Vicky Kaushal-Katrina Kaif: ಇದೇ ಡಿಸೆಂಬರ್​ನಲ್ಲಿ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ವಿವಾಹ?

Vicky Kaushal-Katrina Kaif Marriage: ಬಾಲಿವುಡ್​ನ ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್​ ಮತ್ತು ನಟಿ ಕತ್ರಿನಾ ಕೈಫ್​​  ಅವರನ್ನು ಅಭಿಮಾನಿಗಳು ಹಿಂಬಾಲಿಸುತ್ತಿದ್ದಾರೆ. ಈ ಸ್ಟಾರ್​ ನಟ-ನಟಿಯರು ಏನೋ ಮಾಡಿದರು ವೈರಲ್ ಮಾಡುತ್ತಿದ್ದಾರೆ. ಇದೀಗ ಇವರಿಬ್ಬ ಮದುವೆ ಡಿಸೆಂಬರ್​ನಲ್ಲಿ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿದೆ.

Vicky Kaushal-Katrina Kaif

Vicky Kaushal-Katrina Kaif

  • Share this:
    ಸ್ಟಾರ್​ ನಟ- ನಟಿಯ ವಿಚಾರವು ಅಭಿಮಾನಿಗಳ ಕೈಗೆ ಸಿಕ್ಕರೆ ಸಾಕು ಅದು ವೈರಲ್​ ಆಗೋದು ಗ್ಯಾರಂಟಿ. ಅದರಲ್ಲೂ ನೆಚ್ಚಿನ ತಾರೆಯರ ವೈಯ್ಯಕ್ತಿಕ ಬದುಕಿನ ಸುದ್ದಿಯಂತೂ ಹೇಳೋದೆ ಬೇಡಾ. ತಮ್ಮಿಷ್ಟದ ಸ್ಟಾರ್​ಗಳ ಕುರಿತಾಗಿ ಏನೇ ಇದ್ದರು ಅದನ್ನು ನಿಮಿಷಾರ್ಧದಲ್ಲಿ ವೈರಲ್​ ಮಾಡುವಂತಹ ತಾಕತ್ತು ಅಭಿಮಾನಿಗಳಿದೆ. ಅದರಂತೆ ಬಾಲಿವುಡ್​ನಲ್ಲಿ ಹಲವು ತಿಂಗಳಿಂದ ನಟ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಬಗ್ಗೆ ಗಾಸಿಪ್ ಹರಿದಾಡುತ್ತಿದೆ. ಈ ಜೋಡಿಗಳು ಪ್ರೀತಿಯಲ್ಲಿ ಬಿದ್ದಿದ್ದು, ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ ಎಂಬೆಲ್ಲಾ ಸುದ್ದಿ ವೈರಲ್​ ಆಗುತ್ತಿದೆ. ಇತ್ತೀಚೆಗೆ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಗಾಳಿಸುದ್ದಿಯಾಗಿತ್ತು. ಆದರೀಗ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಅವರನ್ನು ಹಸೆಮಣೆ ಏರಿಸುವ ಮೂಲಕ ಇನ್ನು ಮೂರು ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎಂದು ಹರಿದಾಡುತ್ತಿದೆ.

    ಬಾಲಿವುಡ್​ನ ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್​ ಮತ್ತು ನಟಿ ಕತ್ರಿನಾ ಕೈಫ್​​  ಅವರನ್ನು ಅಭಿಮಾನಿಗಳು ಹಿಂಬಾಲಿಸುತ್ತಿದ್ದಾರೆ. ಈ ಸ್ಟಾರ್​ ನಟ-ನಟಿಯರು ಏನೋ ಮಾಡಿದರು ವೈರಲ್ ಮಾಡುತ್ತಿದ್ದಾರೆ. ಇದೀಗ ಇವರಿಬ್ಬ ಮದುವೆ ಡಿಸೆಂಬರ್​ನಲ್ಲಿ ನಡೆಯಲಿದೆ ಎಂಬ ಸುದ್ದಿ ವೈರಲ್ ಆಗಿದೆ.

    Alcohol: ಪುರುಷರು ಮಾತ್ರವಲ್ಲ…ಈ ರಾಜ್ಯದಲ್ಲಿ ಮಹಿಳೆಯರು ಹೆಚ್ಚು ಮದ್ಯ ಸೇವನೆ ಮಾಡ್ತಾರೆ!

    ಮೊದಲೇ ಹೇಳಿದಂತೆ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​​ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರ ಜೊತೆಗೆ ಕೆಲವರು ಸಿನಿಮಾದ ಮತ್ತು ಸಂದರ್ಶನ ವಿಡಿಯೋಗಳು, ಅವರಿಬ್ಬರ ಮಾತಿನ ದೃಶ್ಯವನ್ನು ಜೋಡಿಸಿಕೊಂಡು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇದು ಲವ್​​ ಎಂದು ವೈರಲ್ ಮಾಡುತ್ತಿದ್ದಾರೆ. ಮಾತ್ರವಲ್ಲದೆ, ಇವರಿಬ್ಬರು ಸರಿಯಾದ ಜೋಡಿಗಳು ಎಂದು ಪೋಸ್ಟ್ ಹರಿಯಬಿಡುತ್ತಿದ್ದಾರೆ.

    Vicky Kaushal-Katrina Kaif


    ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಅವರ ಕೆಲವು ಸಂದರ್ಶನದ ವಿಡಿಯೋ ಗಮನಿಸಿದಾಗ. ಈ ಜೋಡಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಅನುಮಾನ ಎಲ್ಲರನ್ನು ಕಾಡುವಂತೆ ಮಾಡಿದೆ. ಹಾಗಾಗಿ ಈ ಸ್ಟಾರ್​ ನಟ-ನಟಿ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದರಂತೆ ಇದೀಗ ಮುಂದಿನ ಡಿಸೆಂಬರ್​ ತಿಂಗಳಿನಲ್ಲಿ ಮದುವೆ ಆಗಲಿದ್ದಾರೆ ಎಂದು ಹರಿದಾಡುತ್ತಿದೆ. ಆದರೆ ಇದು ಗಾಳಿ ಸುದ್ದಿಯಾಗಿದೆ.

    ಹೊಸ ಎಲೆಕ್ಟ್ರಿಕ್​ ಮೊಪೆಡ್​ ಸಿದ್ಧಪಡಿಸಿದ BMW; ಒಂದು ಬಾರಿ ಚಾರ್ಜ್ ಮಾಡಿದರೆ 90 ಕಿ.ಮೀ ಕ್ರಮಿಸುತ್ತೆ!

    ವಿಕ್ಕಿ ಮತ್ತು ಕತ್ರಿನ ಉತ್ತಮ ಸ್ನೇಹಿತರು. ಇವರೆಗೆ ಮದುವೆ ವಿಚಾರ ಅಥವಾ ಪ್ರೀತಿ ವಿಚಾರದ ಬಗ್ಗೆ ಹೇಳಿಕೊಂಡಿಲ್ಲ. ಇಬ್ಬರು ತಮ್ಮ ಕೆರಿಯರ್​ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದರಂತೆ ಕತ್ರಿನಾ ಅವರು ಸಲ್ಮಾನ್​ ಖಾನ್​ ಅವರು ‘‘ಟೈಗರ್​ 3‘‘ಯಲ್ಲಿ ನಟಿಸುತ್ತಿದ್ದು, ಸದ್ಯ ಟರ್ಕಿಯಲ್ಲಿದ್ದಾರೆ. ವಿಕ್ಕಿ ಕೌಶಲ್​ ‘‘ಮಾನೆಕ್ಷಾ‘‘ಬಯೋಪಿಕ್​ಗಾಗಿ ತಯಾರಿ ನಡೆಸುತ್ತಿದ್ದಾರೆ
    Published by:Harshith AS
    First published: