ದೀಪಿಕಾ ರಿಜೆಕ್ಟ್ ಮಾಡಿದ್ದ ಆ ಹೀರೋ ಈಗ ಬಾಲಿವುಡ್ನಲ್ಲಿ ಹಾಟ್ ಫೇವರಿಟ್!
ಕೇವಲ ಮೂರೇ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಚಿತ್ರಗಳ ಭಾಗವಾಗಿ ಅವರು ಕಾಣಿಸಿಕೊಂಡಿದ್ದಕ್ಕೆ ಸಹಜವಾಗಿಯೇ ಅವರ ಖ್ಯಾತಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ದೀಪಿಕಾ ತಿರಸ್ಕರಿಸಿದ ಹೀರೋ ಈಗ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಿರುವುದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಬಹಳ ಶ್ರಮವಹಿಸಿ ಸಾಧನೆ ಮಾಡಿದ ಅನೇಕ ಕಲಾವಿದರಿದ್ದಾರೆ. ಅವರು ಗುರುತಿಸಿಕೊಳ್ಳುವುದಕ್ಕೂ ಮೊದಲು ಖ್ಯಾತ ಸಿನಿಮಾಗಳ ಆಡಿಷನ್ನಲ್ಲಿ ರಿಜೆಕ್ಟ್ ಆದ ಉದಾಹರಣೆಗಳೂ ಸಾಕಷ್ಟಿವೆ. ಈ ಸಾಲಿನಲ್ಲಿ ‘ಉರಿ’ ಚಿತ್ರದ ಖ್ಯಾತಿಯ ವಿಕ್ಕಿ ಕೌಶಲ್ ಕೂಡ ಒಬ್ಬರು. ಈ ಮೊದಲು ವಿಕ್ಕಿ ಜೊತೆ ತೆರೆಹಂಚಿಕೊಳ್ಳಲು ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ ‘ನೋ’ ಎಂದಿದ್ದರಂತೆ! ಈಗ ಅದೇ ಹೀರೋನ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 200 ಕೋಟಿ ರೂ. ಕ್ಲಬ್ ಸೇರಿದೆ.
ಸಂಜಯ್ ಲೀಲಾ ಬನ್ಸಾಲಿ ನಟನೆಯ ‘ಪದ್ಮವಾತ್’ ಚಿತ್ರಕ್ಕಾಗಿ ಆಡಿಷನ್ ಕರೆಯಲಾಗಿತ್ತು. ಪದ್ಮಾವತಿ ಪತಿ ರಾಜ ರವಲ್ ರತನ್ ಸಿಂಗ್ ಪಾತ್ರಕ್ಕಾಗಿ ಚಿತ್ರರಂಗದಲ್ಲಿ ಆಗತಾನೇ ಗುರುತಿಸಿಕೊಳ್ಳುತ್ತಿದ್ದ ವಿಕ್ಕಿ ಆಯ್ಕೆಯಾಗಿದ್ದರು. ಹಾಗಾಗಿ ದೀಪಿಕಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಂತೆ! “ವಿಕ್ಕಿ ಯಾರು ಎಂಬುದೇ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಹಾಗಾಗಿ, ಆ ಪಾತ್ರಕ್ಕೆ ಖ್ಯಾತ ಕಲಾವಿದನನ್ನು ಆಯ್ಕೆ ಮಾಡಿ,” ಎಂದು ಕೋರಿದ್ದರು.
ಇದನ್ನೂ ಓದಿ: ತಮಿಳಿನಲ್ಲಿ ಕಿರಿಕ್ ಮಾಡಿಕೊಂಡ 'ಅರ್ಜುನ್ ರೆಡ್ಡಿ'! ಛೇ, ಚಿತ್ರವನ್ನು ಮತ್ತೆ ಶೂಟ್ ಮಾಡ್ಬೇಕಂತೆ
ಹಾಗಾಗಿ ಕೊನೇ ಕ್ಷಣದಲ್ಲಿ ವಿಕ್ಕಿ ಕೈ ಬಿಟ್ಟು ಶಾಹಿದ್ ಕಪೂರ್ ಅವರನ್ನು ‘ಪದ್ಮಾವತ್’ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವಿಚಾರ ಈಗ ಮತ್ತೆ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ‘ಉರಿ’ ಚಿತ್ರದ ಯಶಸ್ಸು. ವಿಕ್ಕಿ ನಟನೆಯ ‘ಸಂಜು’ 300 ಕೋಟಿ ರೂ. ಕ್ಲಬ್ ಸೇರಿದೆ. ‘ರಾಜಿ’ ಚಿತ್ರ 100 ಕೋಟಿ ಬಾಚಿಕೊಂಡಿದೆ. ಈ ಚಿತ್ರದ ಯಶಸ್ಸಿನ ಹಿಂದೆ ಬೇರೆ ಬೇರೆ ಕಲಾವಿದರೂ ಇದ್ದರೂ. ಸೋಲೋ ಹೀರೋ ಆಗಿ ಕಾಣಿಸಿಕೊಂಡ ‘ಉರಿ’ 200 ಕೋಟಿ ರೂ. ಕ್ಲಬ್ ಸೇರಿರುವುದು ವಿಕ್ಕಿ ಖುಷಿ ಹೆಚ್ಚಿಸಿದೆ.ಕೇವಲ ಮೂರೇ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ದೊಡ್ಡ ಚಿತ್ರಗಳ ಭಾಗವಾಗಿ ಅವರು ಕಾಣಿಸಿಕೊಂಡಿದ್ದಕ್ಕೆ ಸಹಜವಾಗಿಯೇ ಅವರ ಖ್ಯಾತಿ ಹೆಚ್ಚಿಸಿದೆ. ಅಷ್ಟೇ ಅಲ್ಲ, ದೀಪಿಕಾ ತಿರಸ್ಕರಿಸಿದ ಹೀರೋ ಈಗ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಿರುವುದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!
ಉರಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನ ಪೋಷಿಸುತ್ತಿರುವ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದೇ ಕಥೆ ಇಟ್ಟುಕೊಂಡು ನಿರ್ದೇಶಕ ಆದಿತ್ಯ ಧಾರ್ ‘ಉರಿ’ ಚಿತ್ರ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಸದ್ಯ 200 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಕೇವಲ 45 ಕೋಟಿ ರೂ. ಬಜೆಟ್ನಲ್ಲಿ ಸಿದ್ಧಗೊಂಡ ಈ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಗಳಿಕೆ ಮಾಡಿರುವುದು ದಾಖಲೆಯೇ ಸರಿ.

Loading...
Loading...