Vicky Kaushal-Katrina Kaif ಮದುವೆಗಾಗಿ ಜೈಪುರದ ಬಾಡಿಗೆ ಕಾರುಗಳು ಫುಲ್ ಬುಕ್ ಅಂತೆ!

ಮದುವೆಯ ಸಿದ್ಧತೆಯ ಭಾಗವಾಗಿ, ದಂಪತಿಗಳು ಮತ್ತು ಅವರ ತಂಡಗಳು ವಿವಿಧ ಅತಿಥಿಗಳಿಗಾಗಿ ಬಾಡಿಗೆ ಕಾರುಗಳ ಸೇವೆಗಳ ಮೂಲಕ ಹಲವಾರು ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಮುಂಗಡವಾಗಿ ಕಾಯ್ದಿರಿಸಿವೆ.

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​

ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​

  • Share this:
ಬಾಲಿವುಡ್ ನಟ ವಿಕ್ಕಿ ಕೌಶಲ್  (Vicky Kaushal) ಮತ್ತು ಕತ್ರಿನಾ ಕೈಫ್ (Katrina Kaif) ಅವರ ಮದುವೆಯ (Celebrity Wedding) ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕೊನೆಗೂ ಸ್ಟಾರ್ ಗಳ ಮದುವೆಯ ಡಿಸೆಂಬರ್ 2021 ರಲ್ಲಿ ನಡೆಯುತ್ತದೆ ಎಂದು ಗೊತ್ತಾಗಿದೆ. ಆದರೆ ದಿನಾಂಕ ಯಾವುದು ಎನ್ನುವುದು ಸ್ಪಷ್ಟವಾಗಿ ಇನ್ನೂ ಬಹಿರಂಗಗೊಂಡಿಲ್ಲ. ಇವರಿಬ್ಬರು ರಾಜಸ್ಥಾನದ ಜೈಪುರದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಬಲವಾಗಿ ಹರಿದಾಡುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಇವರಿಬ್ಬರ ಮದುವೆಯನ್ನು ಡಿಸೆಂಬರ್ 7 ರಿಂದ 9 ರ ನಡುವೆ ನಡೆಯಲಿದೆ ಎಂಬ ವರದಿಗಳು ಬಲವಾಗಿ ಕೇಳಿ ಬರುತ್ತಿವೆ. ರಾಜಸ್ಥಾನದ ಸವಾಯಿ ಮಾಧೋಪುರದ ಸಿಕ್ಸ್ ಸೆನ್ಸ್ ಐಷಾರಾಮಿ ಹೋಟೆಲ್ ನಲ್ಲಿ ಭವ್ಯ ಕಾರ್ಯಕ್ರಮ ನಡೆಯಲಿದೆ. ದಂಪತಿಗಳ ಸ್ನೇಹಿತರು ಮತ್ತು ವ್ಯವಸ್ಥಾಪಕರು ಈಗಾಗಲೇ ಲಾಜಿಸ್ಟಿಕ್ಸ್ ಅನ್ನು ತಿಳಿದುಕೊಳ್ಳಲು ಈಗಾಗಲೇ ನಗರವನ್ನು ಸುತ್ತುತ್ತಿದ್ದಾರೆ ಎಂದು ಒಳಗಿನವರು ಬಹಿರಂಗಪಡಿಸಿದ್ದಾರೆ.

Vicky Kaushal-Katrina Kaif
v


ಮದುವೆಯ ಸಿದ್ಧತೆಯ ಭಾಗವಾಗಿ, ದಂಪತಿಗಳು ಮತ್ತು ಅವರ ತಂಡಗಳು ವಿವಿಧ ಅತಿಥಿಗಳಿಗಾಗಿ ಬಾಡಿಗೆ ಕಾರುಗಳ ಸೇವೆಗಳ ಮೂಲಕ ಹಲವಾರು ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಮುಂಗಡವಾಗಿ ಕಾಯ್ದಿರಿಸಿವೆ.

