Katrina Vicky: ವಿರುಷ್ಕಾ ನೆರೆ ಮನೆಯವರಾಗಲಿದ್ದಾರೆ ವಿಕ್ಕಿ & ಕ್ಯಾಟ್; ಮುಂಬೈನಲ್ಲಿ ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿ

Vicky katrina News Home: ವಿಕ್ಕಿ-ಕೌಶಲ್ ಹಾಗೂ ಕತ್ರೀನಾ ಕೈಫ್ ಮನೆ ಖರೀದಿ ಮಾಡಿರುವ ಜುಹುವಿನ ಐಷರಾಮಿ ಅಪಾರ್ಟ್ ಮೆಂಟ್ ನಲ್ಲಿ ಹೀಗಾಗಲೇ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ-ಹಾಗೂ ವಿರಾಟ್ ಕೊಹ್ಲಿ ಸಹ 8ನೇ ಫ್ಲೋರ್ ನಲ್ಲಿ 2 ಫ್ಲಾಟ್ ಗಳನ್ನ ಹೊಂದಿದ್ದಾರೆ

ಕತ್ರೀನಾ ಕೈಫ್

ಕತ್ರೀನಾ ಕೈಫ್

 • Share this:
  ದೀಪಿಕಾ-ರಣವೀರ್ ಸಿಂಗ್(Deepika Ranveer)_ ಬಳಿಕ ಬಾಲಿವುಡ್(Bollywood) ನಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದ ವಿಕ್ಕಿ ಕೌಶಲ್(Vicky kaushal) ಹಾಗೂ ಕತ್ರೀನಾ ಕೈಫ್(Katrina kaif) ಕೊನೆಗೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ(Rajasthan) ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌ ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರಾಯಲ್ ವೆಡ್ಡಿಂಗ್ ಜರುಗಿದ್ದು, ಅಭಿಮಾನಿಗಳು(Fans) ಸೋಷಿಯಲ್ ಮೀಡಿಯಾದಲ್ಲಿ(Social Media) ಈ ಕ್ಯೂಟ್ ಜೋಡಿಗೆ ಶುಭಾಷಯಗಳ ಮಹಾಪೂರವನ್ನೆ ಹರಿಸ್ತಾ ಇದ್ದಾರೆ.. ಸದ್ಯ ಈ ಪ್ರಣಯ ಪಕ್ಷಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತ ಸುದ್ದಿಯಾದ ದಿನದಿಂದ ಹಿಡಿದು ನಿನ್ನೆ ಸಪ್ತಪದಿ ತುಳಿಯುವವರೆಗೂ ಈ ಜೋಡಿಗಳ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು… ಈ ಜೋಡಿ ಮದುವೆ ಎಲ್ಲಿ ಆಗುತ್ತೆ.. ಹೇಗೆ ಆಗುತ್ತೆ ಅಂತೆಲ್ಲ ಮದುವೆ ಬಗ್ಗೆ ಸಾಕಷ್ಟು ಕುತೂಹಲ ಎಲ್ಲರನ್ನ ಕಾಡ್ತಾ ಇತ್ತು.. ಆದ್ರೆ ಅದಕ್ಕೆಲ್ಲಾ ನಿನ್ನೆ ತೆರೆಬಿದ್ದಿದ್ದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹ ಬಂಧನಕ್ಕೆ ಜೋಡಿ ಒಳಾಗಿದೆ. ಇದರ ನಡುವೆ ಮದುವೆಯ ಬಳಿಕ ಸುಖ ಸಂಸಾರ ಮಾಡಲು ವಿಕ್ಕಿ-ಮತ್ತೆ ಕ್ಯಾಟ್ ಕೂಡ ಮುಂಚೆಯೇ ಪ್ರೀಪ್ಲಾನ್ಡ್ ಮಾಡಿ ಹೊಸ ಮನೆ ಕೂಡ ಖರೀದಿ ಮಾಡಿದ್ದು ಮದುವೆ ಬಳಿಕ ಅದೇ ಮನೆಯಲ್ಲಿ ವಾಸ ಮಾಡಲಿದ್ದಾರೆ

  ವಿರುಷ್ಕಾ ನೆರೆ ಮನೆಯವರಾಗಲಿದ್ದಾರೆ ವಿಕ್ಕಿ-ಕ್ಯಾಟ್

  ವಾಣಿಜ್ಯ ನಗರಿ ಮುಂಬೈನ ಜುಹುವಿನಲ್ಲಿ ಇರೋ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ಮದುವೆಯ ಬಳಿಕ ವಿಕ್ಕಿ ಕೌಶಲ್ ಹಾಗೂ ಕತ್ರೀನಾ ಕೈಫ್ ವಾಸ ಮಾಡಲಿದ್ದಾರೆ. ಸುಮಾರು 5 ವರ್ಷಗಳಿಗಾಗಿ ಕತ್ರಿನಾ ಹಾಗೂ ವಿಕ್ಕಿ ಈ ಅಪಾರ್ಟ್ ಮೆಂಟ್ ಖರೀದಿ ಮಾಡಿದ್ದು,ಸುಮಾರು 9 ಲಕ್ಷಕ್ಕೂ ಅಧಿಕ ಹಣವನ್ನ ಪ್ರತಿ ತಿಂಗಳು ಈ ಜೋಡಿ ಪಾಡಿಯಾಗಿ ಪಾವತಿ ಮಾಡಲಿದೆ.. ಅಲ್ಲದೆ ಹೀಗಾಗಲೇ 1.75 ಕೋಟಿರೂ.ಗೆ ಭದ್ರತಾ ಠೇವಣಿ ನೀಡಿ ವಿಕ್ಕಿ ಕೌಶಲ್ ಮನೆಯನ್ನು ಖರೀದಿಸಿದ್ದಾರೆ.

  ಇದನ್ನೂ ಓದಿ: ಸತಿ-ಪತಿಗಳಾದ ವಿಕ್ಕಿ-ಕತ್ರಿನಾ; ಇಲ್ಲಿದೆ ಬಾಲಿವುಡ್​ ತಾರಾ ಜೋಡಿ ಮದುವೆ ಫೋಟೋ

  ವಿಶೇಷ ಅಂದ್ರೆ ವಿಕ್ಕಿ-ಕೌಶಲ್ ಹಾಗೂ ಕತ್ರೀನಾ ಕೈಫ್ ಮನೆ ಖರೀದಿ ಮಾಡಿರುವ ಜುಹುವಿನ ಐಷರಾಮಿ ಅಪಾರ್ಟ್ ಮೆಂಟ್ ನಲ್ಲಿ ಹೀಗಾಗಲೇ ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ-ಹಾಗೂ ವಿರಾಟ್ ಕೊಹ್ಲಿ ಸಹ 8ನೇ ಫ್ಲೋರ್ ನಲ್ಲಿ 2 ಫ್ಲಾಟ್ ಗಳನ್ನ ಹೊಂದಿದ್ದಾರೆ.. ಹೀಗಾಗಿ ಕ್ಯಾಟ್ ಹಾಗೂ ವಿಕ್ಕಿ ಮದುವೆ ಬಳಿಕ ಈ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ..

  ವಿಶ್ ಮಾಡಿ ಕಾಲೆಳೆದ ಅನುಷ್ಕಾ ಶರ್ಮಾ

  ಇನ್ನೂ ಈ ಮುದ್ದಾದ ಜೋಡಿಗೆ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ಹೃತಿಕ್ ರೋಷನ್, ಪರಿಣಿತಿ ಚೋಪ್ರಾ, ನೇಹಾ ಧೂಪಿಯಾ, ಜಾನ್ವಿ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮದುವೆಯ ಶುಭಾಷಯ ತಿಳಿಸಿದ್ದಾರೆ.. ಜೊತೆಗೆ ಅನುಷ್ಕಾ ಶರ್ಮಾ ಸಹ ಕತ್ರೀನಾ ಹಾಗೂ ವಿಕ್ಕಿ ಕೌಶಲ್ ಗೆ ಮದುವೆ ಶುಭಾಷಯ ತಿಳಿಸಿದ್ದಾರೆ.. ಜೊತೆಗೆ ಹೊಸ ಮನೆಯ ಬಗ್ಗೆಯೂ ಅನುಷ್ಕಾ ಈ ಜೋಡಿಯ ಕಾಲೆಳೆದಿದ್ದಾರೆ. ನೀವಿಬ್ಬರು ಮದುವೆಯಾಗಿದ್ದಕ್ಕೆ ನಿಮಗೆ ಶುಭಾಷಯ..ಜೀವನ ಪೂರ್ತಿ ಹಾಗೂ ಹೊಂದಾಣಿಕೆ ಹಾಗೂ ಪ್ರೀತಿಯಿಂದ ನೀವಿಬ್ರು ಜೊತೆಗೆ ಇರಿ ಅಂತ ಹಾರೈಸಿರೋ ಅನುಷ್ಕಾ.. ಸದ್ಯ ನೀವು ಕೊನೆಗೂ ಮದುವೆಯಾಗಿದ್ದೀರಾ.. ಹೀಗಾಗಿ ಶೀಘ್ರವೇ ನೀವು ನಿಮ್ಮ ಹೊಸ ಮನೆಗೆ ಬರಲಿದ್ದೀರಾ.. ಹೀಗಾಗಿ ನಿಮ್ಮ ಮನೆಯಲ್ಲಿ ಆಗ್ತಾರ ಇರೋ ಕೆಲಸಗಳ ಶಬ್ದ ಇನ್ನೂ ಕೇಳಿ ಬರೋದಿಲ್ಲ ಅಂತ ಕಾಲೆಳೆದಿದ್ದಾರೆ.

  ಇದನ್ನೂ ಓದಿ: ಮದ್ವೆಗೆ ಕರೆಯದಿದ್ರೂ ತನ್ನ ಪರ್ಸನಲ್​ ಬಾಡಿಗಾರ್ಡ್​ ಕಳಿಸಿಕೊಟ್ಟ ಸಲ್ಮಾನ್​ ಖಾನ್​!

  ಕತ್ರಿನಾ ಹಾಗೂ ವಿಕ್ಕಿ ಮದುವೆಯಲ್ಲಿ ಬಾಲಿವುಡ್ ದಂಡು

  ಮದುವೆಯಾಗ್ತಾ ಇರೋ ವಿಷಯವನ್ನ ರಹಸ್ಯವಾಗಿ ಇಷ್ಟಷ್ಟೇ, ಮದುವೆಯಲ್ಲಿ ಭಾಗಿ ಆಗ್ತಾ ಇರೋ ಅತಿಥಿಗಳ ವಿಷಯವನ್ನ ಈ ಜೋಡಿ ರಹಸ್ಯವಾಗಿ ಇಟ್ಟಿತ್ತು.. ಹೀಗಾಗಿ ಯಾರು ಯಾರು ಕತ್ರಿನಾ-ಹಾಗೂ ವಿಕ್ಕಿ ಮದುವೆಯಲ್ಲಿ ಭಾಗಿ ಆಗಲಿದ್ದಾರೆ ಅನ್ನೋದು ಕೊನೆಕ್ಷಣದವರೆಗೂ ಯಾರಿಗೂ ತಿಳಿದಿರಲಿಲ್ಲ.. ಬಾಲಿವುಡ್ ನಲ್ಲಿ ವಿಕ್ಕಿ ಹಾಗೂ ಕತ್ರೀನಾ ತಮ್ಮದೆಯಾದ ಗೆಳೆಯರ ಬಳಗ ಹೊಂದಿರೋದ್ರಿಂದ್ದ ಈ ಜೋಡಿಯಾ ಮದುವೆಯಲ್ಲಿ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ, ಕಬೀರ್ ಖಾನ್ ಮತ್ತು ಮಿನಿ ಮಾಥುರ್, ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ಮತ್ತು ಅವರ ಪತ್ನಿ, ಮತ್ತು ನಟಿಯರಾದ ಶರ್ವರಿ ವಾಘ್ ಮತ್ತು ರಾಧಿಕಾ ಮದನ್ ಅವರು ವಿಕ್ಕಿ ಕೌಶಲ್ ಅವರ ಸಹೋದರ ಸನ್ನಿ ಅವರ ಸ್ನೇಹಿತರು, ವಿಕ್ಕಿ ಬಾಲ್ಯ ಸ್ನೇಹಿತೆ ನಟಿ ಮಾಳವಿಕಾ ಮೋಹನನ್ ಸೇರಿ ಹಲವರು ಭಾಗಿಯಾಗಿದ್ರು ಎನ್ನಲಾಗಿದೆ.
  Published by:ranjumbkgowda1 ranjumbkgowda1
  First published: