ಬಯಸುವುದಿಲ್ಲ. ಹಾಗಾಗಿ ಆನಂದ್ ಎಲ್ ರಾಯ್ ನಿರ್ದೇಶಿಸುತ್ತಿರುವ ಈ ಸಿನಿಮಾದಿಂದ ವಿಕ್ಕಿ ಕೌಶಲ್ ಹೊರ ನಡೆದಿದ್ದಾರೆ. ಹೀಗಾಗಿ ಆನಂದ್ ರಾಯ್, ತಮ್ಮ ಸಿನಿಮಾಕ್ಕೆ ಜೂನಿಯರ್ ಆಕ್ಟರ್ ಯಾರಾನ್ನಾದರೂ ಆಯ್ಕೆ ಮಾಡಲು ಹುಡುಕಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಮಸಾನ್ ಸಿನಿಮಾದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಬಾಲಿವುಡ್ಗೆ ಎಂಟ್ರಿ ಕೊಟ್ಟ ವಿಕ್ಕಿ ಕೌಶಲ್ ನಂತರ ಮನ್ಮರ್ಜಿಯಾನ್, ಲಸ್ಟ್ ಸ್ಟೋರೀಸ್, ಮಸಾನ್, ರಾಜಿ, ಸರ್ದಾರ್ ಉದಾಮ್, ದುನ್ಕಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ವಿಕ್ಕಿ ನಟನೆಯ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದ್ದವು. ಸದ್ಯ ಗೋವಿಂದ ನಾಮ್ ಮೇರಾ, ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ ಸೇರಿದಂತೆ ಅನೇಕ ಸಿನಿಮಾಗಳು ವಿಕ್ಕಿ ಕೈಯಲ್ಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