ವಿಕ್ಕಿ-ಕತ್ರಿನಾ ಅತಿಥಿ ಪಟ್ಟಿಯಲ್ಲಿ ಬಾಲಿವುಡ್ ನ ಯಾವ ಯಾವ ನಟ ನಟಿಯರು ಇದ್ದಾರೆ ಗೊತ್ತೇ?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ‘ಏಕ್ ಥಾ ಟೈಗರ್’ ನಿರ್ದೇಶಕ ಕಬೀರ್ ಖಾನ್ ಅವರ ಮನೆಯಲ್ಲಿ ಹುಶ್-ಹುಶ್ ರೋಕಾ ಸಮಾರಂಭವನ್ನು ಹೊಂದಿದ್ದರು. ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಹೊರತುಪಡಿಸಿ, ದಂಪತಿಗಳು ತಮ್ಮ ಉದ್ಯಮದ ಮಾರ್ಗದರ್ಶಕರು ಮತ್ತು ಅವರು ಕೆಲಸ ಮಾಡಿದ ಜನರನ್ನು ಆಹ್ವಾನಿಸುತ್ತಾರೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ಲೆಹೆಂಗಾದಲ್ಲಿ ಮಿಂಚಿದ ಕರಾವಳಿ ಸುಂದರಿ Pooja Hegde ಸಿಂಪಲ್​ ಲುಕ್ಸ್​ಗೆ ಅಭಿಮಾನಿಗಳು ಫಿದಾ..!

ಈ ಪಟ್ಟಿಯಲ್ಲಿ ಕರಣ್ ಜೋಹರ್, ಅಲಿ ಅಬ್ಬಾಸ್ ಜಾಫರ್, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ರೋಹಿತ್ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಆಡ್ವಾಣಿ, ವರುಣ್ ಧವನ್ ಮತ್ತು ನತಾಶಾ ದಲಾಲ್ ಮತ್ತು ಹೆಚ್ಚಿನವರು ಸೇರಿದ್ದಾರೆ. ಈ ಅತಿಥಿಗಳ ಪ್ರಯಾಣ, ವಾಸ್ತವ್ಯವನ್ನು ತುಂಬಾನೇ ಚೆನ್ನಾಗಿ ವ್ಯವಸ್ಥೆ ಮಾಡಲು ಸ್ಥಳೀಯ ಕಾರು ಬಾಡಿಗೆ ಮತ್ತು ಭದ್ರತಾ ಸೇವೆಗಳನ್ನು ಮುಂಚಿತವಾಗಿ ಕಾಯ್ದಿರಿಸಲಾಗಿದೆ.

ವಿಕ್ಕಿ-ಕತ್ರಿನಾ ಅವರ ಮದುವೆಗಾಗಿ ಕಾರು ಬಾಡಿಗೆ ಸೇವೆಗಳನ್ನು ಕಾಯ್ದಿರಿಸಲಾಗಿದೆ

"ಮದುವೆಯ ದಿನಾಂಕದ ಹತ್ತಿರದಲ್ಲಿ ಜೈಪುರದಲ್ಲಿ ಚಿತ್ರೀಕರಣ ನಡೆಸುತ್ತಿರುವ ಚಲನಚಿತ್ರ ಮತ್ತು ಟಿವಿ ಸಿಬ್ಬಂದಿಗಳು ಕಾರು ಬಾಡಿಗೆಯಲ್ಲಿ ಕೊರತೆಯನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಹೆಚ್ಚಿನ ಎಸ್‌ಯುವಿ ಮತ್ತು ಉನ್ನತ ಮಟ್ಟದ ಕಾರುಗಳನ್ನು ಮದುವೆಗಾಗಿ ಮುಂಚಿತವಾಗಿ ಕಾಯ್ದಿರಿಸಲಾಗಿದೆ. ವಿಮಾನ ನಿಲ್ದಾಣದಿಂದ ಹೋಟೆಲ್ ಗೆ ಪಿಕ್-ಅಪ್ ಮತ್ತು ಡ್ರಾಪ್ ಗಳನ್ನು ಮತ್ತು ಮದುವೆಯ ಇತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಬುಕಿಂಗ್ ಅನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತದೆ" ಎಂದು ಟಿವಿ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ: Desert Safari ಆಯ್ತ, ಈಗ ಬಿಕಿನಿ ತೊಟ್ಟು ದುಬೈನಲ್ಲಿ ಬಿಸಿಯೇರಿಸಿದ Janhvi Kapoor

ನಟ ವಿಕ್ಕಿ ಮತ್ತು ನಟಿ ಕತ್ರಿನಾ ಇಬ್ಬರೂ ಮದುವೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಈ ಇಬ್ಬರೂ ನಟ ನಟಿ ಇನ್ನೂ ಯಾವುದೇ ಅಧಿಕೃತ ವಿವಾಹ ಆಹ್ವಾನವನ್ನು ಯಾರಿಗೂ ನೀಡಿಲ್ಲ ಎಂದು ಹೇಳಲಾಗುತ್ತಿದೆ.
First published: