Vicky Kaushal: ಹಳೆಯ ಫೋಟೋಗಳನ್ನು ಮೆಲುಕು ಹಾಕಿದ ವಿಕ್ಕಿ ಕೌಶಲ್​​; ಹೀಗಿದ್ರಾ ಎಂದ ಅಭಿಮಾನಿಗಳು!

ನನ್ನ ಗುಂಗುರು ಕೂದಲು ಮತ್ತು ನನ್ನ ಮೈ ಬಣ್ಣದಿಂದ ನಾನು ನಟನಾಗಬಹುದೆಂಬ ವಿಶ್ವಾಸ ನನಗೆ ಇರಲಿಲ್ಲ ಎಂದು ನಟ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ನಟ ವಿಕ್ಕಿ ಕೌಶಲ್

ನಟ ವಿಕ್ಕಿ ಕೌಶಲ್

  • Share this:
ಕೆಲವೊಮ್ಮೆ ನಾವು ಸುಮ್ಮನೆ ಮನೆಯಲ್ಲಿರುವ ನಮ್ಮ ಹಳೆಯ ಫೋಟೋಗಳು ಅಥವಾ (Photos or Videos) ನೋಡಿದಾಗ ನಮಗೆ ಎಷ್ಟೋ ಬಾರಿ ಆಶ್ಚರ್ಯವಾಗುತ್ತದೆ.(Surprised) ಏಕೆಂದರೆ ವ್ಯಕ್ತಿಯ ರೂಪದಲ್ಲಿ ಮತ್ತು ದೇಹದ ಆಕಾರದಲ್ಲಿ ವರ್ಷದಿಂದ ವರ್ಷಕ್ಕೆ ಅನೇಕ ರೀತಿಯ ಬದಲಾವಣೆಗಳು ಆಗುತ್ತಿರುತ್ತವೆ. ಪ್ರತಿದಿನ ನಮ್ಮನ್ನು ನೋಡಿದವರಿಗೆ (Recognize) ಆ ಬದಲಾವಣೆ ಕಾಣದೆ ಇರಬಹುದು, ಆದರೆ 10 ವರ್ಷದ ಹಿಂದಿನ ಫೋಟೋ ಅಥವಾ ವಿಡಿಯೋ ನೋಡಿದಾಗ ನಮ್ಮನ್ನೇ ನಾವು ಗುರುತಿಸಲಾರದಷ್ಟು ಬದಲಾವಣೆಗಳಾಗಿರುವುದನ್ನು(Changes) ನಾವು ಗಮನಿಸಬಹುದು.

ಆ್ಯಸ್ಕ್ ಮಿ ಎನಿಥಿಂಗ್' ಸೆಷನ್‌
ಇಲ್ಲಿಯೂ ಸಹ ಒಬ್ಬ ಬಾಲಿವುಡ್ ನಟನನ್ನು ಅವರ ಹಳೆಯ ವಿಡಿಯೋದಲ್ಲಿ ಅಷ್ಟು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ನಟ ವಿಕ್ಕಿ ಕೌಶಲ್ ಇತ್ತೀಚೆಗೆ ತಾವು ನಟನಾ ಶಾಲೆಯಲ್ಲಿದ್ದಾಗ ಉತ್ತಮ ಹಳೆಯ ದಿನಗಳನ್ನು ಮೆಲುಕು ಹಾಕುವಂತಹ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಮರು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ನಟಿ ಶಿರೀನ್ ಮಿರ್ಜಾ ತಮ್ಮ 'ಆ್ಯಸ್ಕ್ ಮಿ ಎನಿಥಿಂಗ್' ಸೆಷನ್‌ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ನಟ ವಿಕ್ಕಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ. 2009ರಲ್ಲಿ ಮಾಡಿದ ವಿಡಿಯೋದಲ್ಲಿ ‘ಯೇ ಹೈ ಮೊಹಬ್ಬತೇ’ ಎಂಬ ನಾಟಕದಲ್ಲಿ ವಿಕ್ಕಿ ನಟಿಸುತ್ತಿರುವುದನ್ನು ನಾವು ನೋಡಬಹುದು. ಆದರೆ ಅವರು ವಿಕ್ಕಿ ಕೌಶಲ್ ಎಂದು ನಿಮಗೆ ಬೇಗನೆ ಗುರುತು ಸಿಗುವುದೇ ಇಲ್ಲ.

ಇದನ್ನೂ ಓದಿ: Katrina Kaif: ಮುಂದಿನ ಚಿತ್ರದ ಟೈಟಲ್ ಕಾರ್ಡ್​ನಲ್ಲಿ ಕತ್ರಿನಾ ಹೆಸರು ಚೇಂಜ್ ಮಾಡ್ತಾರಾ? ಹೀಗೊಂದು ಗುಸುಗುಸು ಶುರುವಾಗಿದೆ

ನಾವು ಮಕ್ಕಳಾಗಿದ್ದಾಗ
ಈ ವಿಡಿಯೋದಲ್ಲಿ, ವಿಕ್ಕಿ ಮತ್ತು ಶಿರೀನ್ ಹಾಸ್ಯ ನಾಟಕದಲ್ಲಿ ಅಭಿನಯಿಸುತ್ತಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ಸಿಮ್ಮಿ ಭಲ್ಲಾ ಪಾತ್ರವನ್ನು ನಿರ್ವಹಿಸಿದ ಶಿರೀನ್ ಅವರು ವಿಡಿಯೋ ಹಂಚಿಕೊಂಡು "ನಾವು ಮಕ್ಕಳಾಗಿದ್ದಾಗ" ಎಂದು ಶೀರ್ಷಿಕೆಯನ್ನು ಸಹ ಬರೆದಿರುವುದನ್ನು ನಾವು ಕಾಣಬಹುದಾಗಿದೆ. ಮುಂದಿನ ವಿಡಿಯೋದಲ್ಲಿ ಅವರು ಪೋಸ್ಟ್ ಮಾಡಿದ್ದಕ್ಕಾಗಿ ವಿಕ್ಕಿ ಅವರಲ್ಲಿ ಕ್ಷಮೆ ಕೇಳಿದರು ಮತ್ತು "ಈಗಾಗಲೇ ಇದನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕೈಗಳನ್ನು ಜೋಡಿಸಿ ಕ್ಷಮೆ ಕೇಳುತ್ತಿದ್ದೇನೆ..ಹ ಹ ಹ" ಎಂದು ಬರೆದಿದ್ದಾರೆ.

ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಮರು ಪೋಸ್ಟ್ ಮಾಡಿದ ನಟ ವಿಕ್ಕಿ ಕೌಶಲ್ ಅದಕ್ಕೆ "ಉತ್ತಮ ಹಳೆಯ ನಟನಾ ಶಾಲಾ ದಿನಗಳು (2009)” ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

ನಟನೆಗೆ ಇಳಿಯುವ ಮುನ್ನ ಕೌಶಲ್ ಮಾಡಿದ್ದೇನು ಗೊತ್ತೇ?
ನಟನೆಯನ್ನು ತನ್ನ ವೃತ್ತಿಯಾಗಿ ತೆಗೆದುಕೊಳ್ಳುವ ಮೊದಲು, ವಿಕ್ಕಿ ಕೌಶಲ್ ಮುಂಬೈನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಆದರೆ 21ನೇ ವಯಸ್ಸಿನಲ್ಲಿಯೇ ಅವರು ತಮ್ಮ ಎಂಜಿನಿಯರಿಂಗ್ ಕೋರ್ಸ್‌ನ ಎರಡನೇ ವರ್ಷದಲ್ಲಿ ಎಂಎನ್ ಸಿ ಕಂಪನಿಗೆ ಭೇಟಿ ನೀಡಿದರು ಮತ್ತು ಈ ಒಂಬತ್ತರಿಂದ ಐದು ಗಂಟೆಯವರೆಗಿನ ಕೆಲಸ ನನಗೆ ಸರಿ ಹೊಂದುವುದಿಲ್ಲ ಎಂದು ಅರಿತುಕೊಂಡರು.

ವಿಡಿಯೋ ನೋಡಿ:
ಗ್ಯಾಂಗ್ಸ್ ಆಫ್ ವಾಸೆಪುರ್
"ನನ್ನ ಗುಂಗುರು ಕೂದಲು ಮತ್ತು ನನ್ನ ಮೈ ಬಣ್ಣದಿಂದ ನಾನು ನಟನಾಗಬಹುದೆಂಬ ವಿಶ್ವಾಸ ನನಗೆ ಇರಲಿಲ್ಲ" ಎಂದು ನಟ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದೇನೇ ಇದ್ದರೂ ಒಂದು ಬಾರಿ ಪ್ರಯತ್ನಿಸೋಣ ಎಂದು ನಾನು ನಿರ್ಧರಿಸಿದೆ ಎಂದು ವಿಕ್ಕಿ ಹೇಳಿದ್ದರು.
ಅನುರಾಗ್ ಕಶ್ಯಪ್ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ‘ಗ್ಯಾಂಗ್ಸ್ ಆಫ್ ವಾಸೆಪುರ್’ ಚಿತ್ರದಲ್ಲಿ ವಿಕ್ಕಿ ಕೌಶಲ್ ಸಹಾಯಕ ನಿರ್ದೇಶಕರಾಗಿ ಬಾಲಿವುಡ್ ಪ್ರವೇಶಿಸಿದರು.

ಇದನ್ನೂ ಓದಿ: Vicky-Katrina: ಮದುವೆಯ ನಂತರ Lohri ಹಬ್ಬವನ್ನು ಒಟ್ಟಿಗೆ ಆಚರಿಸಿದ ವಿಕ್ಕಿ ಕೌಶಲ್‌–ಕತ್ರೀನಾ ಕೈಫ್‌

ಅದೇ ವರ್ಷ ಅವರು ಕಶ್ಯಪ್ ಅವರ ಸಹ ನಿರ್ಮಾಣದಲ್ಲಿ ‘ಲುವ್ ಶುವ್ ತೇ ಚಿಕನ್ ಖುರಾನಾ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 3 ವರ್ಷಗಳ ನಂತರ, ಅವರು ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ನಟಿಸಿರುವ ಕಶ್ಯಪ್ ಅವರ ‘ಬಾಂಬೆ ವೆಲ್ವೆಟ್’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟಿಸಿದರು. ಹೀಗೆ ಅವರ ಸಿನಿಮಾ ಪ್ರಯಾಣ ಮುಂದುವರೆದು ಇವತ್ತಿಗೆ ಒಬ್ಬ ಒಳ್ಳೆಯ ನಟ ಎಂದು ಅನ್ನಿಸಿಕೊಂಡಿದ್ದಾರೆ ಎಂದು ಹೇಳಬಹುದು
Published by:vanithasanjevani vanithasanjevani
First published: