Katrina Kaif - Vicky Kaushal ದಂಪತಿಗೆ ಮೊದಲ ಕ್ರಿಸ್​ಮಸ್​: ಪತ್ನಿಯನ್ನು ತಬ್ಬಿ ಹಿಡಿದ ಫೋಟೋ ವೈರಲ್​!

ಮೊದಲ ಬಾರಿಗೆ ಒಟ್ಟಿಗೆ ಕ್ರಿಸ್​ಮಸ್​(Christmas) ಆಚರಿಸಿದ್ದಾರೆ. ಈ ಸೆಲೆಬ್ರೆಷನ್​(Celebration) ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗುತ್ತಿವೆ. ಕತ್ರಿನಾ ಕೈಫ್​ ಅವರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ವಿಕ್ಕಿ ಕೌಶಲ್​ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ವಿಕ್ಕಿ ಕೌಶಲ್​-ಕತ್ರಿನಾ ಕೈಫ್​

ವಿಕ್ಕಿ ಕೌಶಲ್​-ಕತ್ರಿನಾ ಕೈಫ್​

  • Share this:
ಬಾಲಿವುಡ್​ನ(Bollywood) ಕ್ಯೂಟ್​ ಕಪಲ್​ ಅಂದರೆ ಎಲ್ಲರೂ ಕತ್ರಿನಾ ಕೈಫ್​(Katrina Kaif) ವಿಕ್ಕಿ ಕೌಶಲ್(Vicky Kaushal)​ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಅಷ್ಟರ ಮಟ್ಟಿಗೆ ಈ ಜೋಡಿಯನ್ನು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಬಾಲಿವುಡ್​ ಅಂಗಳದಲ್ಲಿ ಒಂದು ಜೋಡಿಯ ಮದುವೆ ವಿಚಾರ ಭಾರಿ ಚರ್ಚೆಯಾಗಿದೆ ಅಂದರೆ, ಅದು ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆ ವಿಚಾರ. ಈ ಹಿಂದೆ ಯಾವ ಜೋಡಿಯೂ ಆಗಿರದ ರೀತಿಯಲ್ಲಿ ಈ ಜೋಡಿ ಮದುವೆ(Marriage)ಯಾಗಿರುವುದು ಎಲ್ಲಿರಿಗೂ ಗೊತ್ತೆ ಇದೆ. ಇದೀಗ ದಂಪತಿ ಮೊದಲ ಬಾರಿಗೆ ಒಟ್ಟಿಗೆ ಕ್ರಿಸ್​ಮಸ್​(Christmas) ಆಚರಿಸಿದ್ದಾರೆ. ಈ ಸೆಲೆಬ್ರೆಷನ್​(Celebration) ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗುತ್ತಿವೆ. ಕತ್ರಿನಾ ಕೈಫ್​ ಅವರನ್ನು ತಬ್ಬಿಕೊಂಡಿರುವ ಫೋಟೋವೊಂದನ್ನು ವಿಕ್ಕಿ ಕೌಶಲ್​ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ರಿಸ್​ಮಸ್ ಟ್ರೀ(Christmas Tree) ಮುಂದೆ ನಿಂತು  ಇಬ್ಬರೂ ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದರು. ಇದೀಗ ಚಿತ್ರಗಳು ವೈರಲ್ ಆಗಿದ್ದು, ಕತ್ರಿನಾ ಕೈಫ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಕಂಡು ಫ್ಯಾನ್ಸ್​ ವ್ಹಾವ್​.. ಎಷ್ಟು ಮುದ್ದಾಗಿದೆ ಎಂದು ಕಮೆಂಟ್​ ಮಾಡುತ್ತಿದ್ದಾರೆ. 

ಹೊಸ ಮನೆಯಲ್ಲಿ ಮೊದಲ ಕ್ರಿಸ್​​ಮಸ್​!

ಇತ್ತೀಚೆಗೆ ಮದುವೆಯಾದ ಬಳಿಕ ಹೊಸ ಮನೆಗೆ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಶಿಫ್ಟ್​ ಆಗಿದ್ದರು. ಇದೀಗ ಹೊಸ ಮನೆಯಲ್ಲಿ, ಮೊದಲ ಕ್ರಿಸ್​ಮಸ್​ ಆಚರಿಸಿದ್ದಾರೆ. ವಿಕ್ಕಿ- ಕತ್ರಿನಾ ಹೊಸ ಮನೆಯಲ್ಲಿ ಮೊದಲ ಕ್ರಿಸ್​ಮಸ್ ಸಂಭ್ರಮ ಆಚರಿಸಿದ್ದಾರೆ ಎಂದು ಫ್ಯಾನ್ಸ್ ಸಂಭ್ರಮ ಪಟ್ಟಿದ್ದಾರೆ. ಇಷ್ಟು ಮುದ್ದಾಗಿರುವ ಜೋಡಿಯನ್ನು ಎಂದೂ ನಾನು ನೋಡಿಲ್ಲ ಎಂದು ನೆಟ್ಟಿಗನೊಬ್ಬ ಕಮೆಂಟ್​ ಮಾಡುತ್ತಿದ್ದಾನೆ. ವಿಕ್ಕಿ ಕೌಶಲ್​ ಈ ಹಿಂದೆ ತಾವೊಬ್ಬರೇ ಇರುವ ಫೋಟೋವೊಂದನ್ನು ಶೇರ್​​ ಮಾಡಿದ್ದರು. ಅದಕ್ಕೆ ನೆಟ್ಟಿಗರು ಒಬ್ಬರೇ ಇದ್ದೀರಾ? ಕತ್ರಿನಾ ಎಲ್ಲಿ ಎಂಬ ಕಮೆಂಟ್​ ಮಾಡಿದ್ದರು. ಇದೀಗ ಇಬ್ಬರು ಒಟ್ಟಿಗೆ ಇರುವ ಫೋಟೋ ಸಖತ್​ ವೈರಲ್​ ಆಗುತ್ತಿದೆ.ಇದನ್ನು ಓದಿ :  Urfi Javed ಮತ್ತೊಂದು ಹೊಸ ಅವತಾರ: ಚಿಂದಿ ಆಯುವವರೇ ಎಷ್ಟೋ ಮೇಲು ಎಂದ ನೆಟ್ಟಿಗರು!

ಕತ್ರಿನಾ ಕೈಫ್​ ಮುಂದಿನ ಸಿನಿಮಾ ‘ಮೆರ್ರಿ ಕ್ರಿಸ್​​ಮಸ್​’

ಕ್ರಿಸ್​ಮಸ್ ಸಂಭ್ರಮದಲ್ಲಿ ನಟಿ ಕತ್ರಿನಾ ಕೈಫ್​​ ಚಿತ್ರವನ್ನು ಘೋಷಿಸಿದ್ದಾರೆ. ದಕ್ಷಿಣ ಭಾರತದ ಅಭಿಮಾನಿಗಳೂ ಈ ಸುದ್ದಿ ಸಖತ್​ ಥ್ರಿಲ್​ ಕೊಟ್ಟಿದೆ. ಅದಕ್ಕೆ ಕಾರಣ ಖ್ಯಾತ ನಿರ್ದೇಶಕ  ಶ್ರೀರಾಮ್ ರಾಘವನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ವಿಜಯ್ ಸೇತುಪತಿ  ಹಾಗೂ ಕತ್ರಿನಾ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಥ್ರಿಲ್ಲರ್ ಚಿತ್ರಗಳಿಗೆ ಹೆಸರಾದ ಶ್ರೀರಾಮ್ ರಾಘವನ್ ಅವರೊಂದಿಗೆ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದೆ. ವಿಜಯ್ ಸೇತುಪತಿ ಅವರೊಂದಿಗೆ ತೆರೆ ಹಂಚಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಕತ್ರಿನಾ ಬರೆದುಕೊಂಡಿದ್ದರು.  ಈ ಚಿತ್ರಕ್ಕೆ ಮೆರ್ರಿ ಕ್ರಿಸ್​ಮಸ್​ ಎಂದು ಹೆಸರಿಡಲಾಗಿದೆ.
View this post on Instagram


A post shared by Katrina Kaif (@katrinakaif)

ಇದನ್ನು ಓದಿ : ಬಾಯ್‌ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್.. ಕಾರಣ ಇಲ್ಲಿದೆ

ಕತ್ರಿನಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳು!

2022ರಲ್ಲಿ ತೆರೆ ಕಾಣಲಿರುವ ‘ಮೆರ್ರಿ ಕ್ರಿಸ್​ಮಸ್’ ಚಿತ್ರ ವಿಜಯ್ ಸೇತುಪತಿ ಹಾಗೂ ಕತ್ರಿನಾ ಜತೆಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ. ಕೆಲ ದಿನಗಳ ಹಿಂದಷ್ಟೇ ಕತ್ರಿನಾ ಚಿತ್ರೀಕರಣದ ಸೆಟ್​ಗೆ ತೆರಳಿರುವ ಚಿತ್ರಗಳು ಲೀಕ್ ಆಗಿತ್ತು. ಇದೀಗ ಸ್ವತಃ ನಟಿ ಕ್ರಿಸ್​ಮಸ್ ದಿನದಂದು ಅದೇ ಹೆಸರಿನ ಚಿತ್ರವನ್ನು ಘೋಷಿಸಿದ್ದಾರೆ. ಸದ್ಯ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದ್ದು, ಕೆಲಸಗಳು ಭರದಿಂದ ಸಾಗುತ್ತಿವೆ. ಸಲ್ಮಾನ್ ನಟನೆಯ ‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಫರ್ಹಾನ್ ಅಖ್ತರ್ ನಿರ್ದೇಶನದ ಬಹುನಿರೀಕ್ಷಿತ ‘ಜೀ ಲೇ ಜರಾ’ ಚಿತ್ರದಲ್ಲೂ ಕತ್ರಿನಾ, ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾರೊಮದಿಗೆ ನಟಿಸುತ್ತಿದ್ದಾರೆ.
Published by:Vasudeva M
First published: